ರಷ್ಯಾ ರಿವೇಂಜ್: ಕತ್ತಲೆಯಲ್ಲಿ ಪರದಾಡಿದ ಉಕ್ರೇನ್ ಜನ!
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆ ಆದ ಬಳಿಕ ಉಕ್ರೇನ್‌ಗೆ ಚಳಿ ಬಿಡಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದಲೂ ನಡೆಯುತ್ತಿರುವ ರಷ್ಯಾ & ಉಕ್ರೇನ್ ಯುದ್ಧ ಈಗ ಮತ್ತೊಂದು ತಿರುವು ಪಡೆದಿದೆ. ಪುಟಿನ್ ಅವರು ರಷ್ಯಾದ ಸೇನೆಗೆ ಪೂರ್ತಿ ಅಧಿಕಾರ ಕೊಟ್ಟು ಉಕ್ರೇನ್ ವಿರುದ್ಧ ದಾಳಿಗೆ ತಂತ್ರ ರೂಪಿಸಿದ್ದಾರೆ. ಹೀಗೆ ಉಕ್ರೇನ್ ಪರಿಸ್ಥಿತಿ ಕೈಮೀರಿ ಹೋಗಿರುವಾಗಲೇ ಅಲ್ಲಿನ ನಗರಗಳು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿ ಹೋಗಿವೆ.
ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿಯ ಹೆಚ್ಚಿಸುತ್ತಿದ್ದು, ಹೀಗೆ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಈ ಯುದ್ಧಕ್ಕೆ ಈವರೆಗೆ 50000 ನಾಗರಿಕರು ಬಲಿಯಾಗಿ, ಉಕ್ರೇನ್‌ನ 70,000 ಸೈನಿಕರು ಜೀವ ಬಿಟ್ಟಿದ್ದಾರೆ ಎಂಬುದು ಉಕ್ರೇನ್ ಆರೋಪ. ಈ ಮೂಲಕ ಒಟ್ಟಾರೆ 1.20 ಲಕ್ಷ ಉಕ್ರೇನ್ ಮೂಲದ ಜನರ ಜೀವವು ಹೋಗಿದೆ ಅಂತಾ, ಉಕ್ರೇನ್ ಆರೋಪ ಮಾಡುತ್ತಿದೆ. ಈ ಸಂಕಷ್ಟಗಳ ಮಧ್ಯೆ ಇದೀಗ ಉಕ್ರೇನ್ & ರಷ್ಯಾ ಯುದ್ಧ 2 ವರ್ಷ ಪೂರೈಸಿದೆ. ಮೊನ್ನೆ ಮೊನ್ನೆಯಷ್ಟೇ ಉಕ್ರೇನ್‌ನ ವಿದ್ಯುತ್ ತಯಾರಿಕಾ ಘಟಕಗಳ ಮೇಲೆ ರಷ್ಯಾ ಸೇನೆ, ದೊಡ್ಡ ಪ್ರಮಾಣದ ದಾಳಿ ಮಾಡಿದ್ದು ಭಾಗಶಃ ಉಕ್ರೇನ್ ಈಗ ಕತ್ತಲೆಯಲ್ಲಿ ಮುಳುಗಿದೆ.

ಯಾರದ್ದೋ ತಪ್ಪು.. ಇನ್ಯಾರಿಗೋ ಶಿಕ್ಷೆ..?
ಅಷ್ಟಕ್ಕೂ ಉಕ್ರೇನ್‌ನ ವಿದ್ಯುತ್ ಸ್ಥಾವರಗಳು & ಇಂಧನ ಮೂಲಸೌಕರ್ಯ ಗುರಿಯಾಗಿಸಿ, ರಷ್ಯಾ ಸೇನೆ ಭೀಕರ ದಾಳಿ ಮಾಡಿದೆ. ಇದು ಎರಡು ದೇಶಗಳ ನಡುವಿನ ಕದನ ಮತ್ತಷ್ಟು ಉಲ್ಬಣಿಸುವ ಸೂಚನೆ ಕೊಟ್ಟಿದೆ. ರಷ್ಯಾ ಅಧ್ಯಕ್ಷರಾಗಿ ವ್ಲಾದಿಮಿರ್ ಪುಟಿನ್ ಪುನರಾಯ್ಕೆಯಾದ ಮರು ದಿನವೆ ಉಕ್ರೇನ್ ಮೇಲೆ ರಷ್ಯಾ ಸೇನೆ ವಿನಾಶಕಾರಿ ದಾಳಿ ನಡೆಸಿದೆ ಎಂಬ ಆರೋಪವೂ ಕೇಳಿಬಂದಿದೆ. 60ಕ್ಕೂ ಹೆಚ್ಚು ಸ್ಫೋಟಕ ಡ್ರೋನ್ & 90 ಕ್ಷಿಪಣಿಗಳನ್ನ ಬಳಸಿ ರಷ್ಯಾ ಸೇನೆ ಈ ದಾಳಿ ಮಾಡಿದೆ ಎನ್ನಲಾಗಿದೆ. ಹೀಗಾಗಿ ಉಕ್ರೇನ್ ಜನ ಕತ್ತಲೆಯಲ್ಲಿ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರ ಪ್ರದೇಶಕ್ಕೆ ಹೆಚ್ಚಿನ ಹಾನಿ
ರಷ್ಯಾ ಬಳಿ ಆಧುನಿಕ ಕ್ಷಿಪಣಿಗಳು ಇದ್ದು, ಉಕ್ರೇನ್ ಎಂತಹ ತಡೆ ನಿರ್ಮಾಣ ಮಾಡಿದ್ದರೂ ಅದು ವರ್ಕೌಟ್ ಆಗುತ್ತಿಲ್ಲ. ಹೀಗಾಗಿ ಇದೀಗ ರಷ್ಯಾ ಸೇನೆ ನಡೆಸಿದ ದಾಳಿಯಲ್ಲಿ ಉಕ್ರೇನ್ ದೇಶದ ಐವರು ಮೃತಪಟ್ಟು ಹತ್ತಾರು ಮಂದಿ ಆಸ್ಪತ್ರೆಗೆ ಸೇರಿದ್ದಾರೆ ಎನ್ನಲಾಗಿದೆ. ಹೀಗಾಗಿ ರಷ್ಯಾ ದಾಳಿಗೆ ಉಕ್ರೇನ್ ಜನರು ಬೆಚ್ಚಿಬಿದ್ದಾರೆ. ನಿಪ್ರೊದ ಅತಿದೊಡ್ಡ ಜಲವಿದ್ಯುತ್ ಸ್ಥಾವರಕ್ಕೆ ತೀವ್ರ ಹಾನಿಯಾಗಿದೆ ಯುದ್ಧ ಆರಂಭದಿಂದಲೂ ಭಯದಲ್ಲೇ ಇರುವ ಝಪೊರಿಝಿಯಾ ಅಣು ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಇಲ್ಲವಾಗಿ, ಸಿಕ್ಕಾಪಟ್ಟೆ ಆತಂಕ ಆವರಿಸಿದೆ. ರಷ್ಯಾ ಈ ದಾಳಿಗೆ ಬಳಸಿರುವ 90 ಕ್ಷಿಪಣಿಗಳ ಬಹುತೇಕ ಮಿಸೈಲ್ ಉಕ್ರೇನ್‌ನ ನಗರ ಪ್ರದೇಶಗಳಿಗೆ ಬಂದು ಬಡಿದಿವೆ.

ಒಟ್ನಲ್ಲಿ ಹಲ್ಲಿಗೆ ಹಲ್ಲು, ರಕ್ತಕ್ಕೆ ರಕ್ತ ಅಂತಾ ರಷ್ಯಾ & ಉಕ್ರೇನ್ ಸೇನೆಗಳ ನಡುವೆ ಭಾರಿ ದೊಡ್ಡ ಗಲಾಟೆ ನಡೆಯುತ್ತಿದೆ. ಇವರಿಬ್ಬರ ಹಿಂಸೆಯ ಹವ್ಯಾಸಕ್ಕೆ, ಈವರೆಗೂ ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ. ಇದು ಸಾಲದು ಎನ್ನುವಂತೆ ಇದೀಗ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಮತ್ತಷ್ಟು ರಣಭೀಕರ ದಾಳಿ ಆರಂಭಿಸಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗಿದೆ. ಅಕಸ್ಮಾತ್ ಇವರಿಬ್ಬರ ನಡುವೆ ಪರಮಾಣು ಅಸ್ತ್ರಗಳ ಬಳಕೆ ಆಗಿದ್ದೇ ನಿಜವಾದರೆ, ಅಷ್ಟೇ ಕಥೆ ಪ್ರಪಂಚವೇ ಫಿನಿಷ್ ಆಗಲಿದೆ. ಹೀಗಾಗಿ ಮುಂದೆ ಏನಾಗುತ್ತೋ ಅನ್ನೋ ಭಯ ಕೂಡ ಈಗ ಎಲ್ಲೆಲ್ಲೂ ಆವರಿಸಿದೆ. ಪ್ರಮುಖವಾಗಿ ಯುರೋಪ್ ಖಂಡದಲ್ಲಿ ಈ ಭಯ ಹೆಚ್ಚಾಗಿದೆ.












Click it and Unblock the Notifications