ಮುಖ್ಯಪುಟ
 » 
ಸೆಲ್ವಿ ಜೆ.ಜಯಲಲಿತಾ

ಸೆಲ್ವಿ ಜೆ.ಜಯಲಲಿತಾ

ಸೆಲ್ವಿ ಜೆ.ಜಯಲಲಿತಾ

ಚಿತ್ರರಂಗದಲ್ಲಿ ಬಾಲನಟಿಯಾಗಿ ಬೆಳೆದ ಜಯಲಲಿತಾ ಯೌವನದಲ್ಲಿ ಚಿತ್ರರಂಗದ ಖ್ಯಾತನಾಮ ಚಿತ್ರಗಳಲ್ಲಿ ಪ್ರಮುಖ ಭೂಮಿಕೆಯಲ್ಲಿ ನಟಿಸಿ ನಂತರ ರಾಜಕಾರಣದಲ್ಲಿ ಮಿಂಚಿದವರು. ಹುಟ್ಟಿದ್ದು ಕರ್ನಾಟಕವಾದರೂ ಅವರ ರಾಜಕೀಯ ಭವಿಷ್ಯವನ್ನು ಕಂಡುಕೊಂಡಿದ್ದು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು.

ಸೆಲ್ವಿ ಜೆ.ಜಯಲಲಿತಾ ಜೀವನ ಚರಿತ್ರೆ

ಚಿತ್ರರಂಗದಲ್ಲಿ ಬಾಲನಟಿಯಾಗಿ ಬೆಳೆದ ಜಯಲಲಿತಾ ಯೌವನದಲ್ಲಿ ಚಿತ್ರರಂಗದ ಖ್ಯಾತನಾಮ ಚಿತ್ರಗಳಲ್ಲಿ ಪ್ರಮುಖ ಭೂಮಿಕೆಯಲ್ಲಿ ನಟಿಸಿ ನಂತರ ರಾಜಕಾರಣದಲ್ಲಿ ಮಿಂಚಿದವರು. ಹುಟ್ಟಿದ್ದು ಕರ್ನಾಟಕವಾದರೂ ಅವರ ರಾಜಕೀಯ ಭವಿಷ್ಯವನ್ನು ಕಂಡುಕೊಂಡಿದ್ದು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. 1961ರಲ್ಲಿ ಶ್ರೀ ಶೈಲ ಮಹಾತ್ಮೆ ಕನ್ನಡ ಚಲನಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಜಯಲಲಿತಾ 1965ರಲ್ಲಿ ಪ್ರಥಮ ತಮಿಳು ಚಿತ್ರ ವೆನ್ನಿರಾ ಆಡೈನಲ್ಲಿ ನಟಿಸಿ ಗಮನ ಸೆಳೆದರು. ನಂತರದಲ್ಲಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಜತೆ 28, ಶಿವಾಜಿ ಗಣೇಶನ್ ಜತೆ 17 ಚಿತ್ರಗಳಲ್ಲಿ ನಟಿಸಿ ಹಲವಾರು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾದರು. ಎಂಜಿಆರ್ ಸ್ಥಾಪಿಸಿದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಖಳಗಂ (ಎಐಎಡಿಎಂಕೆ) ರಾಜಕೀಯ ಪಕ್ಷ ಸೇರ್ಪಡೆಯೊಂದಿಗೆ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು.
1984-89ರಲ್ಲಿ ರಾಜ್ಯಸಭಾ ಸದಸ್ಯರು, 1987ರಲ್ಲಿ ಎಂಜಿಆರ್ ನಿಧನರಾದರು. 1989ರಿಂದ ಎಐಎಡಿಎಂಕೆಯ ನೇತೃತ್ವ ವಹಿಸಿಕೊಂಡ ಜಯಲಲಿತಾ 1991ರಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರು. ಪೂರ್ಣಪ್ರಮಾಣದ ಮತ್ತು ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು ಆರು ಬಾರಿ ಸಿಎಂ ಪದವಿಗೇರಿದರು. ಅಕ್ರಮ ಆಸ್ತಿ ಸಂಪಾದನೆ ದೂರು, ವಿಚಾರಣೆ ಅಡಿಯಲ್ಲಿ ಅವರನ್ನು ಜೈಲಿಗೂ ಹಾಕಲಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ 75 ದಿನಗಳಿಗೂ ಹೆಚ್ಚು ಕಾಲ ಆಸ್ಪತ್ರೆಗೆ ಸೇರಿದ ಅವರು, 5 ಡಿಸೆಂಬರ್ 2016ರಂದು ಇಹಲೋಕ ತ್ಯಜಿಸಿದರು. ಅವರ ಸಾವೂ ಕೂಡ ವಿವಾದದೊಂದಿಗೆ ಅಂತ್ಯಕಂಡಿತು.

ಮತ್ತಷ್ಟು ಓದು
By Ajay M V Updated: Monday, February 8, 2021, 12:46:10 PM [IST]

ಸೆಲ್ವಿ ಜೆ.ಜಯಲಲಿತಾ ವಯಕ್ತಿಕ ಜೀವನ

ಪೂರ್ಣ ಹೆಸರು ಸೆಲ್ವಿ ಜೆ.ಜಯಲಲಿತಾ
ಜನ್ಮ ದಿನಾಂಕ 24 Feb 1948
ಮೃತಪಟ್ಟ ದಿನಾಂಕ 05 Dec 2016 (ವಯಸ್ಸು 68)
ಹುಟ್ಟಿದ ಸ್ಥಳ ಮೇಲುಕೋಟೆ, ಮಂಡ್ಯಜಿಲ್ಲೆ, ಮೈಸೂರು, ಕರ್ನಾಟಕ
ಪಕ್ಷದ ಹೆಸರು All India Anna Dravida Munnetra Kazhagam
ವಿದ್ಯಾರ್ಹತೆ 10th Pass
ಉದ್ಯೋಗ ಚಿತ್ರನಟಿ, ನೃತ್ಯಪಟು, ಬರಹಗಾರ್ತಿ, ರಾಜಕಾರಣಿ
ತಂದೆಯ ಹೆಸರು ಜಯರಾಂ
ತಾಯಿಯ ಹೆಸರು ವೇದವಲ್ಲಿ

ಸೆಲ್ವಿ ಜೆ.ಜಯಲಲಿತಾ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹111.69 CRORE
ಆಸ್ತಿ:₹113.73 CRORE
ಸಾಲಸೋಲ: ₹2.04 CRORE

ಸೆಲ್ವಿ ಜೆ.ಜಯಲಲಿತಾ ಕುರಿತು ಆಸಕ್ತಿದಾಯಕ ಸಂಗತಿಗಳು

ಚೆನ್ನೈನ ಚರ್ಚ್ ಪಾರ್ಕ್ ಕಾನ್ವೆಂಟ್ ಶಾಲೆಯಲ್ಲಿ ಮೆಟ್ರಿಕ್ ಪೂರೈಸಿದ ಜಯಲಲಿತಾ ನಂತರದಲ್ಲಿ ಚಿತ್ರರಂಗದಲ್ಲಿನ ನಟನೆಯನ್ನು ವೃತ್ತಿಯಾಗಿ ಪೂರ್ಣಪ್ರಮಾಣದಲ್ಲಿ ಕೈಗೊಂಡರು. ಈ ವೇಳೆ ಉನ್ನತ ಅಧ್ಯಯನಕ್ಕಾಗಿ 1964ರಲ್ಲಿ ಅವರಿಗೆ ಶಿಷ್ಯವೇತನ ಲಭಿಸಿದರೂ ಅವರು ಶಿಕ್ಷಣ ಮುಂದುವರೆಸಲು ಆಗಲಿಲ್ಲ. ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಸುಮಾರು 140ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಜಯಲಲಿತಾ ಅವರ ತಾಯಿ ಕೂಡ ನಟಿಯಾಗಿದ್ದು, ತೆರೆಯ ಮೇಲೆ ಅವರಿಗೆ ಸಂಧ್ಯಾ ಎಂದು ಕರೆಯಲಾಗುತ್ತಿತ್ತು. ರಾಜ್ಯಸಭೆ ಸದಸ್ಯರಾಗಿದ್ದ ವೇಳೆ ಜಯಲಲಿತಾ ಅವರ ಭಾಷಣಕ್ಕೆ ಮನಸೋತ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದರು. ಜಯಲಲಿತಾ ಅವರ ದತ್ತು ಪುತ್ರ ಸುಧಾಕರನ್ ಆಗಿದ್ದು, ಆತನ ಅದ್ದೂರಿ ಮದುವೆಯಿಂದಾಗಿ ಜಯಲಲಿತಾ ಹಲವು ವಿವಾದ, ಆರೋಪಗಳಿಗೆ ಗುರಿಯಾಗಬೇಕಾಯಿತು.

ಸೆಲ್ವಿ ಜೆ.ಜಯಲಲಿತಾ ಸಾಧನೆಗಳು

ಜಯಲಲಿತಾ ಬಾಲ್ಯದಿಂದಲೂ ಭರತನಾಟ್ಯ, ಕೂಚಿಪುಡಿ, ಮೋಹಿನಿಯಾಟ್ಟಂ ಮತ್ತು ಮಣಿಪುರ ಕಥಕ್ ನಾಟ್ಯಗಳಲ್ಲಿ ಪರಿಣತಿ ಪಡೆದಿದ್ದರು. 1972ರಲ್ಲಿ ನಟನೆಗಾಗಿ ಕಲೈಮಾಮಣಿ ಪ್ರಶಸ್ತಿಗೆ ಭಾಜನರಾಗಿದ್ದರು. 1986ರಲ್ಲಿ ತಮಿಳುನಾಡು ವಿಧಾನಸಭೆಯ ಮೊದಲ ಮಹಿಳಾ ವಿಪಕ್ಷ ನಾಯಕಿಯಾಗಿ ಕೆಲಸ ಮಾಡಿದರು. ಜಯಲಲಿತಾ ಅವರನ್ನು ಅವರ ಹಿಂಬಾಲಕರು ಪುರುಚ್ಛಿ ತಲೈವಿ ಹಾಗೂ ನಂತರದಲ್ಲಿ ಅಮ್ಮಾ ಎಂದು ಕರೆಯುತ್ತಿದ್ದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X