Get Updates
Get notified of breaking news, exclusive insights, and must-see stories!

ಸ್ಮೃತಿ ಝುಬಿನ್ ಇರಾನಿ

ಸ್ಮೃತಿ ಝುಬಿನ್ ಇರಾನಿ
ಚಿತ್ರನಟಿಯಾಗಿ ನಂತರ ರಾಜಕಾರಣಕ್ಕೆ ಬಂದ ಸ್ಮೃತಿ ಇರಾನಿ ದೆಹಲಿ ಮೂಲದ ಮಧ್ಯಮ ವರ್ಗದ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಚಿಕ್ಕ ಕೊರಿಯರ್ ಕಂಪನಿ ನಡೆಸುತ್ತಿದ್ದ ತಂದೆ ಅಜಯಕುಮಾರ ಮಲ್ಹೋತ್ರಾ ಪಂಜಾಬಿ.
By Rashmi | Thursday, May 30, 2019, 03:45:57 PM [IST]

ಸ್ಮೃತಿ ಝುಬಿನ್ ಇರಾನಿ ಜೀವನ ಚರಿತ್ರೆ

ಚಿತ್ರನಟಿಯಾಗಿ ನಂತರ ರಾಜಕಾರಣಕ್ಕೆ ಬಂದ ಸ್ಮೃತಿ ಇರಾನಿ ದೆಹಲಿ ಮೂಲದ ಮಧ್ಯಮ ವರ್ಗದ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಚಿಕ್ಕ ಕೊರಿಯರ್ ಕಂಪನಿ ನಡೆಸುತ್ತಿದ್ದ ತಂದೆ ಅಜಯಕುಮಾರ ಮಲ್ಹೋತ್ರಾ ಪಂಜಾಬಿ. ಸ್ಮೃತಿ ಇವರ ತಾಯಿ ಬೆಂಗಾಲಿ. ಭಾರತೀಯ ರಾಜಕೀಯ ರಂಗದ ಅತಿ ಪ್ರಗತಿಪರ ಮಹಿಳಾ ರಾಜಕಾರಣಿಗಳಲ್ಲೊಬ್ಬರಾಗಿ ಸ್ಮೃತಿ ಗುರುತಿಸಿಕೊಂಡಿದ್ದಾರೆ. ಆರಂಭದಲ್ಲಿ ಬಿಜೆಪಿಯ ಮಹಿಳಾ ಘಟಕದಲ್ಲಿ ಕೆಲಸ ಮಾಡಿದ ಅವರು ನಂತರ ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹಾಗೂ ರಾಹುಲ್ ಗಾಂಧಿ ವಿರುದ್ಧ ವಿಧಾನಸಭಾ ಚುನಾವಣೆ ಎದುರಿಸಿ ಎರಡರಲ್ಲೂ ಸೋತರು. 2014 ರಿಂದ 2016ರ ಅವಧಿಯಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದರು. ಪ್ರಸ್ತುತ ಕೇಂದ್ರ ಸರಕಾರದಲ್ಲಿ ಜವಳಿ ಖಾತೆ ಸಚಿವರಾಗಿದ್ದಾರೆ.

ಮತ್ತಷ್ಟು ಓದು

ಸ್ಮೃತಿ ಝುಬಿನ್ ಇರಾನಿ ವಯಕ್ತಿಕ ಜೀವನ

ಪೂರ್ಣ ಹೆಸರು ಸ್ಮೃತಿ ಝುಬಿನ್ ಇರಾನಿ
ಜನ್ಮ ದಿನಾಂಕ 23 Mar 1976 (ವಯಸ್ಸು 49)
ಹುಟ್ಟಿದ ಸ್ಥಳ ಹೊಸದಿಲ್ಲಿ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ 12th Pass
ಉದ್ಯೋಗ ಚಿತ್ರ ನಟಿ
ತಂದೆಯ ಹೆಸರು ಅಜಯ ಕುಮಾರ ಮಲ್ಹೋತ್ರಾ
ತಾಯಿಯ ಹೆಸರು ಶಿಬಾನಿ ಬಾಗ್ಚಿ
ಅವಲಂಬಿತರ ಹೆಸರು ಝುಬಿನ್ ಇರಾನಿ
ಅವಲಂಬಿತರ ಉದ್ಯೋಗ ವ್ಯಾಪಾರೋದ್ಯಮಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು

ಸ್ಮೃತಿ ಝುಬಿನ್ ಇರಾನಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹17.4 CRORE
ಆಸ್ತಿ
₹17.57 CRORE
ಸಾಲಸೋಲ
₹16.56 LAKHS

ಸ್ಮೃತಿ ಝುಬಿನ್ ಇರಾನಿ ಕುರಿತು ಆಸಕ್ತಿದಾಯಕ ಸಂಗತಿಗಳು

ದೆಹಲಿಯ ಹೋಲಿ ಚೈಲ್ಡ್ ಆಕ್ಸಿಲಿಯಂ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ ನಡೆಸಿ, ದೂರಶಿಕ್ಷಣ ವಿದ್ಯಾಲಯದಿಂದ ಶಿಕ್ಷಣ ಪಡೆದರು. ಸದ್ಯ ಇವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾರೆ. ಕ್ಯಾನ್ಸರ್ ರೋಗಿಗಳ ಸಹಾಯ ಸಂಘ ಹಾಗೂ ವಾತ್ಸಲ್ಯ ಬೀದಿ ಮಕ್ಕಳ ಫೌಂಡೇಶನ್ ಸೇರಿದಂತೆ ಇನ್ನೂ ಹಲವಾರು ಎನ್ಜಿಓಗಳೊಂದಿಗೆ ನಿಕಟ ಸಂಪರ್ಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಂಟೆ ಕಾರ್ಲೊ ಟೆಲಿವಿಷನ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ ಪ್ರಥಮ ಭಾರತೀಯ ಪ್ರಜೆ ಎಂದು ಸ್ಮೃತಿ ಹೆಸರು ಮಾಡಿದ್ದಾರೆ. ಇವರನ್ನು ಡಬ್ಲ್ಯೂಎಚ್ಓ - ಓಆರ್ಎಸ್ನ ಭಾರತದ ಗುಡವಿಲ್ ರಾಯಭಾರಿಯಾಗಿ 3 ವರ್ಷಗಳ ಅವಧಿಗೆ ನೇಮಿಸಲಾಗಿತ್ತು. 2007 ರಲ್ಲಿ ’ಪೀಪಲ್ ಫಾರ್ ಚೇಂಜ್’ ಎಂಬ ಎನ್ಜಿಓ ಸಂಸ್ಥೆಯನ್ನು ಇವರು ಆರಂಭಿಸಿದರು. ಪೀಪಲ್ ಫಾರ್ ಚೇಂಜ್ ಸಂಸ್ಥೆಯ ಮೂಲಕ ನಾಶಿಕನಲ್ಲಿ ಕ್ರೀಡಾ ಸ್ಕಾಲರಶಿಪ್ಗಳನ್ನು ನೀಡಲಾಗುತ್ತಿದೆ. ಮಹಾರಾಷ್ಟ್ರದ 35 ಹಳ್ಳಿಗಳಲ್ಲಿ ಬೋರವೆಲ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ. ಮುಂಬೈನಲ್ಲಿ ನೆರೆಹಾವಳಿ ಸಂಭವಿಸಿದಾಗ 92.5 ಎಫ್ಎಂ ರೇಡಿಯೊ ಸಂಸ್ಥೆಯೊಂದಿಗೆ 10 ಟನ್ಗೂ ಅಧಿಕ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಹಂಚಲಾಗಿತ್ತು. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಸ್ಕಾಲರಶಿಪ್ಗಳನ್ನು ಸಂಸ್ಥೆ ನೀಡುತ್ತಿದೆ. ವುಮೆನ್ ಆಂಡ್ ಹೆಲ್ತ್ ಕಾರ್ಯಕ್ರಮದ ಹೆಸರಿನಲ್ಲಿ ಮಹಿಳೆಯರಿಗಾಗಿ ಆರ್ಥಿಕ ಸಬಲೀಕರಣದ ತರಬೇತಿ ಕಾರ್ಯಕ್ರಮಗಳನ್ನು ಇವರ ಸಂಸ್ಥೆ ಆಯೋಜಿಸುತ್ತಿದೆ.

ಸ್ಮೃತಿ ಝುಬಿನ್ ಇರಾನಿ ಸಾಧನೆಗಳು

ಇಂಡಿಯನ್ ಟೆಲಿವಿಷನ್ ಅಕಾಡೆಮಿಯ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿಯನ್ನು ಸತತ ಏಳು ಬಾರಿ ಪಡೆದರು. ಇಂಡೊ ಅಮೆರಿಕನ್ ಸೊಸೈಟಿಯ ಯಂಗ್ ಅಚೀವರ್ ಅವಾರ್ಡ್ ಪಡೆದಿದ್ದಾರೆ. 2001, 2002, 2003 ಹಾಗೂ 2005 ರಲ್ಲಿ ಐಟಿಎ ಅತ್ಯುತ್ತಮ ಅಭಿನೇತ್ರಿ-ಡ್ರಾಮಾ ಪ್ರಶಸ್ತಿ ಪಡೆದಿದ್ದಾರೆ. 2004 ರಲ್ಲಿ ಐಟಿಎ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿ ಪಡೆದಿದ್ದಾರೆ. 2010 ರಲ್ಲಿ ಐಟಿಎ ಮೈಲಸ್ಟೋನ್ ಅವಾರ್ಡ ಪಡೆದರು. ಟಿವಿ ಧಾರಾವಾಹಿ ’ಕ್ಯೂಂ ಕಿ ಸಾಸ ಭಿ ಕಭಿ ಬಹು ಥಿ’ ಯಲ್ಲಿನ ಇವರ ಉತ್ತಮ ಅಭಿನಯಕ್ಕಾಗಿ ಈ ಎಲ್ಲ ಪ್ರಶಸ್ತಿಗಳು ಅವರಿಗೆ ಸಂದಿವೆ. ’ವಿರುದ್ಧ’ ಟಿವಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಉತ್ತಮ ಅಭಿನೇತ್ರಿ (ಜ್ಯೂರಿ) ಇಂಡಿಯನ್ ಟೆಲಿ ಅವಾರ್ಡ ಲಭಿಸಿದೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+