ರಷ್ಯಾ ವಿರುದ್ಧ 50 ಡ್ರೋನ್ ಬಳಸಿ ಉಕ್ರೇನ್ ಡೆಡ್ಲಿ ಅಟ್ಯಾಕ್!

ರಷ್ಯಾ & ಉಕ್ರೇನ್ ನಡುವೆ ಕಿತ್ತಾಟ ಮುಂದುವರಿದಿದೆ, ಒಬ್ಬರು ದಾಳಿ ಮಾಡಿದರೆ ಅದಕ್ಕೆ ಪ್ರತ್ಯುತ್ತರ ನೀಡುವ ಸಂಪ್ರದಾಯ ಎರಡೂ ದೇಶಗಳ ನಡುವೆ ನಡೆಯುತ್ತಿದೆ. ಉಕ್ರೇನ್ ಸೇನೆ ಇದೇ ರೀತಿ ಡೆಡ್ಲಿ ಅಟ್ಯಾಕ್ ಮಾಡಿದೆ ಅಂತಾ ಇದೀಗ ರಷ್ಯಾ ಆರೋಪ ಮಾಡಿದೆ. ಅರೆರೆ, ಹಾಗಾದ್ರೆ ಉಕ್ರೇನ್ ಇದೀಗ ದಾಳಿ ಮಾಡಿದ್ದು ಎಲ್ಲಿ? ರಷ್ಯಾಗೆ ಇದರಿಂದಾಗಿ ಏನೆಲ್ಲಾ ಹಾನಿ ಆಗಿದೆ? ಮುಂದೆ ಓದಿ.

ಇದೀಗ ರಷ್ಯಾ ದೇಶದ ಗಡಿಭಾಗ ರೋಸ್ಟೊವ್‌ ಪ್ರದೇಶದ ಮೇಲೆ ಉಕ್ರೇನ್‌ ಸೇನೆ 50ಕ್ಕೂ ಹೆಚ್ಚು ಡ್ರೋನ್‌ ಬಳಸಿ ಭೀಕರ ದಾಳಿ ಮಾಡಿದೆ ಎಂದು ಮಾಸ್ಕೊದ ರಕ್ಷಣಾ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಕಳೆದ ಹಲವು ತಿಂಗಳಿಂದ ನಿರಂತರವಾಗಿ ಇದೇ ರೀತಿ ಡ್ರೋನ್ ಬಳಸಿ ದಾಳಿ ಮಾಡುತ್ತಿದೆ ಉಕ್ರೇನ್. ಇದನ್ನ ರಷ್ಯಾ ಸೇನೆ ಕೂಡ ನಿಭಾಯಿಸುತ್ತಿದೆ, ಆದರೆ ಇತ್ತೀಚೆಗಷ್ಟೇ ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಗ್ರರ ದಾಳಿ ನಡೆದಿತ್ತು. ಆ ನಂತರ ನಡೆದಿರುವ ಅತಿ ಭೀಕರ ದಾಳಿ ಇದಾಗಿದೆ. ಹೀಗಾಗಿ ಉಕ್ರೇನ್ ವಿರುದ್ಧ ರಷ್ಯಾ ಮತ್ತಷ್ಟು ರೊಚ್ಚಿಗೆದ್ದಿದೆ.

Russian Military Alleged That The Ukraine Is Attacked With 50 Drones In Border Area Of Russia

ಗಡಿ ಪ್ರದೇಶದಿಂದ 100 ಕಿ.ಮೀ...

ಇದೀಗ ರಷ್ಯಾ ದೇಶದ ಗಡಿ ಪ್ರದೇಶದಿಂದ 100 ಕಿ.ಮೀ. ದೂರದಲ್ಲಿರುವ ಮೊರೊಜೊವಾಸ್ಕಿ ಜಿಲ್ಲೆ ಪ್ರವೇಶಿಸಿದ್ದ 44 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ತಿಳಿಸಿದ್ದು, ಇದೇ ವೇಳೆ ಕುರ್‌ಸ್ಕ್, ಬೆಲ್‌ಗೊರೊಡ್‌, ಕ್ರಸ್ನೊಡರ್‌ ಮತ್ತು ಸರಟೋವ್‌ ಪ್ರದೇಶಗಳ ಮೇಲೆ 9 ಡ್ರೋನ್‌ ಅಟ್ಯಾಕ್‌ನ ಮಾಡಿವೆ ಅಂತಾ ಕೂಡ ರಷ್ಯಾದ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಭೀಕರ ಹಂತಕ್ಕೆ ಬಂದು ನಿಂತಾಗಿದೆ. ಈಗಾಗಲೇ 2 ವರ್ಷ ಮುಗಿಸಿ 3ನೇ ವರ್ಷಕ್ಕೆ ಕಾಲಿಟ್ಟಿರುವ ರಷ್ಯಾ & ಉಕ್ರೇನ್ ಯುದ್ಧ ಇದೀಗ ಮತ್ತಷ್ಟು ಭೀಕರವಾಗುತ್ತಾ ಭಯವನ್ನು ಹುಟ್ಟಿಸಿದೆ.

6 ಯುದ್ಧ ವಿಮಾನ ನಾಶ?

ಮತ್ತೊಂದು ಕಡೆ ಡ್ರೋನ್‌ ದಾಳಿ ಮೂಲಕ ರಷ್ಯಾದ 6 ಯುದ್ಧ ವಿಮಾನ ನಾಶಪಡಿಸಲಾಗಿದೆ ಅಂತಾ ಉಕ್ರೇನ್ ಹೇಳಿಕೊಂಡಿದೆ. ಜೊತೆಗೆ ರಷ್ಯಾ ಸೇನೆಗೆ ಸೇರಿದ 8 ಯುದ್ಧ ವಿಮಾನಗಳಿಗೆ ಹಾನಿ ಮಾಡಲಾಗಿದೆ ಅಂತಾ ಕೂಡ ಉಕ್ರೇನ್ ಹೇಳಿರುವುದು ರಷ್ಯಾ ಸೇನೆಯನ್ನ ಕೆರಳಿಸಿದೆ. ಈ ಮೂಲಕ ರಷ್ಯಾ ಸೇನೆ ಇದೀಗ ಕೌಂಟರ್ ಅಟ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಉಕ್ರೇನ್ ಸೇನೆಗೆ ಪಾಠ ಕಲಿಸಲು ರಷ್ಯಾ ಸೇನೆ ಸಿದ್ಧತೆ ನಡೆಸುತ್ತಿದೆ.

Russian Military Alleged That The Ukraine Is Attacked With 50 Drones In Border Area Of Russia

ಒಟ್ನಲ್ಲಿ ಮನುಷ್ಯ ಎಷ್ಟೇ ಸಮಸ್ಯೆ ಆದರೂ ಯುದ್ಧಗಳಿಂದ ಬುದ್ಧಿ ಕಲಿಯೋದಿಲ್ಲ ಎಂಬ ಮಾತು ಮತ್ತೆ ಪ್ರೂವ್ ಆಗುತ್ತಿದೆ. ಇಷ್ಟೆಲ್ಲಾ ಸರ್ವನಾಶ ಆಗಿದ್ದರೂ ರಷ್ಯಾ & ಉಕ್ರೇನ್ ಹೀಗೆ ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿರುವುದು ದುರದೃಷ್ಟಕರ. ಮತ್ತೊಂದು ಕಡೆ ಇವರ ಈ ತಿಕ್ಕಾಟದಲ್ಲಿ ಅಮಾಯಕ ಜನರು ನರಳಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್ ಜನರಿಗೆ ಭವಿಷ್ಯವೇ ಮಂಕಾಗಿ ಹೋಗಿದ್ದು, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+