Get Updates
Get notified of breaking news, exclusive insights, and must-see stories!

ಸರ್ಬಾನಂದಾ ಸೋನೊವಾಲ್

ಸರ್ಬಾನಂದಾ ಸೋನೊವಾಲ್
ಸರ್ಬಾನಂದಾ ಸೋನೊವಾಲ್ ಅಸ್ಸಾಂ ರಾಜ್ಯದ 14 ನೇ ಮುಖ್ಯಮಂತ್ರಿಯಾಗಿದ್ದಾರೆ. ಸರ್ಬಾನಂದಾ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದು ಅಸ್ಸಾನ ಮಜುಲಿ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ.
By Zainab Ashraf | Monday, April 29, 2019, 06:14:14 PM [IST]

ಸರ್ಬಾನಂದಾ ಸೋನೊವಾಲ್ ಜೀವನ ಚರಿತ್ರೆ

ಸರ್ಬಾನಂದಾ ಸೋನೊವಾಲ್ ಅಸ್ಸಾಂ ರಾಜ್ಯದ 14 ನೇ ಮುಖ್ಯಮಂತ್ರಿಯಾಗಿದ್ದಾರೆ. ಸರ್ಬಾನಂದಾ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದು ಅಸ್ಸಾನ ಮಜುಲಿ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದ ಇವರು ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು. ಇವರೊಬ್ಬ ಫೈರ್ ಬ್ರ್ಯಾಂಡ್ ಹಾಗೂ ಕ್ರಿಯಾಶೀಲ ಯುವ ರಾಜಕಾರಣಿಯಾಗಿ ಪ್ರಸಿದ್ಧರಾಗಿದ್ದಾರೆ. ಅಸ್ಸಾಂನ ಅತಿ ಹಳೆಯ ವಿದ್ಯಾರ್ಥಿ ಸಂಘಟನೆಗಳಲ್ಲೊಂದಾಗಿರುವ ಎಎಎಸ್‌ಯು ಇವರಿಗೆ ’ಜತಿಯಾ ನಾಯಕ’ ಎಂಬ ಬಿರುದು ನೀಡಿದೆ.

ಮತ್ತಷ್ಟು ಓದು

ಸರ್ಬಾನಂದಾ ಸೋನೊವಾಲ್ ವಯಕ್ತಿಕ ಜೀವನ

ಪೂರ್ಣ ಹೆಸರು ಸರ್ಬಾನಂದಾ ಸೋನೊವಾಲ್
ಜನ್ಮ ದಿನಾಂಕ 31 Oct 1961 (ವಯಸ್ಸು 64)
ಹುಟ್ಟಿದ ಸ್ಥಳ ಮೋಲೊಕಗಾಂವ, ದಿಬ್ರುಗಢ ಜಿಲ್ಲೆ, ಅಸ್ಸಾಂ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ರಾಜಕಾರಣಿ, ಸಲಹಾಗಾರ ಮತ್ತು ಕೃಷಿಕ
ತಂದೆಯ ಹೆಸರು ಜಿಬೇಸ್ವರ ಸೋನೊವಾಲ್
ತಾಯಿಯ ಹೆಸರು ಶ್ರೀಮತಿ ದಿನೇಶ್ವರಿ ಸೋನೊವಾಲ್
ಅವಲಂಬಿತರ ಹೆಸರು Not Known
ವೆಬ್‌ಸೈಟ್ https://cm.assam.gov.in/

ಸರ್ಬಾನಂದಾ ಸೋನೊವಾಲ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹4.5 CRORE
ಆಸ್ತಿ
₹4.76 CRORE
ಸಾಲಸೋಲ
₹25.78 LAKHS

ಸರ್ಬಾನಂದಾ ಸೋನೊವಾಲ್ ಕುರಿತು ಆಸಕ್ತಿದಾಯಕ ಸಂಗತಿಗಳು

ಕಾಲೇಜಿನಲ್ಲಿರುವಾಗ ಇವರು ’ಮಿಸ್ಟರ್ ದಿಬ್ರುಗಢ ಸ್ಟ್ರಾಂಗಮ್ಯಾನ್’ ಟೈಟಲ್ ಗೆದ್ದುಕೊಂಡಿದ್ದರು. ವೇಗದ ಕಾರು ಹಾಗೂ ಬೈಕ್‌ಗಳ ಬಗ್ಗೆ ಇವರಿಗೆ ಆಸಕ್ತಿ ಜಾಸ್ತಿ. ಅಸ್ಸಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ಪ್ರಥಮ ಹಾಗೂ ಬುಡಕಟ್ಟು ಜನಾಂಗದ ಎರಡನೇ ವ್ಯಕ್ತಿಯಾಗಿದ್ದಾರೆ. ಮೀನುಗಾರಿಕೆ ಕಸುಬಿನ ಬಗ್ಗೆ ಇವರಿಗೆ ಹೆಮ್ಮೆ ಇದೆ.

ಸರ್ಬಾನಂದಾ ಸೋನೊವಾಲ್ ಸಾಧನೆಗಳು

ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ’ಅಕ್ರಮ ವಲಸೆ (ಟ್ರಿಬ್ಯುನಲ್‌ನಿಂದ ನಿರ್ಧರಿಸುವಿಕೆ) ಕಾಯ್ದೆ, 1983’ ರ ವಿರುದ್ಧ ಸರ್ಬಾನಂದಾ ಸೋನೊವಾಲ್ ಸುಪ್ರೀಂ ಕೋರ್ಟನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ ಈ ಕಾಯ್ದೆಯನ್ನು ಸಂವಿಧಾನ ಬಾಹಿರ ಎಂದು ಸಾರಿ 2005 ರಲ್ಲಿ ಕಾಯ್ದೆಯನ್ನೇ ರದ್ದುಗೊಳಿಸಿತ್ತು. ಸೋನೊವಾಲ್ ಅವರ ಕಾಲಾವಧಿಯಲ್ಲಿ ಉದ್ಘಾಟನೆಗೊಂಡ ಬ್ರಹ್ಮಪುತ್ರ ಹಾಗೂ ಲೋಹಿತ್ ನದಿಗಳ ಮಧ್ಯೆ ನಿರ್ಮಿಸಲಾದ ಭಾರತದ ಅತಿ ಉದ್ದನೆಯ ಸೇತುವೆಯ ಕಾರಣದಿಂದ ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಇಡೀ ಈಶಾನ್ಯ ರಾಜ್ಯಗಳ ಅರ್ಥವ್ಯವಸ್ಥೆಗೆ ಬಲ ಸಿಕ್ಕಂತಾಗಿದೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+