Get Updates
Get notified of breaking news, exclusive insights, and must-see stories!

ಎಸ್.ಪಿ. ಮುದ್ದಹನುಮೇಗೌಡ

ಎಸ್.ಪಿ. ಮುದ್ದಹನುಮೇಗೌಡ
ತುಮಕೂರು ಕ್ಷೇತ್ರದ ಮಾಜಿ ಸಂಸದ ಎಸ್. ಪಿ.
By Rashmi | Thursday, September 1, 2022, 05:25:39 PM [IST]

ಎಸ್.ಪಿ. ಮುದ್ದಹನುಮೇಗೌಡ ಜೀವನ ಚರಿತ್ರೆ

ತುಮಕೂರು ಕ್ಷೇತ್ರದ ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಸೆಪ್ಟೆಂಬರ್ 1, 2022ರಂದು ಕಾಂಗ್ರೆಸ್ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದರು. 2023ರ ವಿಧಾನಸಭೆ ಚುನಾವಣೆಗೆ ಕುಣಿಗಲ್‌ನಿಂದ ಕಣಕ್ಕಿಳಿಯುತ್ತೇನೆ ಎಂದು ಹೇಳಿದರು.

ತುಮಕೂರು ಜಿಲ್ಲೆಯ ಚಿಕ್ಕ ಹಳ್ಳಿ ಸೋಬಗಾನಹಳ್ಳಿಯಲ್ಲಿ ಜನಿಸಿದ ಎಸ್. ಪಿ. ಮುದ್ದಹನುಮೇಗೌಡರ ವೃತ್ತಿಯಿಂದ ವಕೀಲರಾದರೂ ಕೃಷಿ ಹವ್ಯಾಸವಾಗಿದೆ. ಬೆಂಗಳೂರಿನ ಎಸ್.ಜೆ.ಆರ್. ಕಾನೂನು ಮಹಾವಿದ್ಯಾಲಯದಿಂದ ಇವರು ಎಲ್‌ಎಲ್‌ಬಿ ಪದವಿ ಪಡೆದುಕೊಂಡರು.

ಆರಂಭದಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿ 1983ರಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ನೇಮಕಗೊಂಡು 1986ರವರೆಗೆ ಈ ಸ್ಥಾನದಲ್ಲಿದ್ದರು. 1999 ರಲ್ಲಿ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಕರ್ನಾಟಕ ವಿಧಾನ ಸಭೆಯ ಶಾಸಕರಾಗಿ ಆಯ್ಕೆಯಾದರು.

ತಮ್ಮ ಗೆಲುವಿನ ಓಟ ಮುಂದುವರಿಸಿದ ಇವರು 2004ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದರು. 2014ರಲ್ಲಿ ನಡೆದ 16ನೇ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 74041 ಅಧಿಕ ಮತಗಳ ಅಂತರದಿಂದ ಗೆದ್ದರು.

2019ರ ಲೋಕಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಕ್ಷೇತ್ರದಲ್ಲಿ ಎಸ್‌. ಪಿ. ಮುದ್ದಹನುಮೇಗೌಡರಿಗೆ ಸ್ಪರ್ಧಿಸಲು ಟಿಕೆಟ್ ನೀಡಿರಲಿಲ್ಲ.

ಮತ್ತಷ್ಟು ಓದು

ಎಸ್.ಪಿ. ಮುದ್ದಹನುಮೇಗೌಡ ವಯಕ್ತಿಕ ಜೀವನ

ಪೂರ್ಣ ಹೆಸರು ಎಸ್.ಪಿ. ಮುದ್ದಹನುಮೇಗೌಡ
ಜನ್ಮ ದಿನಾಂಕ 08 Jun 1954 (ವಯಸ್ಸು 71)
ಹುಟ್ಟಿದ ಸ್ಥಳ ಸೋಬಗಾನಹಳ್ಳಿ, ತುಮಕೂರು ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Graduate Professional
ಉದ್ಯೋಗ ನ್ಯಾಯವಾದಿ, ಕೃಷಿಕ
ತಂದೆಯ ಹೆಸರು ಶ್ರೀ ಕರಿಗೌಡ ಅಲಿಯಾಸ್ ಪಾಪೇಗೌಡ
ತಾಯಿಯ ಹೆಸರು ಶ್ರೀಮತಿ ಶಾರದಮ್ಮ
ಅವಲಂಬಿತರ ಹೆಸರು ಶ್ರೀಮತಿ ಕಲ್ಪನಾ
ಮಕ್ಕಳು 1 ಪುತ್ರ(ರು) 2 ಪುತ್ರಿ(ಯರು)

ಎಸ್.ಪಿ. ಮುದ್ದಹನುಮೇಗೌಡ ಒಟ್ಟು ಆಸ್ತಿ

ಒಟ್ಟು ಆಸ್ತಿ
₹3.03 CRORE
ಆಸ್ತಿ
₹3.03 CRORE
ಸಾಲಸೋಲ
N/A

ಎಸ್.ಪಿ. ಮುದ್ದಹನುಮೇಗೌಡ ಕುರಿತು ಆಸಕ್ತಿದಾಯಕ ಸಂಗತಿಗಳು

ಓದುವುದು, ಸಂಗೀತ ಆಲಿಸುವುದು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಇವರಿಗೆ ಆಸಕ್ತಿ ಜಾಸ್ತಿ.

ರಾಜಕೀಯಕ್ಕೆ ಬರುವ ಮೊದಲು ವಕೀಲರಾಗಿದ್ದರು.

ಎಸ್.ಪಿ. ಮುದ್ದಹನುಮೇಗೌಡ ರಾಜಕೀಯ ಟೈಮ್‌ಲೈನ್

  • 2022: ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿದರು.
  • 2014 sept. : ಅಧೀನ ಶಾಸನ ಸಮಿತಿಯ ಸದಸ್ಯರು, ಕೈಗಾರಿಕಾ ಸ್ಥಾಯಿ ಸಮಿತಿ ಸದಸ್ಯರು, ಸಾರಿಗೆ ಮತ್ತು ಹೆದ್ದಾರಿ ಹಾಗೂ ಬಂದರು ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
  • 2014 may : 16ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು.
  • 1999 : ಕರ್ನಾಟಕ ವಿಧಾನ ಸಭೆಯ ಶಾಸಕರಾದರು.
  • 1994 : ಕರ್ನಾಟಕ ವಿಧಾನ ಸಭೆಯ ಶಾಸಕರಾದರು.

ಹಿಂದಿನ ಇತಿಹಾಸ

  • 1997: ಕಲ್ಪನಾ ಅವರೊಂದಿಗೆ ವಿವಾಹ
  • 1983: ನ್ಯಾಯಾಂಗ ಅಧಿಕಾರಿಯಾಗಿ ಸೇವೆ

ಎಸ್.ಪಿ. ಮುದ್ದಹನುಮೇಗೌಡ ಸಾಧನೆಗಳು

1983 ರಿಂದ 1986 ರವರೆಗೆ ನ್ಯಾಯಾಂಗ ಅಧಿಕಾರಿಯಾಗಿ ಸೇವೆ

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+