• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಸಚಿನ ಪೈಲಟ್

ಸಚಿನ ಪೈಲಟ್

ಜೀವನ ಚರಿತ್ರೆ

ಸಚಿನ ಪೈಟಲ್ ಭಾರತದ ಅತ್ಯಂತ ಕಿರಿಯ ವಯಸ್ಸಿನ ಸಂಸದರಲ್ಲೊಬ್ಬರಾಗಿದ್ದಾರೆ. ಇವರು ಹಿರಿಯ ರಾಜಕಾರಣಿಯಾಗಿದ್ದ ರಾಜೇಶ ಪೈಲಟ್ ಅವರ ಸುಪುತ್ರರು. ಸಚಿನ ಪೈಲಟ್ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಬಿಎ ಆನರ್ಸ್ ಪದವಿ ಪಡೆದಿದ್ದಾರೆ. ಪದವಿ ಶಿಕ್ಷಣದ ನಂತರ ಬಿಬಿಸಿಯ ದೆಹಲಿ ಬ್ಯೂರೋದಲ್ಲಿ ಪತ್ರಕರ್ತರಾಗಿ, ನಂತರ ಜನರಲ್ ಮೋಟರ್ ಕಾರ್ಪೊರೇಶನ್ ಉದ್ಯೋಗಿಯಾಗಿ ಕೆಲಸ ಮಾಡಿದರು. ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಬಿಸಿನೆಸ್ ಸ್ಕೂಲ್‌ನಲ್ಲಿ ಮಲ್ಟಿನ್ಯಾಷನಲ್ ಮ್ಯಾನೇಜಮೆಂಟ್ ಹಾಗೂ ಫೈನಾನ್ಸ್ ವಿಷಯದಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಇವರು ಸಕ್ರಿಯ ರಾಜಕಾರಣಕ್ಕೆ ಬರಲು ನಿರ್ಧರಿಸಿದರು. 2019 ರಲ್ಲಿ ತಮ್ಮ 26ನೇ ವಯಸ್ಸಿನಲ್ಲಿ ರಾಜಸ್ಥಾನದ ದೌಸಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸುವ ಮೂಲಕ ಭಾರತದ ಅತಿ ಕಿರಿಯ ವಯಸ್ಸಿನ ಸಂಸದರಾಗಿ ಆಯ್ಕೆಯಾದರು. 2009 ರಲ್ಲಿ ಅಜ್ಮೇರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಯುಪಿಎ ಸರಕಾರದಲ್ಲಿ ರಾಜ್ಯ ದರ್ಜೆಯ ಸಚಿವರಾದರು. ಸರಕಾರದ ಹಲವಾರು ಸಮಿತಿಗಳ ಸದಸ್ಯರಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಇವರು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದಾರೆ. 2004 ರಲ್ಲಿ ಸಾರಾ ಅಬ್ದುಲ್ಲಾ ಅವರೊಂದಿಗೆ ವಿವಾಹವಾದರು. ಸಾರಾ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅವರ ಸುಪುತ್ರಿ.

ವಯಕ್ತಿಕ ಜೀವನ

ಪೂರ್ಣ ಹೆಸರು ಸಚಿನ ಪೈಲಟ್
ಜನ್ಮ ದಿನಾಂಕ 07 Sep 1977 (ವಯಸ್ಸು 45)
ಹುಟ್ಟಿದ ಸ್ಥಳ ಸಹಾರನಪುರ, ಉತ್ತರ ಪ್ರದೇಶ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Post Graduate
ಉದ್ಯೋಗ ಕೃಷಿಕ, ಪತ್ರಕರ್ತ ಹಾಗೂ ಮಿಲಿಟರಿ ಅಧಿಕಾರಿ
ತಂದೆಯ ಹೆಸರು ದಿವಂಗತ ರಾಜೇಶ ಪೈಲಟ್
ತಾಯಿಯ ಹೆಸರು ರಮಾ ಪೈಲಟ್
ಅವಲಂಬಿತರ ಹೆಸರು ಸಾರಾ ಪೈಲಟ್
ಅವಲಂಬಿತರ ಉದ್ಯೋಗ ಸಾಮಾಜಿಕ ಕಾರ್ಯಕರ್ತೆ
ಮಕ್ಕಳು 2 ಪುತ್ರ(ರು)

ವಿಳಾಸ

ಖಾಯಂ ವಿಳಾಸ ನಂ.6, ಕನ್ವರ ನಗರ, ಗ್ರಾಮೀಣ ಬಸ್ರಿ, ತೆಹಸೀಲ ಕೋಟಪುತಲಿ, ಜೈಪುರ ಜಿಲ್ಲೆ
ಪ್ರಸ್ತುತ ವಿಳಾಸ ಬೈದಪುರಾ ಗ್ರಾಮ, ಗೌತಮ ಬುದ್ಧ ನಗರ ಜಿಲ್ಲೆ, ಉತ್ತರ ಪ್ರದೇಶ
ಸಂಪರ್ಕ ಸಂಖ್ಯೆ 9013137777
ಈ ಮೇಲ್ spilot1234@gmail.com
ವೆಬ್‌ಸೈಟ್ http://www.sachinpilot.com/
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ವಿಮಾನ ಚಾಲನೆ ಮಾಡುವುದು ಹಾಗೂ ಶೂಟಿಂಗ್ ಸಚಿನ್ ಅವರ ಮೆಚ್ಚಿನ ಹವ್ಯಾಸಗಳಾಗಿವೆ. 1995 ರಲ್ಲಿ ಅಮೆರಿಕೆಯ ನ್ಯೂಯಾರ್ಕನಲ್ಲಿ ಪ್ರೈವೇಟ್ ಪೈಲಟ್ ಲೈಸೆನ್ಸ್ (ಪಿಪಿಎಲ್) ಪಡೆದರು. ರಾಷ್ಟ್ರಮಟ್ಟದ ಹಲವಾರು ರೈಫಲ್ ಹಾಗೂ ಪಿಸ್ತೂಲ್ ಶೂಟಿಂಗ್ ಚಾಂಪಿಯನಶಿಪ್‌ಗಳಲ್ಲಿ ಇವರು ದೆಹಲಿಯನ್ನು ಪ್ರತಿನಿಧಿಸಿದ್ದಾರೆ. ಇವರನ್ನು ಪ್ರಾದೇಶಿಕ ಸೇನಾಪಡೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಿಸಲಾಗಿದೆ. ಇದೇ ಕಾರಣಕ್ಕೆ ಇವರನ್ನು ಲೆಫ್ಟಿನೆಂಟ್ ಪೈಲಟ್ ಎಂದು ಕರೆಯಲಾಗುತ್ತದೆ. ರೈತರ ಹಾಗೂ ಯುವಜನತೆಯ ವಿಷಯಗಳಲ್ಲಿ ಇವರು ಆಸಕ್ತಿ ಹೊಂದಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳು, ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಅರ್ಥವ್ಯವಸ್ಥೆ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ, ವಿದೇಶಾಂಗ ವ್ಯವಹಾರ ವಿಷಯಗಳಲ್ಲಿ ಇವರು ವಿಶೇಷ ಆಸಕ್ತಿ ಹೊಂದಿದ್ದಾರೆ. ತಮ್ಮ ತಂದೆ ದಿ. ರಾಜೇಶ ಪೈಲಟ್ ಅವರ ಕುರಿತು 2001 ರಲ್ಲಿ ‘ರಾಜೇಶ ಪೈಲಟ್ : ಇನ್ ಸ್ಪಿರಿಟ್ ಫಾರೆವರ್’ (Rajesh Pilot : In Spirit Forever) ಎಂಬ ಪುಸ್ತಕ ಬರೆದಿದ್ದಾರೆ.

ರಾಜಕೀಯ ಕಾಲಾನುಕ್ರಮ

 • 2018
  2018ರಲ್ಲಿ ರಾಜಸ್ಥಾನದ ಟೋಂಕ್ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿ ಯೂನುಸ್ ಖಾನ್ ಅವರನ್ನು 59,179 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಚುನಾಯಿತರಾದರು.
 • 2014
  ಜನೆವರಿ 13, 2014 ರಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ ನೇಮಕಗೊಂಡರು.
 • 2014
  2014ರಲ್ಲಿ ಅಜ್ಮೇರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಸನ್ವಾರ ಲಾಲ್ ಜಾಟ್ ಅವರ ಎದುರು 1,71,983 ಮತಗಳ ಅಂತರದಿಂದ ಸೋಲನುಭವಿಸಿದರು.
 • 2012
  ಅಕ್ಟೋಬರ್ 28, 2012 ರಿಂದ ಮೇ 2014 ರವರೆಗೆ ಕೇಂದ್ರ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಖಾತೆ (ಸ್ವತಂತ್ರ ನಿರ್ವಹಣೆ) ಸಚಿವರಾಗಿದ್ದರು.
 • 2009
  ಬಿಜೆಪಿಯ ಕಿರಣ ಮಹೇಶ್ವರಿ ಅವರನ್ನು ಸೋಲಿಸಿ ಮತ್ತೊಮ್ಮೆ ಸಂಸದರಾಗಿ 15ನೇ ಲೋಕಸಭೆಯ ಸದಸ್ಯರಾದರು. 2009 ರಿಂದ ಅಕ್ಟೋಬರ್ 28, 2012 ರವರೆಗೆ ಕೇಂದ್ರ ಸರಕಾರದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ದರ್ಜೆಯ ಸಚಿವರಾಗಿ ಕೆಲಸ ಮಾಡಿದರು.
 • 2006
  ಆಗಸ್ಟ್ 5, 2006 ರಿಂದ 2009 ರವರೆಗೆ ನಾಗರಿಕ ವಿಮಾನಯಾನ ಖಾತೆ ಸಲಹಾ ಸಮಿತಿಯ ಸದಸ್ಯ ಹಾಗೂ ಗೃಹ ವ್ಯವಹಾರ ಸಮಿತಿಯ ಸದಸ್ಯರಾಗಿದ್ದರು.
 • 2004
  ರಾಜಸ್ಥಾನದ ದೌಸಾ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು. ಈ ಚುನಾವಣೆಯಲ್ಲಿ ಬಿಜೆಪಿಯ ಕರ್ತಾರ ಸಿಂಗ್ ಭದಾನಾ ಅವರನ್ನು 1,14,865 ಮತಗಳ ಭಾರಿ ಅಂತರದಿಂದ ಸೋಲಿಸಿದರು. ನಂತರ ಗೃಹ ವ್ಯವಹಾರ ಸಮಿತಿಯ ಸದಸ್ಯರಾದರು.

2004 ರಲ್ಲಿ ತಮ್ಮ 26ನೇ ವಯಸ್ಸಿನಲ್ಲಿ ಸಂಸದರಾಗಿ ಅತಿ ಕಿರಿಯ ವಯಸ್ಸಿನ ಸಂಸದರೆಂದು ಗುರುತಿಸಿಕೊಂಡರು. 2008 ರಲ್ಲಿ ವರ್ಲ್ಡ್ ಎಕನಾಮಿಕ್ ಫೋರಂನ ’ಯಂಗ್ ಗ್ಲೋಬಲ್ ಲೀಡರ್ಸ್’ ಆಗಿ ಇವರು ಆಯ್ಕೆಯಾಗಿದ್ದರು.
ಒಟ್ಟು ಆಸ್ತಿ5.39 CRORE
ಆಸ್ತಿ5.39 CRORE
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಆಲ್ಬಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X