6, 6, 6, 6, 6.. ರಜತ್ ಪಾಟಿದಾರ್ ಏಟಿಗೆ ಹೈದರಾಬಾದ್ ಉಡೀಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲಿನ ಮೂಲಕ ತೀವ್ರ ಆಘಾತವನ್ನ ಎದುರಿಸಿತ್ತು. ಇದೀಗ ಅದೆಲ್ಲವನ್ನೂ ಮೀರಿ, ಸೋಲಿನ ಸುಳಿಯಿಂದ ಹೊರಗೆ ಬಂದಿದ್ದು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೆಡೆಮುರಿ ಕಟ್ಟಿದೆ. ಈ ಮೂಲಕ ಬರೋಬ್ಬರಿ 35 ರನ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನಿಂದಾಗಿ, 2024ರ ಐಪಿಎಲ್ ಟೂರ್ನಿ ಕಪ್ ಗೆಲ್ಲುವ ಆಸೆಯನ್ನು ಆರ್‌ಸಿಬಿ ಜೀವಂತವಾಗಿ ಇರಿಸಿಕೊಂಡಿದೆ.

ಆರ್‌ಸಿಬಿ ತಂಡವು ಇಂದು, ಗೆದ್ದೇ ಗೆಲ್ಲಬೇಕು ಎಂಬ ಒನ್‌ಲೈನ್ ಅಜೆಂಡಾ ಇಟ್ಟುಕೊಂಡೇ ಕ್ರಿಕೆಟ್ ಮೈದಾನಕ್ಕೆ ಬಂದಿತ್ತು. ಹೀಗೆ ಆಟ ಆರಂಭಿಸಿದ ಆರ್‌ಸಿಬಿ ತಂಡಕ್ಕೆ ಆರಂಭದಲ್ಲಿ, ಉತ್ತಮವಾಗಿ ರನ್ ಹರಿದು ಬಂದರೂ ನಂತರ ಸಂಕಷ್ಟದ ಪರಿಸ್ಥಿತಿ ಎದುರಾಗೇ ಬಿಟ್ಟಿತ್ತು. ಹೀಗೆಯೇ ನೋಡ ನೋಡುತ್ತಲೇ ಕುಸಿದು ಹೋಗುತ್ತಿದ್ದ ಆರ್‌ಸಿಬಿ ತಂಡದ ಸ್ಕೋರ್‌ಗೆ ಕಿಂಗ್ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ನೆರವಾಗಿ ನಿಂತರು. ಆ ಮೂಲಕವೇ ಆರ್‌ಸಿಬಿ ತಂಡ, 206 ರನ್ ಗಳಿಸಿ ಹೈದರಬಾದ್ ತಂಡಕ್ಕೆ ಸವಾಲಿನ ಮೊತ್ತ ನೀಡುವಲ್ಲಿ ಸಾಧ್ಯವೂ ಆಯಿತು. ಆದ್ರೆ 171 ರನ್‌ಗೆ ಹೈದರಾಬಾದ್ ತಂಡ ಹೀನಾಯ ಸೋಲು ಕಂಡಿತ್ತು. ಇದೇ ಪಂದ್ಯದಲ್ಲಿ ರಜತ್ ಪಾಟಿದಾರ್ 6, 6, 6, 6, 6 ಬಾರಿಸಿ ದಾಖಲೆ ಬರೆದರು.

Discover How Rajat Patidar Half Century Helped RCB To Create The Victory Against SRH

19 ಬಾಲ್ 50 ರನ್​!

ಅಂದಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟ್ಸ್ ಮನ್, ರಜತ್ ಪಾಟಿದಾರ್ ಕೇವಲ 19 ಎಸೆತದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಇಂದು ಮತ್ತೊಂದು ದಾಖಲೆಯ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ರಜತ್​ 20 ಎಸೆತದಲ್ಲಿ 5​ ಸಿಕ್ಸ್​ & 2 ಬೌಂಡರಿ ಮೂಲಕ 50 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೂ ಆರ್‌ಸಿಬಿ ತಂಡದ ಇಂದಿನ ಗೆಲುವಿನಲ್ಲಿ ಈ ಬ್ಯಾಟಿಂಗ್ ಭರ್ಜರಿ ಬೆಂಬಲ ನೀಡುತ್ತು. ಅದ್ರಲ್ಲೂ ವಿರಾಟ್ ಕೊಹ್ಲಿ ಜೊತೆ ಸೇರಿ ಒಂದು ಭರ್ಜರಿ ಪ್ರದರ್ಶನ ನೀಡಿದ ರಜತ್ ಪಾಟಿದಾರ್, ಆರ್‌ಸಿಬಿ ಅಭಿಮಾನಿಗಳ ಮನಸ್ಸು ಕೂಡ ಗೆದ್ದರು.

ಆರ್‌ಸಿಬಿ ಗೆಲುವಿನಿಂದ ಸಂಭ್ರಮ!

ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಇಂದು ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಣ್ಣು ಮುಚ್ಚಿಕೊಂಡು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗೆ ಬ್ಯಾಟಿಂಗ್ ಶುರು ಮಾಡಿದ ಆರ್‌ಸಿಬಿ ಬೆಂಗಳೂರು ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಈ ಸಮಯದಲ್ಲೇ ಮಧ್ಯದಲ್ಲಿ ಪರಿಸ್ಥಿತಿ ಒಂದಷ್ಟು ಆತಂಕ ಮೂಡಿಸಿತ್ತು. ಆದರೆ ಆಗ ಕೊಹ್ಲಿ ಅಂದ್ರೆ ಕಿಂಗ್ ವಿರಾಟ್ ಕೊಹ್ಲಿ ಅವರು ಗಟ್ಟಿಯಾಗಿ ನಿಂತು ಇಡೀ ಸನ್ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಬುಡವನ್ನೇ ಅಲ್ಲಾಡಿಸಿದರು. ಕೇವಲ 43 ಬಾಲ್ ಆಡಿ, ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 51 ರನ್ ಗಳಿಸಿದರು. ಈ ವೇಲೆ ಕಿಂಗ್ ವಿರಾಟ್ ಕೊಹ್ಲಿಗೆ ಸಾಥ್ ನೀಡಿದ್ದ ರಜತ್ ಪಾಟಿದಾರ್ 20 ಎಸೆತದಲ್ಲಿ 5​ ಸಿಕ್ಸ್​ & 2 ಬೌಂಡರಿ ಬಾರಿಸಿ ಮಿಂಚಿದರು.

2024ರಲ್ಲಿ ಆರ್‌ಸಿಬಿ ಕಪ್ ಗೆಲ್ಲುತ್ತಾ?

ಆರ್‌ಸಿಬಿ ತಂಡ 2024ರ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲಲು ಈಗಲೂ ಅವಕಾಶ ಇದೆ. ಆದರೆ ಆರ್‌ಸಿಬಿ ತಂಡ ಇನ್ನುಳಿದ 5ಕ್ಕೆ 5 ಪಂದ್ಯಗಳನ್ನ ಗೆಲ್ಲಲೇಬೇಕು. ಇದು ಮಾತ್ರವಲ್ಲ ರಾಜಸ್ಥಾನ ರಾಯಲ್ಸ್ & ಕೆಕೆಆರ್ ತಂಡಗಳು ಇನ್ನುಳಿದ ಎಲ್ಲಾ ಪಂದ್ಯ ಗೆಲ್ಲಬೇಕು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಕೇವಲ 2 ಪಂದ್ಯ ಮಾತ್ರ ಗೆಲ್ಲಬೇಕು. ಆ ನಂತರ ಲಖನೌ ತಂಡವು ಕೇವಲ ಒಂದೇ ಒಂದು ಪಂದ್ಯ ಗೆಲ್ಲಬೇಕು. ಆಗ ಮಾತ್ರ ಆರ್‌ಸಿಬಿ ತಂಡಕ್ಕೆ ಮುಂದಿನ ಹಂತ ತಲುಪಲು ಅವಕಾಶ ಸಿಗಲಿದೆಯಂತೆ. ಈ ಬಗ್ಗೆ ತಜ್ಞರು ಚರ್ಚೆಯ ಮಾಡಿದ್ದು, ಆರ್‌ಸಿಬಿ ಅಭಿಮಾನಿಗಳು ಇದರಿಂದ ಫುಲ್ ಖುಷ್ ಆಗಿದ್ದಾರೆ.

ಕೊಹ್ಲಿ ವಿರೋಧಿಗಳ ಮಾತು ಏನು?

ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಗೆದ್ದಿದ್ದರೂ ಕೊಹ್ಲಿ ವಿರುದ್ಧವಾಗಿ, ಕೆಲವರು ಇದೀಗ ಮಾತನಾಡುತ್ತಿದ್ದಾರೆ. ಈ ವಿಚಾರ ದೊಡ್ಡ ಸದ್ದನ್ನು ಕೂಡ ಮಾಡುತ್ತಿದೆ. ಕೇವಲ 43 ಬಾಲ್ ಆಡಿ, ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 51 ರನ್ ಗಳಿಸಿದರು. ಹೀಗಿದ್ದರೂ ವಿರಾಟ್ ಕೊಹ್ಲಿ, ಸ್ಲೋ ಬ್ಯಾಟಿಂಗ್ ಆಡಿದ್ದಾರೆ ಅಂತಾ ವಿರೋಧಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ವಿಚಾರದ ಕುರಿತಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದ್ದು. ವಿರಾಟ್ ಕೊಹ್ಲಿ ವಿರೋಧಿ ಗ್ಯಾಂಗ್, ವಿರಾಟ್ ಕೊಹ್ಲಿ ಕ್ರಿಕೆಟ್ ಅಲ್ಲ ಕುಂಟೆಬಿಲ್ಲೆ ಆಡಲಿ ಅಂತಾ ಪೋಸ್ಟ್ ಹಾಕುತ್ತಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ವಿರುದ್ಧ ಮಾತನಾಡುತ್ತಿರುವ ವಿರೋಧಿಗಳಿಗೆ, ಆರ್‌ಸಿಬಿ ಅಭಿಮಾನಿ ಬಳಗ ಕೂಡ ಚಳಿ ಬಿಡಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+