133 ಜನರನ್ನು ಕೊಲೆ ಮಾಡಿದ ಉಗ್ರನಿಗೆ ರಷ್ಯಾ ಸೈನಿಕರು ಮಾಡಿದ್ದೇನು? ವಿಡಿಯೋ ಇಲ್ಲಿದೆ!

ರಷ್ಯಾದ ಸಂಗೀತ ಕಾರ್ಯಕ್ರಮಕ್ಕೆ ನುಗ್ಗಿ, ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದ ಉಗ್ರರ ಪಡೆ ಇದೀಗ ರಷ್ಯಾ ಸೈನಿಕರ ಕೈಗೆ ಸಿಕ್ಕಿಬಿದ್ದಿದೆ. ರಷ್ಯಾ & ಉಕ್ರೇನ್ ಗಡಿ ಭಾಗದಲ್ಲಿ ಓಡಿ ಹೋಗುವ ಸಮಯದಲ್ಲಿ ಈ ಪಾಪಿ ಉಗ್ರರನ್ನು ಸೆರೆ ಹಿಡಿದಿರುವುದಾಗಿ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಈ ಸಮದಯದಲ್ಲೇ ರಷ್ಯಾ ಸೈನಿಕರು ಉಗ್ರರಿಗೆ ನೀಡಿದ ಶಿಕ್ಷೆ ಎಂತಹದ್ದು ಗೊತ್ತಾ? ಆ ಭಯಾನಕ ವಿಡಿಯೋ ನೋಡಲು ಮುಂದೆ ಓದಿ.

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಉಗ್ರರ ದಾಳಿ ನಡೆದಿದೆ. ಮಾಸ್ಕೋ ನಗರದ ಕ್ರಾಕಸ್ ಸಿಟಿ ಹಾಲ್‌ನಲ್ಲಿ ಸಂಗೀತ ಕಾರ್ಯಕ್ರಮಕ್ಕೆ ನುಗ್ಗಿ ದಾಳಿ ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ವೇಳೆ ಗನ್ ಹಿಡಿದು, ಕಾರ್ಯಕ್ರಮ ನಡೆಯುತ್ತಿದ್ದ ಹಾಲ್‌ಗೆ ನುಗ್ಗಿದ ರಾಕ್ಷಸ ರೂಪಿ ಉಗ್ರರು ಭೀಕರ ದಾಳಿ ಮಾಡಿದರು. ಏಕಾಏಕಿ ಹಾಲ್ ಒಳಗೆ ನುಗ್ಗಿದ ಉಗ್ರರು ಮನಸೋಯಿಚ್ಛೆ ಗುಂಡು ಹಾರಿಸಿ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಈವರೆಗೆ 133 ಜನರು ಮೃತಪಟ್ಟಿದ್ದು, 187 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಮಯದಲ್ಲೇ, ರಷ್ಯಾ ಸೈನಿಕರ ಕೈಗೆ ಉಗ್ರರ ಗ್ಯಾಂಗ್ ಸಿಕ್ಕಿಬಿದ್ದಿದ್ದು, ಒಬ್ಬ ಉಗ್ರನ ಕಿವಿ ಕತ್ತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆ ವಿಡಿಯೋ ಈಗ ವೈರಲ್ ಆಗ್ತಿದೆ.

Russian Soldiers Captured Suspects After Terrorist Attack On Moscow

ಉಗ್ರರಿಗೆ ಸೈನಿಕರಿಂದಲೇ ಶಿಕ್ಷೆ!

ಹೀಗೆ ನೂರಾರು ಜನರ ಜೀವ ತೆಗೆದು, ರಷ್ಯಾದಿಂದ ಹೊರಗೆ ಓಡಿ ಹೋಗುತ್ತಿದ್ದ ಉಗ್ರರನ್ನ ಹಿಡಿದು ರಷ್ಯಾ ಸೈನಿಕರು ಶಿಕ್ಷೆ ಕೊಟ್ಟಿದ್ದಾರೆ. ಅದರಲ್ಲೂ ರಷ್ಯಾ & ಉಕ್ರೇನ್ ಗಡಿಯಲ್ಲಿ, ಓಡಿ ಹೋಗ್ತಿದ್ದ ಉಗ್ರರನ್ನ ಹಿಡಿದು ಅದರಲ್ಲಿ ಒಬ್ಬನ ಕಿವಿ ಕತ್ತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲು ವೈರಲ್ ಆಗುತ್ತಿದ್ದು, ಈ ಘಟನೆ ಸಂಬಂಧ ಪರ & ವಿರೋಧದ ಮಾತುಗಳು ಕೇಳಿಬರುತ್ತಿವೆ. ಇದೇ ರೀತಿ ಇನ್ನೂ ಹಲವು ಉಗ್ರರನ್ನು ಇದೀಗ ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ.

ರಷ್ಯಾ ಉಗ್ರರ ದಾಳಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿದೆ ಹೀಗಾಗಿ ಉಗ್ರರ ದಾಳಿಯನ್ನ ರಷ್ಯಾ ಸರ್ಕಾರ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿದೆ. ಈ ಕುರಿತು ಅಧಿಕಾರಿಗಳ ಜೊತೆಗೆ ತುರ್ತು ಸಭೆ ನಡೆಸಿದ ರಷ್ಯಾದ ಅಧ್ಯಕ್ಷ ಪುಟಿನ್, ಗಾಯಾಳು ರಕ್ಷಣೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಇದು ಒಂದು ಕಡೆ ಇರುವಾಗಲೇ, ರಷ್ಯಾದಲ್ಲಿ ನಡೆದಿರುವ ಈ ದಾಳಿಯ ಹಿಂದೆ ಉಕ್ರೇನ್ ಕೈವಾಡ ಇದೆ ಎಂಬ ಆರೋಪ ಮಾಡಲಾಗಿದೆ. ಈ ಮೂಲಕ ಪರಿಸ್ಥಿತಿ ಕೂಡ ಕೈಮೀರಿದೆ.

ಉಕ್ರೇನ್ ಮೂಲ ಹುಡುಕುತ್ತಾ ರಷ್ಯಾ?

ರಷ್ಯಾ ಇದೀಗ ಮಾಡಿರುವ ಆರೋಪ ನಿಜವಾದರೆ ಯುದ್ಧ ಮತ್ತೊಂದು ಭೀಕರ ಹಂತಕ್ಕೂ ತಲುಪುವ ಆತಂಕ ಮನೆಮಾಡಿದೆ. ಯಾಕಂದ್ರೆ ರಷ್ಯಾ ಹೇಳುತ್ತಿರುವ ಪ್ರಕಾರ, ಮಾಸ್ಕೋದ ಗುಂಡಿನ ದಾಳಿ ಹಿಂದೆ ಉಕ್ರೇನ್ ಕೈವಾಡ ಇದ್ದರೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿ ಯುದ್ಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ರಷ್ಯಾ ಸೇನೆ ಕೂಡ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿದೆ. ಉಕ್ರೇನ್‌ನ ನೆಲದಲ್ಲಿ ಕಾರ್ಯಾಚರಣೆ ತೀವ್ರಗೊಳಿಸುವ ಮುನ್ಸೂಚನೆ ಕೂಡ ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+