ಸುಷ್ಮಾ ಸ್ವರಾಜ್ ಭಾರತೀಯ ಜನತಾ ಪಕ್ಷದ (ಬಿಜೆಪಿ) ಫೈರ್ ಬ್ರ್ಯಾಂಡ್ ನಾಯಕರೆಂದೇ ಖ್ಯಾತಿಗಳಿಸಿದವರು. ಸುಪ್ರೀಂ ಕೋರ್ಟ್ ನ ವಕೀಲರಾಗಿದ್ದ ಸುಷ್ಮಾ 26 ಮೇ 2014 ರಿಂದ 2019 ಮೇ 30ರವರೆಗೂ ಭಾರತದ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದರು. ಏಳು ಬಾರಿ ಸಂಸದರಾಗಿ, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ ವಿಧಿಶಾದಿಂದ ಸಂಸದರಾಗಿ ಆಯ್ಕೆಯಾಗುತ್ತಿದ್ದರು. 13 ಅಕ್ಟೋಬರ್ 1998ರಿಂದ 3 ಡಿಸೆಂಬರ್ 1998ರವರೆಗೆ ದೆಹಲಿಯ 5ನೇ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರು ದೆಹಲಿಯ ಮೊದಲ ಮಹಿಳಾ ಸಿಎಂ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರು ಹಲವಾರು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಗುರುತಿಸಿಕೊಂಡು ಇಂದಿಗೂ ಸಕ್ರೀಯರಾಗಿದ್ದಾರೆ.
ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ಇಲ್ಲ ಎಂಬ ಬಿಜೆಪಿಯ ನಿಯಮದ ಅಡಿ ಲೋಕಸಭೆಗೆ ಸ್ಪರ್ಧಿಸಲಿಲ್ಲ.
| ಪೂರ್ಣ ಹೆಸರು | ಸುಷ್ಮಾ ಸ್ವರಾಜ್ |
| ಜನ್ಮ ದಿನಾಂಕ | 14 Feb 1952 |
| ಮೃತಪಟ್ಟ ದಿನಾಂಕ | 06 Aug 2019 (ವಯಸ್ಸು 67) |
| ಹುಟ್ಟಿದ ಸ್ಥಳ | ಅಂಬಾಲಾ ಕಂಟೋನ್ಮೆಂಟ್ (ಹರಿಯಾಣ) |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Graduate Professional |
| ಉದ್ಯೋಗ | ವಕೀಲರು, ರಾಜಕಾರಣಿ |
| ತಂದೆಯ ಹೆಸರು | ಹರ್ ದೇವ್ ಶರ್ಮಾ |
| ತಾಯಿಯ ಹೆಸರು | ಲಕ್ಷ್ಮೀ ದೇವಿ |
| ಅವಲಂಬಿತರ ಹೆಸರು | ಸ್ವರಾಜ್ ಕುಶಾಲ್ |
| ಅವಲಂಬಿತರ ಉದ್ಯೋಗ | ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ |
| ಮಕ್ಕಳು | 1 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.