Get Updates
Get notified of breaking news, exclusive insights, and must-see stories!

ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು. 2019ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ ಜಯಗಳಿಸಿದರು.
By Rashmi | Friday, August 19, 2022, 06:07:11 PM [IST]

ತೇಜಸ್ವಿ ಸೂರ್ಯ ಜೀವನ ಚರಿತ್ರೆ

ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು. 2019ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ ಜಯಗಳಿಸಿದರು. 29 ವರ್ಷದ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಲೋಕಸಭೆಯ ಅತಿ ಕಿರಿಯ ವಯಸ್ಸಿನ ಸದಸ್ಯರು ಎಂಬ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾಗಿದ್ದ ಅನಂತ್ ಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಮೊದಲು ಪ್ರತಿನಿಧಿಸುತ್ತಿದ್ದರು.

ವೃತ್ತಿಯಲ್ಲಿ ವಕೀಲರಾಗಿದ್ದ ತೇಜಸ್ವಿ ಸೂರ್ಯ ಮೊದಲ ಬಾರಿಗೆ ಚುನಾವಣೆಗೆ ಕಣಕ್ಕಿಳಿದು ಗೆಲುವು ಕಂಡರು. ತೇಜಸ್ವಿ ಸೂರ್ಯಗೆ ಎದುರಾಳಿಯಾಗಿದ್ದು, ಕಾಂಗ್ರೆಸ್ಸಿನ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್. ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿ. ಕೆ. ಹರಿಪ್ರಸಾದ್ ಸೋಲು ಕಂಡರು.

2020ರ ಸೆಪ್ಟೆಂಬರ್‌ನಲ್ಲಿ ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡರು. ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿರುವ ತೇಜಸ್ವಿ ಸೂರ್ಯ ರಾಷ್ಟ್ರೀಯ ವಾಹಿನಿಗಳ ಚರ್ಚೆಗಳಲ್ಲಿಯೂ ಪಾಲ್ಗೊಳ್ಳುತ್ತಾರೆ.

ವಿದ್ಯಾರ್ಥಿಯಾಗಿದ್ದಾಗಲೇ ತೇಜಸ್ವಿ ಸೂರ್ಯ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕಾಜೇಜುದಿನಗಳಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿದ್ದರು. ಕಾನೂನು ವ್ಯಾಸಂಗದ ಬಳಿಕ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು.

ಬೆಂಗಳೂರಿನ ಬಸವನಗುಡಿಯ ಬಿಜೆಪಿ ಶಾಸಕ ರವಿ ಸುಬ್ರಮಣ್ಯರ ಅಣ್ಣನ ಮಗನಾಗಿರುವ ತೇಜಸ್ವಿ ಸೂರ್ಯ ಮೊದಲ ಚುನಾವಣೆಯಲ್ಲಿಯೇ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ.

ಮತ್ತಷ್ಟು ಓದು

ತೇಜಸ್ವಿ ಸೂರ್ಯ ವಯಕ್ತಿಕ ಜೀವನ

ಪೂರ್ಣ ಹೆಸರು ತೇಜಸ್ವಿ ಸೂರ್ಯ
ಜನ್ಮ ದಿನಾಂಕ 16 Nov 1990 (ವಯಸ್ಸು 35)
ಹುಟ್ಟಿದ ಸ್ಥಳ ಚಿಕ್ಕಮಗಳೂರು, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ
ಉದ್ಯೋಗ ವಕೀಲ, ರಾಜಕಾರಣಿ
ತಂದೆಯ ಹೆಸರು ಎಲ್.ಎ. ಸೂರ್ಯನಾರಾಯಣ
ತಾಯಿಯ ಹೆಸರು ರಮಾ ಸೂರ್ಯನಾರಾಯಣ
ಅವಲಂಬಿತರ ಹೆಸರು ಅವಿವಾಹಿತರು
ಧರ್ಮ ಹಿಂದು
ವೆಬ್‌ಸೈಟ್ tejasvisurya.in

ತೇಜಸ್ವಿ ಸೂರ್ಯ ಒಟ್ಟು ಆಸ್ತಿ

ಒಟ್ಟು ಆಸ್ತಿ
₹13.47 LAKHS
ಆಸ್ತಿ
₹13.47 LAKHS
ಸಾಲಸೋಲ
N/A

ತೇಜಸ್ವಿ ಸೂರ್ಯ ಕುರಿತು ಆಸಕ್ತಿದಾಯಕ ಸಂಗತಿಗಳು

ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ತೇಜಸ್ವಿ ಸೂರ್ಯ ಮೊದಲ ಚುನಾವಣೆಯಲ್ಲಿಯೇ ಗೆದ್ದು ಸಂಸತ್ ಪ್ರವೇಶಿಸಿದರು.

ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ಸೋಲಿಸಿ ಚಿಕ್ಕ ವಯಸ್ಸಿನಲ್ಲಿಯೇ ಸಂಸತ್ ಪ್ರವೇಶಿಸಿದರು.

ಇಂಗ್ಲಿಷ್, ಹಿಂದಿ ಸೇರಿದಂತೆ ಉತ್ತಮ ಭಾಷಾ ಕೌಶಲ್ಯ ಹೊಂದಿರುವ ತೇಜಸ್ವಿ ಸೂರ್ಯ ರಾಷ್ಟ್ರೀಯ ವಾಹಿನಿಗಳ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ತೇಜಸ್ವಿ ಸೂರ್ಯ ರಾಜಕೀಯ ಟೈಮ್‌ಲೈನ್

  • 2020 : ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ

ಹಿಂದಿನ ಇತಿಹಾಸ

  • 2019: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ತೇಜಸ್ವಿ ಸೂರ್ಯ ಗೆಲುವು ಸಾಧಿಸಿದರು.

ತೇಜಸ್ವಿ ಸೂರ್ಯ ಸಾಧನೆಗಳು

ತೇಜಸ್ವಿ ಸೂರ್ಯ 9 ವರ್ಷದ ಬಾಲಕನಾಗಿದ್ದಾಗ ತನ್ನ 17 ಪೇಟಿಂಗ್ಸ್ ಗಳನ್ನು ಮಾರಾಟ ಮಾಡಿ ಅದರಿಂದ ಸಂಗ್ರಹವಾದ 1220 ರು.ಗಳನ್ನು ಕಾರ್ಗಿಲ್ ಯೋಧರ ನಿಧಿಗೆ ತನ್ನ ಶಾಲಾ ಪ್ರಾಚಾರ್ಯರ ಮೂಲಕ ಸಲ್ಲಿಸಿದ್ದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+