Get Updates
Get notified of breaking news, exclusive insights, and must-see stories!

ರವಿಶಂಕರ ಪ್ರಸಾದ

ರವಿಶಂಕರ ಪ್ರಸಾದ
ರವಿಶಂಕರ ಪ್ರಸಾದ್ ಅವರು ಒಬ್ಬ ನ್ಯಾಯವಾದಿಯಾಗಿದ್ದರು. ನಂತರ ರಾಜಕಾರಣ ಪ್ರವೇಶಿಸಿದ ಅವರು ೨೦೦೦ ದಿಂದ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಚುನಾಯಿತರಾದರು.
By Zainab Ashraf | Sunday, January 31, 2021, 12:48:12 PM [IST]

ರವಿಶಂಕರ ಪ್ರಸಾದ ಜೀವನ ಚರಿತ್ರೆ

ರವಿಶಂಕರ ಪ್ರಸಾದ್ ಅವರು ಒಬ್ಬ ನ್ಯಾಯವಾದಿಯಾಗಿದ್ದರು. ನಂತರ ರಾಜಕಾರಣ ಪ್ರವೇಶಿಸಿದ ಅವರು ೨೦೦೦ ದಿಂದ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಚುನಾಯಿತರಾದರು. 2001-03 ರವರೆಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕಾನೂನು, ನ್ಯಾಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಬಿಹಾರದ ಪಾಟ್ನಾಸಾಹಿಬ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಟ ಹಾಗೂ ರಾಜಕಾರಣಿ ಶತೃಘ್ನ ಸಿನ್ಹಾ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ನರೇಂದ್ರ ಮೋದಿ ಆಡಳಿತದ ಎರಡನೇ ಅವಧಿಯಲ್ಲಿ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತಷ್ಟು ಓದು

ರವಿಶಂಕರ ಪ್ರಸಾದ ವಯಕ್ತಿಕ ಜೀವನ

ಪೂರ್ಣ ಹೆಸರು ರವಿಶಂಕರ ಪ್ರಸಾದ
ಜನ್ಮ ದಿನಾಂಕ 30 Aug 1954 (ವಯಸ್ಸು 71)
ಹುಟ್ಟಿದ ಸ್ಥಳ ಪಾಟ್ನಾ (ಬಿಹಾರ)
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ NULL
ಉದ್ಯೋಗ ಹಿರಿಯ ನ್ಯಾಯವಾದಿ, ಸುಪ್ರೀಂ ಕೋರ್ಟ್, ನವದೆಹಲಿ
ತಂದೆಯ ಹೆಸರು ದಿ. ಶ್ರೀ ಠಾಕೂರ ಪ್ರಸಾದ
ತಾಯಿಯ ಹೆಸರು ಶ್ರೀಮತಿ ಬಿಮ್ಲಾ ಪ್ರಸಾದ
ಅವಲಂಬಿತರ ಹೆಸರು ಹೆಂಡತಿ ಶ್ರೀಮತಿ ಮಾಯಾ ಶಂಕರ್
ಅವಲಂಬಿತರ ಉದ್ಯೋಗ ಪಾಟ್ನಾ ವಿವಿಯಲ್ಲಿ ಇತಿಹಾಸ ವಿಭಾಗದಲ್ಲಿ ಉಪನ್ಯಾಸಕಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು
ವೆಬ್‌ಸೈಟ್ ravishankarprasad.in

ರವಿಶಂಕರ ಪ್ರಸಾದ ಒಟ್ಟು ಆಸ್ತಿ

ಒಟ್ಟು ಆಸ್ತಿ
₹40.61 CRORE
ಆಸ್ತಿ
₹40.61 CRORE
ಸಾಲಸೋಲ
N/A

ರವಿಶಂಕರ ಪ್ರಸಾದ ಕುರಿತು ಆಸಕ್ತಿದಾಯಕ ಸಂಗತಿಗಳು

ಬಿಹಾರದಲ್ಲಿ ಜೈ ಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಆಂದೋಲನವನ್ನು ಮುನ್ನಡೆಸಿ, 1977ರ ತುರ್ತುಪರಿಸ್ಥಿತಿಯಲ್ಲಿ ಜೈಲುಶಿಕ್ಷೆಯನ್ನೂ ಅನುಭವಿಸಿದ್ದಾರೆ.

ರವಿಶಂಕರ ಪ್ರಸಾದ ರಾಜಕೀಯ ಟೈಮ್‌ಲೈನ್

  • 2019: ಪಾಟ್ನಾ ಸಾಹೀಬ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ. ಈ ಕ್ಷೇತ್ರದ ಮೂರು ಬಾರಿ ಸಂಸದರಾಗಿದ್ದ ನಟ ಹಾಗೂ ರಾಜಕಾರಣಿ ಶತೃಘ್ನ ಸಿನ್ಹಾ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆ. ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿ ಸೇವೆ.
  • 2018 : ನಾಲ್ಕನೇ ಬಾರಿಗೆ ರಾಜ್ಯಸಭೆಗೆ ಪುನರಾಯ್ಕೆ
  • 2016 : ಕಾನೂನು, ನ್ಯಾಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಸೇವೆ
  • 2012 : ಹಣಕಾಸು ಮಂತ್ರಾಲಯದ ಸಮಿತಿ ಸದಸ್ಯ, ವ್ಯವಹಾರಗಳ ಸಲಹಾ ಸಮಿತಿ ಸದಸ್ಯ
  • 2012 : ರಾಜ್ಯಸಭೆಗೆ ಮೂರನೇ ಬಾರಿಗೆ ಮರುಆಯ್ಕೆ
  • 2009 : ಹಣಕಾಸು ಮಂತ್ರಾಲಯದ ಸಮಾಲೋಚಕ ಸಮಿತಿ ಸದಸ್ಯ
  • 2009 : ಮಾಹಿತಿ ತಂತ್ರಜ್ಞಾನ ಸಮಿತಿ ಸದಸ್ಯ
  • 2006 : ರಾಜ್ಯಸಭೆಗೆ ಎರಡನೇ ಬಾರಿಗೆ ಮರುಆಯ್ಕೆ ವಿದೇಶಾಂಗ ಇಲಾಖೆ ಮಂತ್ರಾಲಯದ ಸಮಾಲೋಚಕ ಸಮಿತಿ ಸದಸ್ಯ
  • 2004 : ಹಣಕಾಸು ಮಂತ್ರಾಲಯದ ಸಮಾಲೋಚಕ ಸಮಿತಿ ಸದಸ್ಯ
  • 2004 : ಸಂಸತ್ನ ಸ್ಥಳೀಯ ಪ್ರದೇಶಾಭಿವೃದ್ಧಿ ಸಮಿತಿ ಸದಸ್ಯ (ರಾಜ್ಯಸಭೆ)
  • 2004 : ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ ಸದಸ್ಯ
  • 2003 : ಮಾಹಿತಿ ಮತ್ತು ಪ್ರಚಾರ ಖಾತೆ ಸ್ವತಂತ್ರ್ಯ ಸಚಿವರಾಗಿ ಸೇವೆ
  • 2002 : ಕಾನೂನು ಮತ್ತು ನ್ಯಾಯ ಮಂತ್ರಾಲಯದ ರಾಜ್ಯ ಖಾತೆ ಸಚಿವರಾಗಿ ಆಯ್ಕೆ
  • 2001 : ಕಲ್ಲಿದ್ದಲು ಮತ್ತು ಗಣಿಗಾರಿಕೆ ಖಾತೆ ರಾಜ್ಯ ಸಚಿವರಾಗಿ ನೇಮಕ
  • 2000 : ರಾಜ್ಯಸಭಾ ಸದಸ್ಯರಾಗಿ ನೇಮಕ, ಜತೆಗೆ ಪೆಟ್ರೋಲಿಯಂ ಮತ್ತು ರಾಸಾಯನಿಕ ಸಮಿತಿ ಸದಸ್ಯ, ಹಣಕಾಸು ಮಂತ್ರಾಲಯದ ಸಮಾಲೋಚಕ ಸಮಿತಿ ಸದಸ್ಯ

ಹಿಂದಿನ ಇತಿಹಾಸ

  • 2000: ನವದೆಹಲಿಯ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿಯಾಗಿ ಸೇವೆ
  • 1999: ಪಾಟ್ನಾ ಹೈಕೋರ್ಟ್ನ ಹಿರಿಯ ನ್ಯಾಯವಾದಿಯಾಗಿ ಪದೋನ್ನತಿ
  • 1980: ಪಾಟ್ನಾ ಹೈಕೋರ್ಟ್ನಲ್ಲಿ ನ್ಯಾಯವಾದಿ

ರವಿಶಂಕರ ಪ್ರಸಾದ ಸಾಧನೆಗಳು

ನಾಗರೀಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾಗಿಯೂ ಗುರುತಿಸಿಕೊಂಡಿರುವ ರವಿಶಂಕರ್ ಪ್ರಸಾದ ಈ ಕುರಿತು ಹಿಂದಿ ಮತ್ತು ಇಂಗ್ಲೀಷ್ನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂವಾದಗಳಲ್ಲಿ ಪಾಲ್ಗೊಂಡವರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+