ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!

ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ನಡೆದ ದಾಳಿಯಲ್ಲಿ ಉಗ್ರರ ಕೈವಾಡ ಇಲ್ಲ, ಆದ್ರೆ ಇದರ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ ಅನ್ನೋ ಮಾತನ್ನು ರಷ್ಯಾ ಮತ್ತೊಮ್ಮೆ ಪ್ರತಿಪಾದನೆ ಮಾಡಿದೆ. ಈ ಮೂಲಕ ಐಎಸ್ ಉಗ್ರರು ಈ ಕೆಲಸ ಮಾಡಿಲ್ಲ ಆದರೆ ಈ ಕೃತ್ಯದ ಹಿಂದೆ ಅದೇ ಉಕ್ರೇನ್ ಕೈವಾಡ ಇದೆ ಅನ್ನೋದನ್ನೂ ರಷ್ಯಾ ಮತ್ತೊಮ್ಮೆ ಹೇಳಿದೆ. ಇದು ಎರಡೂ ದೇಶಗಳ ನಡುವೆ ತಿಕ್ಕಾಟ ಮತ್ತಷ್ಟು ಜೋರಾಗುವಂತೆ ಮಾಡಿದೆ.

ರಷ್ಯಾ ರಾಜಧಾನಿ ಮಾಸ್ಕೋ ನಗರದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ನುಗ್ಗಿ, 143 ನಾಗರಿಕರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದ ಉಗ್ರರು ಇಡೀ ರಷ್ಯಾದಲ್ಲಿ ಭಯ ಹುಟ್ಟಿಸಿದ್ದಾರೆ. ಇದೇ ಕಾರಣಕ್ಕೆ ರಷ್ಯಾ ಕೂಡ ಸಿಕ್ಕಾಪಟ್ಟೆ ಕೋಪಗೊಂಡು ಉಕ್ರೇನ್ ವಿರುದ್ಧ ಆಕ್ರೋಶ ಹೊರಹಾಕಿ, ಯುದ್ಧದ ಭೀಕರತೆ ಹೆಚ್ಚಿಸುತ್ತಿದೆ. ಆದರೆ ಉಕ್ರೇನ್ ಮಾತ್ರ ತಾನು ಈ ತಪ್ಪು ಮಾಡಿಲ್ಲ, ಹಾಗೇ ಮಾಸ್ಕೋ ದಾಳಿಯಲ್ಲಿ ಉಗ್ರರ ಕೃತ್ಯ ಇದೆ. ನಮ್ಮಿಂದ ಈ ಪ್ರಮಾದ ಆಗಿಲ್ಲ ಎನ್ನುತ್ತಿದೆ. ಹೀಗೆ ಉಕ್ರೇನ್ ಹೇಳುತ್ತಿದ್ದರೂ ರಷ್ಯಾ ಮಾತ್ರ ತನ್ನ ಆರೋಪ ಮುಂದುವರಿಸಿದೆ.

Russia Is Very Angry About The Attack On Moscow City

ಹೇಗಿದೆ ಗೊತ್ತಾ ಯುದ್ಧದ ತೀವ್ರತೆ?

ರಷ್ಯಾ ರೊಚ್ಚಿಗೆದ್ದಿದ್ದು ಯುದ್ಧವು ಮತ್ತೊಂದು ಭೀಕರ ಹಂತಕ್ಕೆ ತಲುಪುವ ಆತಂಕ ಮನೆಮಾಡಿದೆ. ಈಗಾಗಲೇ ಉಕ್ರೇನ್ ದೇಶದ ಪ್ರಮುಖ ನಗರಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದು ರಷ್ಯಾ ಸೇನೆ ತನ್ನ ದಾಳಿ ಮತ್ತಷ್ಟು ವೇಗವಾಗಿ ನಡೆಸುತ್ತಿದೆ. ವಿದ್ಯುತ್ ಇಲ್ಲದೆ ಈಗಾಗಲೇ ಉಕ್ರೇನ್‌ನ ಹಲವು ನಗರಗಳ ಜನರು ಪರದಾಡಿ ಹೋಗಿದ್ದು ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಭೀಕರವಾಗುವ ಮುನ್ಸೂಚನೆ ಸಿಕ್ಕಿದೆ. ಇದೇ ಸಮಯದಲ್ಲಿ ಖುದ್ದು ರಷ್ಯಾ ವಿದೇಶಾಂಗ ಇಲಾಖೆ ಸ್ಫೋಟಕ ಆರೋಪ ಮಾಡಿದ್ದು, ಈ ಮೂಲಕ ತಾವು ಸೇಡು ತೀರಿಸಿಕೊಳ್ಳಲು ಸಿದ್ಧ ಎಂಬ ಸಂದೇಶ ರವಾನೆ ಮಾಡಿದೆ.

ಅಟ್ಯಾಕ್ ಮಾಡಿದ್ದು ಯಾರು?

ಕೆಲವು ದಿನಗಳ ಹಿಂದಷ್ಟೇ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಉಗ್ರರ ದಾಳಿ ನಡೆದಿತ್ತು. ಮಾಸ್ಕೋ ಕ್ರಾಕಸ್ ಸಿಟಿ ಹಾಲ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ನುಗ್ಗಿದ್ದ ಉಗ್ರರು ಮನಸ್ಸಿಗೆ ಬಂದಂತೆ ಗುಂಡು ಹಾರಿಸಿ ನೂರಾರು ಜನರ ಹತ್ಯೆ ಮಾಡಿದ್ದಾರೆ. ಸಾವಿರಾರು ಜನಗಳು ಸೇರಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 143 ಜನರನ್ನು, ಐಎಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಜೊತೆಗೆ 187 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಸಮಯದಲ್ಲಿ, ದಾಳಿ ನಡೆಸಿರುವ ಒಟ್ಟು 11 ಉಗ್ರರನ್ನು ರಷ್ಯಾ ಸೇನೆ ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದೆ. ಹೀಗೆ ಎಲ್ಲೆಲ್ಲೂ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+