Get Updates
Get notified of breaking news, exclusive insights, and must-see stories!

ಸೌಗತ ರಾಯ್

ಸೌಗತ ರಾಯ್
ಸುದೀರ್ಘ ಕಾಲದಿಂದ ರಾಜಕೀಯ ಕ್ಷೇತ್ರದಲ್ಲಿರುವ ಸೌಗತ ರಾಯ್ ಅವರು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು. ಇವರು ಕಾನೂನು ಮತ್ತು ಭೌತಶಾಸ್ತ್ರ ವಿಷಯದಲ್ಲಿ ಪದವಿ ಪಡೆದು ನಂತರ ಶಿಕ್ಷಣ ತಜ್ಞರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
By Anushree | Friday, April 9, 2021, 06:41:12 PM [IST]

ಸೌಗತ ರಾಯ್ ಜೀವನ ಚರಿತ್ರೆ

ಸುದೀರ್ಘ ಕಾಲದಿಂದ ರಾಜಕೀಯ ಕ್ಷೇತ್ರದಲ್ಲಿರುವ ಸೌಗತ ರಾಯ್ ಅವರು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು. ಇವರು ಕಾನೂನು ಮತ್ತು ಭೌತಶಾಸ್ತ್ರ ವಿಷಯದಲ್ಲಿ ಪದವಿ ಪಡೆದು ನಂತರ ಶಿಕ್ಷಣ ತಜ್ಞರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಅಶೋತೋಶ್ ಕಾಲೇಜಿನಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಬೋಧನೆ ಮಾಡಿ ನಂತರ ನಿವೃತ್ತರಾದರು. 1977 ರಲ್ಲಿ ನಡೆದ 6ನೇ ಲೋಕಸಭಾ ಚುನಾವಣೆಯಲ್ಲಿ ಬರಾಕ್‌ಪೋರ್ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾಯಿತರಾದರು. ಈ ಗೆಲುವಿನ ನಂತರ, ಅವರು 1979 ರಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ರಾಜ್ಯ ಸಚಿವರಾಗಿ ನೇಮಕಗೊಂಡರು.

ಬಳಿಕ 2009ರಲ್ಲಿ ದಮ್ ದಮ್ ಕ್ಷೇತ್ರದಿಂದ 15 ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರ ನಗರಾಭಿವೃದ್ಧಿಯ
ರಾಜ್ಯ ಸಚಿವರಾದರು. 2014 ರಲ್ಲಿ ಮೂರನೆ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಚುನಾಯಿತರಾದರು. 1987 ರಿಂದ 2009 ರವರೆಗೆ ಐದು ಬಾರಿ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಇವರದು.

ಮತ್ತಷ್ಟು ಓದು

ಸೌಗತ ರಾಯ್ ವಯಕ್ತಿಕ ಜೀವನ

ಪೂರ್ಣ ಹೆಸರು ಸೌಗತ ರಾಯ್
ಜನ್ಮ ದಿನಾಂಕ 06 Aug 1947 (ವಯಸ್ಸು 78)
ಹುಟ್ಟಿದ ಸ್ಥಳ ಶಿಲ್ಲಾಂಗ್ (ಮೇಘಾಲಯ)
ಪಕ್ಷದ ಹೆಸರು All India Trinamool Congress
ವಿದ್ಯಾರ್ಹತೆ Post Graduate
ಉದ್ಯೋಗ ಶಿಕ್ಷಣ ತಜ್ಞ
ತಂದೆಯ ಹೆಸರು ದೇಬೇಶ್ ಚಂದ್ರ ರಾಯ್
ತಾಯಿಯ ಹೆಸರು ಶ್ರೀಮತಿ ಅನಿಲಾ ರಾಯ್
ಅವಲಂಬಿತರ ಹೆಸರು ಶ್ರೀಮತಿ ಡಾಲಿ ರಾಯ್
ಅವಲಂಬಿತರ ಉದ್ಯೋಗ ಇಲ್ಲ

ಸೌಗತ ರಾಯ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹1.7 CRORE
ಆಸ್ತಿ
₹1.95 CRORE
ಸಾಲಸೋಲ
₹25 LAKHS

ಸೌಗತ ರಾಯ್ ಕುರಿತು ಆಸಕ್ತಿದಾಯಕ ಸಂಗತಿಗಳು

1979 ರಲ್ಲಿ ನಡೆದ 6 ನೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, ಕೇಂದ್ರ ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ರಾಜ್ಯ ಸಚಿವರಾಗಿ ಆಯ್ಕೆಯಾದರು.

ಸೌಗತ ರಾಯ್ ರಾಜಕೀಯ ಟೈಮ್‌ಲೈನ್

  • 2014 - 2016 : ಸಾರ್ವಜನಿಕ ಸಂಸ್ಥೆಗಳ ಸಮಿತಿಯ ಸದಸ್ಯರಾಗಿದ್ದರು.
  • 2009 - 2012 : ಕೇಂದ್ರ ನಗರಾಭಿವೃದ್ಧಿಯ ರಾಜ್ಯ ಸಚಿವರಾದರು.
  • 2009 : ಎರಡನೇ ಅವಧಿಗೆ 15 ನೇ ಲೋಕಸಭೆ ಚುನಾವಣೆಯಲ್ಲಿ ಮರು ಆಯ್ಕೆಯಾದರು.
  • 1987-2009 : ಪಶ್ಚಿಮ ಬಂಗಾಳ ವಿಧಾನಸಭೆಗೆ ಐದು ಬಾರಿ ಗೆದ್ದು ಸೇವೆ ಸಲ್ಲಿಸಿದರು.
  • 1979 : ಕೇಂದ್ರ ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ರಾಜ್ಯ ಸಹಾಯಕ ಸಚಿವರಾಗಿದ್ದರು
  • 1977 : 6ನೇ ಲೋಕಸಭೆಯಲ್ಲಿ ಸ್ಪರ್ಧಿಸಿ ಚುನಾಯಿತರಾದರು. ಬಳಿಕ ಗವರ್ನಮೆಂಟ್ ಅಶೂರೆನ್ಸ್ ಸಮಿತಿಯ ಸದಸ್ಯರಾಗಿದ್ದರು.
  • 1973-77 : ಪಶ್ಚಿಮ ಬಂಗಾಳ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
  • 1968-70 : ಪಶ್ಚಿಮ ಬಂಗಾಳ ಛತ್ರ ಪರಿಷದ್ ಮತ್ತು ಕಾಂಗ್ರೆಸ್ಸಿನ ವಿದ್ಯಾರ್ಥಿ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
  • 29 April 2015 : ಸಂಸತ್ ಭವನದಲ್ಲಿನ ಭದ್ರತೆಯ ಜಂಟಿ ಸಮಿತಿಗೆ ಸದಸ್ಯರಾಗಿ ಇದ್ದರು.
  • 11 Dec. 2014 : ಹಣಕಾಸು ಇಲಾಖೆಯ ಜಂಟಿ ಸಮಿತಿಗೆ ಸದಸ್ಯರಾದರು.
  • 1 May 2017 : ಸಾರ್ವಜನಿಕ ಸಂಸ್ಥೆಗಳ ಸಮಿತಿಗೂ ಸದಸ್ಯರಾದರು.
  • 1 Sep. 2014 : ನಿಯಮಗಳ ಸಮಿತಿ, ಹಣಕಾಸು ಸ್ಥಾಯಿ ಸಮಿತಿ, ಸಮಾಲೋಚನಾ ಸಮಿತಿ, ರಕ್ಷಣಾ ಸಚಿವಾಲಯ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು.
  • : ಮೂರನೇ ಅವಧಿಗೆ 16 ನೇ ಲೋಕಸಭೆಗೆ ಮರು ಆಯ್ಕೆಯಾದರು.

ಹಿಂದಿನ ಇತಿಹಾಸ

  • 1974 - 2007: ಅಶುತೋಷ್ ಕಾಲೇಜಿನಲ್ಲಿ ಭೌತಶಾಸ್ತ್ರದ ಉಪನ್ಯಾಸಕರಾಗಿದ್ದರು.
  • 1970-72: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿದ್ದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+