1950 ರಲ್ಲಿ ಜನಿಸಿದ ಸಂಗಣ್ಣ ಕರಡಿ ಹೈದರಾಬಾದ ಕರ್ನಾಟಕ ಭಾಗದ ಪ್ರಮುಖ ರಾಜಕೀಯ ಮುಖಂಡರಲ್ಲೊಬ್ಬರಾಗಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯವರಾದ ಇವರು ಕೊಪ್ಪಳದಿಂದ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ವೃತ್ತಿ ಆರಂಭಿಸಿದರು. 2008 ರಲ್ಲಿ ಜೆಡಿಎಸ್‌ನಿಂದ ಕರ್ನಾಟಕ ವಿಧಾನ ಸಭೆಗೆ ಇವರು ಆಯ್ಕೆಯಾದರು. ಆದರೆ 2011 ರಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದರು. ನಂತರ 2011 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೊಪ್ಪಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯ ವಿಧಾನ ಸಭೆಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ನಿಜವಾದ ಶಕ್ತಿ, ಸಾಮರ್ಥ್ಯ ತೋರಿಸಿದರು. ಆದರೆ 2013 ರ ವಿಧಾನ ಸಭಾ ಚುನಾವಣೆಯಲ್ಲಿ ಸಂಗಣ್ಣ ಕರಡಿ ಸೋಲನುಭವಿಸಿದರು. ನಂತರ 2014 ರಲ್ಲಿ ನಡೆದ 16ನೇ ಲೋಕಸಭಾ ಚುನಾವಣೆಗೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ಜಯಶಾಲಿಯಾಗಿ ಸಂಸದರಾಗಿ ಆಯ್ಕೆಯಾದರು. ಕೇಂದ್ರ ಜವಳಿ ಖಾತೆಯ ಕೃಷಿ ಹಾಗೂ ಸಲಹಾ ಸ್ಥಾಯಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
| ಪೂರ್ಣ ಹೆಸರು | ಕರಡಿ ಸಂಗಣ್ಣ ಅಮರಪ್ಪ |
| ಜನ್ಮ ದಿನಾಂಕ | 08 May 1950 (ವಯಸ್ಸು 75) |
| ಹುಟ್ಟಿದ ಸ್ಥಳ | ಹೊಳೆನರಸೀಪುರ, ಹಾಸನ ಜಿಲ್ಲೆ, ಕರ್ನಾಟಕ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | 10th Pass |
| ಉದ್ಯೋಗ | ಸಾಮಾಜಿಕ ಕಾರ್ಯಕರ್ತ |
| ತಂದೆಯ ಹೆಸರು | ದಿವಂಗತ ದೊಡ್ಡೇಗೌಡ |
| ತಾಯಿಯ ಹೆಸರು | ದೇವಮ್ಮ |
| ಅವಲಂಬಿತರ ಹೆಸರು | ಶ್ರೀಮತಿ ಚೆನ್ನಮ್ಮ |
| ಮಕ್ಕಳು | 4 ಪುತ್ರ(ರು) 2 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.