ವಿಜಯಪುರದಲ್ಲಿ ಹುಟ್ಟಿ ಬೆಳೆದ ಶಿವಾನಂದ ಪಾಟೀಲರು ಯುವಕರಾಗಿದ್ದಾನಿಂದಲೇ ರಾಜಕೀಯ ರಂಗದತ್ತ ಆಕರ್ಷಿತರಾಗಿದ್ದರು. 1992 ರಲ್ಲಿ ಬಿಜಾಪುರ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಬ್ಯಾಂಕಿನ ಅಧ್ಯಕ್ಷರಾಗಿ ಚುನಾಯಿತರಾದಾಗ ಇವರು ಸ್ಥಳೀಯ ರಾಜಕಾರಣದಲ್ಲಿ ಮೂಚೂಣಿಗೆ ಬಂದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ತಿಕೋಟಾ ಶಾಸಕ ಬಿ.ಎಂ. ಪಾಟೀಲ ಅವರ ನಿಧನದಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಜೆಡಿಎಸ್ ಅಭ್ಯರ್ಥಿಯಾಗಿ ತಿಕೋಟಾ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ ಶಿವಾನಂದ ಪಾಟೀಲರು ಎಂ.ಬಿ. ಪಾಟೀಲ (ಬಿ.ಎಂ. ಪಾಟೀಲರ ಮಗ) ಅವರ ವಿರುದ್ಧ ಸೋಲನುಭವಿಸಿದರು. ಆದರೆ ತದನಂತರ 1994 ಹಾಗೂ 1999 ಎರಡೂ ಚುನಾವಣೆಗಳಲ್ಲಿ ಎಂ.ಬಿ. ಪಾಟೀಲರನ್ನು ಸೋಲಿಸಿ ಸೇಡು ತೀರಿಸಿಕೊಂಡರು. 1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ 2004 ರ ಚುನಾವಣೆಗೂ ಮುನ್ನ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕರೆಗೆ ಓಗೊಟ್ಟು ಕಾಂಗ್ರೆಸ್ ಸೇರಿ ಬಸವನ ಬಾಗೇವಾಡಿ ಕ್ಷೇತ್ರದಿಂದ ಕಣಕ್ಕಿಳಿದರು. ಪ್ರಸ್ತುತ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಇವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾಗಿದ್ದಾರೆ. ಇವರ ಸಹೋದರ ವಿಜುಗೌಡ ಪಾಟೀಲರು ಸಹ ರಾಜಕೀಯದಲ್ಲಿದ್ದು ಅವರು ಬಿಜೆಪಿಯ ಸದಸ್ಯರಾಗಿದ್ದಾರೆ.
| ಪೂರ್ಣ ಹೆಸರು | ಶಿವಾನಂದ ಎಸ್. ಪಾಟೀಲ |
| ಜನ್ಮ ದಿನಾಂಕ | 23 Apr 1964 (ವಯಸ್ಸು 61) |
| ಹುಟ್ಟಿದ ಸ್ಥಳ | ವಿಜಯಪುರ (ಬಿಜಾಪುರ) |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | Others |
| ಉದ್ಯೋಗ | ಔಷಧಿ ವ್ಯಾಪಾರ ಹಾಗೂ ಕೃಷಿ |
| ತಂದೆಯ ಹೆಸರು | ಸಿದ್ರಾಮಗೌಡ ಪಾಟೀಲ |
| ತಾಯಿಯ ಹೆಸರು | N/A |
| ಅವಲಂಬಿತರ ಹೆಸರು | ಶ್ರೀಮತಿ ಭಾಗ್ಯಶ್ರೀ |
| ಅವಲಂಬಿತರ ಉದ್ಯೋಗ | ಖಾಸಗಿ ಉದ್ಯೋಗ ಹಾಗೂ ಕೃಷಿ |
| ಮಕ್ಕಳು | 2 ಪುತ್ರ(ರು) 2 ಪುತ್ರಿ(ಯರು) |
| ಧರ್ಮ | ಹಿಂದು |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.