ಅಕ್ಟೋಬರ್ 11, 1934 ರಲ್ಲಿ ಜನಿಸಿದ ತರುಣ್ ಗೋಗೊಯ್ 2001 ರಿಂದ 2016 ರವರೆಗೆ ಅಸ್ಸಾಂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಲ್ಲೊಬ್ಬರಾದ ಇವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸತತವಾಗಿ ಮೂರು ಬಾರಿ ಚುನಾವಣೆಗಳಲ್ಲಿ ಜಯಗಳಿಸಿತ್ತು. ಇವರು ನಂ.26 ರಂಗಾಜಾನ ನಿಮ್ನ ಬುನಿಯಾದಿ ವಿದ್ಯಾಲಯದಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದರು. 1963 ರಲ್ಲಿ ಅಸ್ಸಾಂನ ಗೌಹಾಟಿ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದರು. ಜುಲೈ 30, 1972 ರಂದು ಡಾಲಿ ಗೋಗೊಯ್ ಅವರೊಂದಿಗೆ ವಿವಾಹವಾದರು. ಗೋಗೊಯ್ ದಂಪತಿಗೆ ಗೌರವ್ ಗೋಗೊಯ್ ಎಂಬ ಪುತ್ರ ಹಾಗೂ ಚಂದ್ರಿಮಾ ಗೋಗೊಯ್ ಎಂಬ ಪುತ್ರಿ ಇದ್ದಾರೆ. 1968 ರಲ್ಲಿ ಜೋರ್ಹಾಮಟ್ ನಗರ ಪಾಲಿಕೆಯ ಸದಸ್ಯರಾಗಿ ನೇಮಕವಾಗುವ ಮೂಲಕ ಇವರು ತಮ್ಮ ರಾಜಕೀಯ ಜೀವನ ಆರಂಭಿಸಿದರು. ಇಂದಿರಾ ಗಾಂಧಿ ಅವರ ಅವಧಿಯಲ್ಲಿ 1971 ರಲ್ಲಿ ಗೋಗೊಯ್ 5ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು. 2001 ರಲ್ಲಿ ಅಸ್ಸಾಂ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ತಿತಾಬಾರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿ ಪಟ್ಟಕ್ಕೇರಿದರು. 2016 ರಲ್ಲಿ ರಾಜ್ಯದಲ್ಲಿ ಬಿಜೆಪಿ ಗೆದ್ದಾಗ ಇವರ ಅಧಿಕಾರ ಕೊನೆಗೊಂಡಿತು. ಗೋಗೊಯ್ ಒಟ್ಟು ಆರು ಬಾರಿ ಲೋಕಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 1971 ರಿಂದ 85 ರವರೆಗೆ ಇವರು ಜೋರ್ಹಾರಟ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ನಂತರ ಕಾಲಿಭೋರ ಕ್ಷೇತ್ರದಿಂದ ಜಯಗಳಿಸಿದರು. (1991-96/1998-2002)
| ಪೂರ್ಣ ಹೆಸರು | ತರುಣ್ ಗೋಗೊಯ್ |
| ಜನ್ಮ ದಿನಾಂಕ | 11 Oct 1934 |
| ಮೃತಪಟ್ಟ ದಿನಾಂಕ | 23 Nov 2020 (ವಯಸ್ಸು 86) |
| ಹುಟ್ಟಿದ ಸ್ಥಳ | ರಂಗಾಮಾಟಿ, ಜೋರ್ಹಾಟ್ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | Graduate Professional |
| ಉದ್ಯೋಗ | ರಾಜಕಾರಣಿ |
| ತಂದೆಯ ಹೆಸರು | ಡಾ. ಕಮಲೇಶ್ವರ ಗೋಗೊಯ್ |
| ತಾಯಿಯ ಹೆಸರು | ಉಷಾ ಗೋಗೊಯ್ |
| ಅವಲಂಬಿತರ ಹೆಸರು | ಡಾಲಿ ಗೋಗೊಯ್ |
| ಮಕ್ಕಳು | 1 ಪುತ್ರ(ರು) 1 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.