ಆಟದಲ್ಲೂ ಸೈ, ಅಂದದಲ್ಲೂ ಸೈ: ಥೇಟ್ ಆರ್‌ಸಿಬಿಯ ಎಲ್ಲಿಸ್ ಪೆರ್ರಿಯಂತಿರುವ ಭಾರತೀಯ ಮೂಲದ ಆಸಿಸ್‌ನ ಇರಾ ಏರಿ

Ira Aery: ಭಾರತ ತಂಡದ ಪರ ಅಂಡರ್ 19 ವಿಶ್ವಕಪ್‌ನಲ್ಲಿ ಆಕ್ರಮಣಕಾರಿ ಆಟ ಆಡಿ 15 ವರ್ಷದ ವೈಭವ್ ಸೂರ್ಯವಂಶಿ ಅವರು ಇಡೀ ಕ್ರಿಕೆಟ್‌ ಜಗತ್ತನ್ನೇ ತನ್ನತ್ತ ತಿರುಗಿನೋಡುವಂತೆ ಮಾಡಿದ್ದಾರೆ. ಇಂತಹದ್ದೇ ಸಾಧನೆಯನ್ನು ಆಸ್ಟೇಲಿಯಾದ ಪರ ಭಾರತ ಮೂಲದ ಆಗಟರ್ತಿಯೊಬ್ಬರು ಮಾಡಿದ್ದಾರೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ನಲ್ಲಿ ಸದ್ಯ ಭಾರತೀಯ ಮೂಲದ ಯುವ ಆಟಗಾರ್ತಿಯೊಬ್ಬರ ಹೆಸರು ಭಾರಿ ಸದ್ದು ಮಾಡುತ್ತಿದೆ. ಅವರೇ 17 ವರ್ಷದ ಆಲ್ ರೌಂಡರ್ ಇರಾ ಏರಿ. ಆಸ್ಟ್ರೇಲಿಯಾದ ಅಂಡರ್-19 ಮಹಿಳಾ ಕ್ರಿಕೆಟ್ ತಂಡದಲ್ಲಿ ತಮ್ಮ ಅತ್ಯದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಇವರು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಹೊಸ ಕ್ರಶ್ ಆಗಿ ಹೊರಹೊಮ್ಮಿದ್ದಾರೆ.

Indian-Origin Ira Aeri Shines for Australia U19 Next Big Cricket Star After Vaibhav Sooryavanshi

ಯಾರು ಈ ಇರಾ ಏರಿ?

ಇರಾ ಏರಿ ಫೆಬ್ರವರಿ 25, 2009ರಂದು ಆಸ್ಟ್ರೇಲಿಯಾದ ವಿಕ್ಟೋರಿಯಾದ ಹೈಡೆಲ್ಬರ್ಗ್‌ನಲ್ಲಿ ಜನಿಸಿದರು. ಇವರ ಕುಟುಂಬ ಭಾರತೀಯ ಮೂಲದ್ದಾಗಿದ್ದು, ಆಸ್ಟ್ರೇಲಿಯಾದಲ್ಲಿ ನೆಲೆಸಿದೆ. ಬಾಲ್ಯದಿಂದಲೇ ಕ್ರಿಕೆಟ್‌ನತ್ತ ಅಪಾರ ಒಲವು ಹೊಂದಿದ್ದ ಇವರು ಸ್ಥಳೀಯ ಕ್ಲಬ್‌ಗಳ ಪರ ಆಡುತ್ತಾ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡು ಗಮನ ಸೆಳೆದರು. ಶಾಲಾ ಮಟ್ಟದ ಟೂರ್ನಿಗಳಲ್ಲಿ ಅವರು ನೀಡಿದ ಸ್ಥಿರ ಪ್ರದರ್ಶನ ತರಬೇತುದಾರರ ಮೆಚ್ಚುಗೆಗೆ ಪಾತ್ರವಾಗಿತ್ತು.

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?

ಇರಾ ಅವರ ಕ್ರಿಕೆಟ್ ಪಯಣ ಅಧಿಕೃತವಾಗಿ ಆರಂಭವಾಗಿದ್ದು ವಿಕ್ಟೋರಿಯಾ ವೆಸ್ಟರ್ನ್ ರೀಜನ್ ಜೂನಿಯರ್ ಕ್ರಿಕೆಟ್ ಅಸೋಸಿಯೇಷನ್ ಮೂಲಕ. ಕಠಿಣ ಪರಿಶ್ರಮ, ಅತ್ಯುತ್ತಮ ಫಿಟ್ನೆಸ್ ಮತ್ತು ಆಟದ ಮೇಲಿನ ಅಪಾರ ಆಸಕ್ತಿಯಿಂದ ಅವರು ಶೀಘ್ರದಲ್ಲೇ ರಾಜ್ಯ ಮಟ್ಟದ ತಂಡಗಳಲ್ಲಿ ಸ್ಥಾನ ಪಡೆದರು. ನಂತರ ತಮ್ಮ ವೃತ್ತಿಜೀವನದ ಮೈಲಿಗಲ್ಲಾಗಿ ಆಸ್ಟ್ರೇಲಿಯಾ ಮಹಿಳಾ ಅಂಡರ್-19 ತಂಡಕ್ಕೆ ಆಯ್ಕೆ ಆದರು.

ತ್ರಿಕೋನ ಸರಣಿಯಲ್ಲಿ ವಿಕೆಟ್ ಬೇಟೆ

ಇತ್ತೀಚೆಗಷ್ಟೇ ಬಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಶ್ರೀಲಂಕಾ ಅಂಡರ್-19 ತಂಡಗಳ ನಡುವೆ ನಡೆದ ತ್ರಿಕೋನ ಸರಣಿಯಲ್ಲಿ ಇರಾ ಏರಿ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ಇಡೀ ಟೂರ್ನಿಯಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಅವರು ಒಟ್ಟು 13 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒತ್ತಡದ ಪರಿಸ್ಥಿತಿಯಲ್ಲೂ ವಿಕೆಟ್ ಪಡೆಯುವ ಅವರ ಕೌಶಲ್ಯವು ಕ್ರಿಕೆಟ್ ಆಯ್ಕೆಗಾರರ ಗಮನ ಸೆಳೆದಿದೆ.

ಉತ್ತಮ ಫಾರ್ಮ್‌ನಲ್ಲಿರುವ ಇರಾ ಏರಿ

ಸದ್ಯದ ಫಾರ್ಮ್ ಹಾಗೂ ಆಲ್ ರೌಂಡ್ ಸಾಮರ್ಥ್ಯವನ್ನು ಗಮನಿಸುತ್ತಿರುವ ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆಗಾರರು ಇರಾ ಅವರ ಮೇಲೆ ಕಣ್ಣಿಟ್ಟಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಬಲ್ಲ ಸಾಮರ್ಥ್ಯ ಇರುವುದರಿಂದ ಅವರು ಶೀಘ್ರದಲ್ಲೇ ಆಸಿಸ್ ಸೀನಿಯರ್ ಮಹಿಳಾ ತಂಡಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ.

ಆರ್‌ಸಿಬಿಯ ಎಲ್ಲಿಸ್ ಪೆರ್ರಿಗೆ ಹೋಲಿಕೆ

ಮೈದಾನದಲ್ಲಿನ ಆಟದ ಜೊತೆಗೆ ತಮ್ಮ ಆಕರ್ಷಕ ಲುಕ್ ಹಾಗೂ ವಿಶಿಷ್ಟ ಶೈಲಿಯಿಂದಾಗಿ ಇರಾ ಏರಿ ಅವರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅನೇಕರು ಇವರನ್ನು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರಿ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ಇರಾ ತಮ್ಮದೇ ಆದ ವಿಶಿಷ್ಟ ಪ್ರತಿಭೆಯ ಮೂಲಕ ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಚಾಪು ಮೂಡಿಸುತ್ತಿದ್ದಾರೆ. ಭವಿಷ್ಯದ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಈ ಭಾರತೀಯ ಮೂಲದ ಯುವತಿ ವಿಶ್ವದಾದ್ಯಂತ ಹೊಸ ಕ್ರಿಕೆಟ್ ಕ್ರಶ್ ಆಗಿ ಸಖತ್ ಸುದ್ದಿಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+