ಶತ್ರುಗಳ ಅಡ್ಡೆಗೆ ನುಗ್ಗಿದ ರಷ್ಯಾ ಮಾಡಿದ್ದೇನು ಗೊತ್ತಾ?

ರಷ್ಯಾ ತನ್ನ ಶತ್ರು ಉಕ್ರೇನ್‌ನ ಹೆಡೆಮುರಿ ಕಟ್ಟಿ ಬಿಸಾಡಲು ಸರ್ವ ಪ್ರಯತ್ನ ಆರಂಭಿಸಿದೆ. ಇದರ ಭಾಗವಾಗಿ ಉಕ್ರೇನ್‌ನ ಮೂಲ ಸೌಕರ್ಯ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿ, ದಾಳಿಯ ಆರಂಭ ಮಾಡಿದೆ. ಹೀಗೆ ರಷ್ಯಾ ಹಿಗ್ಗಾಮುಗ್ಗಾ ಬಾಂಬ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಜನರಿಗೆ ಕರೆಂಟ್ ಕೂಡ ಕಟ್ ಆಗಿದೆ!

ಹೌದು, ರಷ್ಯಾ ಪಡೆಗಳು ಉಕ್ರೇನ್‌ನ ಇಂಧನ ಮೂಲ ಸೌಕರ್ಯ ಗುರಿಯಾಗಿಸಿ ದಾಳಿ ನಡೆಸಿದ ಪರಿಣಾಮ ಉಕ್ರೇನ್‌ನ ಬಹುದೊಡ್ಡ ವಿದ್ಯುತ್‌ ಸ್ಥಾವರ ಛಿದ್ರವಾಗಿದೆ. ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿ ಈ ವಿದ್ಯುತ್ ಸ್ಥಾವರ ನಾಶ ಮಾಡಲಾಗಿದೆ. ಅಲ್ಲದೆ ಉಳಿದಿರುವ ಸ್ಥಾವರಗಳಿಗು ಹಾನಿ ಉಂಟಾಗಿದೆ ಅಂತಾ ಉಕ್ರೇನ್ ಅಧಿಕಾರಿಗಳು ಇದೀಗ ಮಾಹಿತಿ ನೀಡಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‌, ಚೆರ್ಕಾಸಿ ಮತ್ತು ಝೈಟೊಮಿರ್ ಪ್ರದೇಶಗಳಿಗೆ ವಿದ್ಯುತ್ ನೀಡುತ್ತಿದ್ದ ಜಾಗ ಈಗ ಛಿದ್ರವಾಗಿದೆ. ಟ್ರಿಪಿಲ್ಸ್ಕಾ ವಿದ್ಯುತ್ ಸ್ಥಾವರದ ಮೇಲೆ ಹಲವು ಕ್ಷಿಪಣಿ ಮತ್ತು ಡ್ರೋನ್‌ಗಳು ಅಪ್ಪಳಿಸಿವೆ ಎನ್ನಲಾಗಿದ್ದು, ಈ ಸ್ಥಾವರದಿಂದ 30 ಲಕ್ಷ ಜನರಿಗೆ ವಿದ್ಯುತ್‌ ಪೂರೈಕೆ ಆಗುತ್ತಿತ್ತು.

Russian Military Continues Attack On Ukraine

ಉಕ್ರೇನ್ ಜನರಿಗೆ ಭೀಕರ ಆಘಾತ

ಹೀಗೆ ರಷ್ಯಾ ನಡೆಸುತ್ತಿರುವ ಭೀಕರ ದಾಳಿಗೆ ಉಕ್ರೇನ್ ಜನರು ಬೆಚ್ಚಿದ್ದಾರೆ. ಯಾಕಂದ್ರೆ ಈ ದಾಳಿಯಿಂದ ಜನರಿಗೆ ಕನಿಷ್ಠ ಮೂಲ ಸೌಕರ್ಯ ಕೂಡ ಮರೀಚಿಕೆ ಎಂಬಂತೆ ಆಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಈ ದಾಳಿ ನಿಲ್ಲಿಸಬೇಕು ಎಂಬ ಒತ್ತಾಯವನ್ನು ಉಕ್ರೇನ್ ಮಾಡುತ್ತಿದೆ. ಆದರೂ ಉಕ್ರೇನ್‌ನ ದೊಡ್ಡ ನಗರ ಹಾರ್ಕಿವ್‌ ಮೇಲೆ ಹತ್ತು ಬಾರಿ ದಾಳಿ ನಡೆದಿದ್ದು, ಇಂಧನ ಮೂಲ ಸೌಕರ್ಯಕ್ಕೆ ಭಾರಿ ಹಾನಿಯಾಗಿದೆ. ಈ ಬಗ್ಗೆ ಮಾಸ್ಕೊದಲ್ಲಿ ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ರಷ್ಯಾ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ಸೇನೆ ನಡೆಸಿರುವ ದಾಳಿಗೆ ಇದು ಪ್ರತ್ಯುತ್ತರ ಎಂದು ಗುಡುಗಿದ್ದಾರೆ.

ಸಾಮಾನ್ಯ ಜನರ ಸ್ಥಿತಿ ಏನು?

ರಷ್ಯಾ & ಉಕ್ರೇನ್ ಮಧ್ಯೆ ಕಿತ್ತಾಟ ಮುಂದುವರಿದಿದ್ದು, ಒಬ್ಬರು ದಾಳಿ ಮಾಡಿದ್ರೆ ಅದಕ್ಕೆ ಉತ್ತರ ನೀಡುವ ಸಂಪ್ರದಾಯ ಎರಡೂ ದೇಶಗಳ ನಡುವೆ ನಡೆಯುತ್ತಿದೆ. ಆದ್ರೆ ಸಾಮಾನ್ಯ ಜನಗಳಿಗೆ ಇದರಿಂದ ಎದುರಾಗಿರುವ ಸಮಸ್ಯೆ ಮಾತ್ರ ಯಾರಿಗೂ ಅರ್ಥ ಆಗುತ್ತಿಲ್ಲ. ಹೀಗಾಗಿ ದಾಳಿ & ಪ್ರತಿದಾಳಿ ಜೋರಾಗಿದೆ. ಮತ್ತೊಂದು ಕಡೆ ಅಮೆರಿಕ ಕೂಡ ಉಕ್ರೇನ್‌ಗೆ ಪರೋಕ್ಷವಾಗಿಯೇ ಬೆಂಬಲ ನೀಡುತ್ತಿದ್ದು ದಾಳಿಯ ತೀವ್ರತೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ.

Russian Military Continues Attack On Ukraine

ಈಗಾಗಲೇ ಹಲವು ಸುತ್ತಿನಲ್ಲಿ ವಿಶ್ವಸಂಸ್ಥೆ ಕೂಡ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸೋಕೆ ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಎರಡೂ ದೇಶಗಳ ಹಠದಿಂದ ಇಂದಿಗೂ ಯುದ್ಧವು ನಿಂತಿಲ್ಲ. ಹಾಗೇ 3ನೇ ವರ್ಷಕ್ಕೆ ಕಾಲಿಟ್ಟಿರುವ ರಷ್ಯಾ & ಉಕ್ರೇನ್ ಯುದ್ಧ ಮುಂದೆ ಇಡೀ ಜಗತ್ತನ್ನೇ ಆವರಿಸುವ ಭಯ ಕೂಡ ಕಾಡುತ್ತಿದೆ. ಹೀಗಾಗಿ ಯುದ್ಧ ನಿಲ್ಲಿಸಬೇಕು, ಇಲ್ಲವೇ ಇದು ವಿನಾಶಕ್ಕೆ ದಾರಿ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+