ತನ್ವೀರ್ ಸೇಠ್ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕರು. ಕರ್ನಾಟಕದ ಮುಸ್ಲಿಂ ಸಮುದಾಯಕ್ಕೆ ಸೇರಿದ ರಾಜಕೀಯ ನಾಯಕರಲ್ಲಿ ಒಬ್ಬರು. 2018ರ ಚುನಾವಣೆಯಲ್ಲಿ 62,268 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
1996-2001 ಪಕ್ಷೇತರ ಅಭ್ಯರ್ಥಿಯಾಗಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು. ಮೈಸೂರಿನ ಬೀಡಿ ಮಜ್ದೂರ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಕರ್ನಾಟಕ ವಕ್ಫ್ ಡೆವಲಪ್‌ಮೆಂಟ್ ಕಾರ್ಪೋರೇಷನ್ (ರಿ) ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ತನ್ವೀರ್ ಸೇಠ್ 2002-2004ರ ತನಕ ಶಾಸಕರಾಗಿ ಕೆಲಸ ಮಾಡಿದರು. 2004-2007ರ ತನಕ ಶಾಸಕರಾಗಿ, ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. 2008-2013ರ ತನಕ ಶಾಸಕರಾಗಿ ಕೆಲಸ ನಿರ್ವಹಿಸಿದರು.
2013ರ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು. 2016ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪಸಂಖ್ಯಾತರಕಲ್ಯಾಣ ಮತ್ತು ವಕ್ಫ್ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.
ಕಾರ್ಮಿಕ ಸಮಸ್ಯೆಗಳು, ಕಾರ್ಮಿಕ ಸಂಘಟನೆಗಳ ವಿಚಾರದಲ್ಲಿ ತನ್ವೀರ್ ಸೇಠ್ ಆಳವಾದ ಜ್ಞಾನ ಹೊಂದಿದ್ದಾರೆ. ಇತಿಹಾಸ, ರಾಜಕೀಯ ಚಟುವಟಿಕೆಗಳು, ಕಾನೂನು ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ್ದಾರೆ.
| ಪೂರ್ಣ ಹೆಸರು | ತನ್ವೀರ್ ಸೇಠ್ |
| ಜನ್ಮ ದಿನಾಂಕ | 03 Oct 1967 (ವಯಸ್ಸು 58) |
| ಹುಟ್ಟಿದ ಸ್ಥಳ | ಮೈಸೂರು |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | Bachelor of Business Management from Vidya Vardhaka College of Commerce & Management, University of Mysore in 1992 |
| ಉದ್ಯೋಗ | Politician and Businessman |
| ತಂದೆಯ ಹೆಸರು | ದಿ. ಅಜೀಜ್ ಸೇಠ್ |
| ತಾಯಿಯ ಹೆಸರು | ಜುಬೇದಾಬಾಯಿ |
| ಅವಲಂಬಿತರ ಹೆಸರು | ಸಮೀನ ಬಾಯಿ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಧರ್ಮ | ಇಸ್ಲಾಂ |
| ಜಾತಿ | ಮುಸ್ಲಿಂ |
| ವೆಬ್‌ಸೈಟ್ | http://www.tanveersait.com/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.