Get Updates
Get notified of breaking news, exclusive insights, and must-see stories!

ರವಿ ಸೀತಾರಾಮ ನಾಯ್ಕ

ರವಿ ಸೀತಾರಾಮ ನಾಯ್ಕ
ಪೊಂಡಾದಲ್ಲಿ ಬಾರ್ ಹಾಗೂ ರೆಸ್ಟೊರೆಂಟ್ ಆರಂಭಿಸುವುದರೊಂದಿಗೆ ಇವರು ತಮ್ಮ ವೃತ್ತಿ ಜೀವನ ಆರಂಭಿಸಿದರು. 1947 ರಲ್ಲಿ ಜನಿಸಿದ ರವಿ ನಾಯ್ಕ ಗೋವಾ ಕಾಂಗ್ರೆಸ್‌ನ ಪ್ರಮುಖ ಮುಖಂಡರಾಗಿದ್ದಾರೆ.
By Administrator | Friday, February 1, 2019, 05:56:02 PM [IST]

ರವಿ ಸೀತಾರಾಮ ನಾಯ್ಕ ಜೀವನ ಚರಿತ್ರೆ

ಪೊಂಡಾದಲ್ಲಿ ಬಾರ್ ಹಾಗೂ ರೆಸ್ಟೊರೆಂಟ್ ಆರಂಭಿಸುವುದರೊಂದಿಗೆ ಇವರು ತಮ್ಮ ವೃತ್ತಿ ಜೀವನ ಆರಂಭಿಸಿದರು. 1947 ರಲ್ಲಿ ಜನಿಸಿದ ರವಿ ನಾಯ್ಕ ಗೋವಾ ಕಾಂಗ್ರೆಸ್‌ನ ಪ್ರಮುಖ ಮುಖಂಡರಾಗಿದ್ದಾರೆ. ಇವರು ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಸದಸ್ಯರಾಗಿ ಇವರು ತಮ್ಮ ರಾಜಕೀಯ ಜೀವನ ಆರಂಭಿಸಿದರು. 1980 ರಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ವತಿಯಿಂದ ಪ್ರಥಮ ಬಾರಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಅವರು ಸೋಲನುಭವಿಸಿದರು. ಗೋಮಾಂತಕ ಪಕ್ಷ ತೊರೆದ ನಂತರ ಇವರು 1991 ರಲ್ಲಿ ಹಾಗೂ 1994 ರಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಯಾದರು. ಸತತವಾಗಿ ಅಲ್ಲದಿದ್ದರೂ 1984 ರಿಂದ ಹಲವಾರು ಅವಧಿಗಳಲ್ಲಿ ಇವರು ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ಮತ್ತಷ್ಟು ಓದು

ರವಿ ಸೀತಾರಾಮ ನಾಯ್ಕ ವಯಕ್ತಿಕ ಜೀವನ

ಪೂರ್ಣ ಹೆಸರು ರವಿ ಸೀತಾರಾಮ ನಾಯ್ಕ
ಜನ್ಮ ದಿನಾಂಕ 18 Sep 1946
ಮೃತಪಟ್ಟ ದಿನಾಂಕ 15 Oct 2025 (ವಯಸ್ಸು 79)
ಹುಟ್ಟಿದ ಸ್ಥಳ ಗೋವಾ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Post Graduate
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಸೀತಾರಾಮ ನಾಯ್ಕ
ತಾಯಿಯ ಹೆಸರು NA
ಅವಲಂಬಿತರ ಹೆಸರು NA
ಮಕ್ಕಳು 2 ಪುತ್ರ(ರು)

ರವಿ ಸೀತಾರಾಮ ನಾಯ್ಕ ಒಟ್ಟು ಆಸ್ತಿ

ಒಟ್ಟು ಆಸ್ತಿ
₹7.79 CRORE
ಆಸ್ತಿ
₹8.11 CRORE
ಸಾಲಸೋಲ
₹31.26 LAKHS

ರವಿ ಸೀತಾರಾಮ ನಾಯ್ಕ ಕುರಿತು ಆಸಕ್ತಿದಾಯಕ ಸಂಗತಿಗಳು

ರಾಜಕಾರಣಿಯಾದರೂ ಇವರು ಕೃಷಿಕರಾಗಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಹೆಸರು ಮಾಡಿದ್ದಾರೆ. ತೋಟಗಾರಿಕೆ, ಸಂಗೀತ ಆಲಿಸುವುದು, ಓದುವುದು ಹಾಗೂ ಟಿವಿ ನೋಡುವುದು ಮೆಚ್ಚಿನ ಹವ್ಯಾಸಗಳಾಗಿವೆ. ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟುವಾಗಿರುವ ಗೋವಾದ ಏಕೈಕ ಜನಪ್ರತಿನಿಧಿಯಾಗಿ ರವಿ ನಾಯ್ಕ ಗುರುತಿಸಿಕೊಂಡಿದ್ದಾರೆ. ಇವರಿಗೆ ಬ್ಯಾಡ್ಮಿಂಟನ್ ಇಷ್ಟದ ಆಟವಾಗಿದೆ. 1994 ರಲ್ಲಿ ಕೇವಲ 6 ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದು ಇವರ ರಾಜಕೀಯ ಜೀವನದ ಕುತೂಹಲಕಾರಿ ಸಂಗತಿಯಾಗಿದೆ.

ರವಿ ಸೀತಾರಾಮ ನಾಯ್ಕ ರಾಜಕೀಯ ಟೈಮ್‌ಲೈನ್

  • 2012: ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಮಾಮ್ಲೆದಾರ ಲಾವೊ ಅವರ ವಿರುದ್ಧ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲನುಭವಿಸಿದರು.
  • 2007: ಪೊಂಡಾ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮಾಮ್ಲೆದಾರ ಲಾವೊ ಅವರನ್ನು ಸೋಲಿಸುವ ಮೂಲಕ ಮತ್ತೊಮ್ಮೆ ಶಾಸಕರಾದರು.
  • 2002: ರವಿ ನಾಯ್ಕ ಅವರು ಕಾಂಗ್ರೆಸ್ ಟಿಕೆಟ್‌ನಿಂದ ಪೊಂಡಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ಶ್ರೀಪಾದ ಯೆಸ್ಸೊ ನಾಯ್ಕ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು.
  • 1998-99: ಲೋಕಸಭೆಯ ಗೃಹ ಇಲಾಖೆ ವ್ಯವಹಾರಗಳ ಸಮಿತಿ ಸದಸ್ಯರಾಗಿ, ವಾಣಿಜ್ಯ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
  • 1998: 1998 ರಲ್ಲಿ ಪಣಜಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗ ಸ್ಪರ್ಧಿಸಿ ಬಿಜೆಪಿಯ ಪಾಂಡುರಂಗ ದತ್ತಾರಾಮ ರಾವೂತ ಅವರನ್ನು ಸೋಲಿಸಿ 12ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು.
  • 1993 - 94: ವ್ಯವಹಾರ ಸಲಹಾ ಸಮಿತಿ ಚೇರಮನ್‌ರಾಗಿ, ಬಿಲ್ ನಂ.35, 1993ರ ಗೋವಾ ನಗರಸಭೆಗಳ (ತಿದ್ದುಪಡಿ) ಕಾಯ್ದೆ, 1993 ನ್ನು ಜಾರಿಗೆ ತರಲು ರಚಿಸಲಾದ ಆಯ್ಕೆ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದರು.
  • 1991-93: ಜನೆವರಿ 25, 1991 ರಿಂದ ಮೇ 18, 1993 ರವರೆಗೆ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗೃಹ ಖಾತೆ, ನಗರ ಹಾಗೂ ಪಟ್ಟಣ ಯೋಜನೆ, ಸಿಬ್ಬಂದಿ, ಸಾಮಾನ್ಯ ಆಡಳಿತ, ವಿಚಕ್ಷಣ ಹಾಗೂ ಹಣಕಾಸು ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದರು. 1991 ರಿಂದ 1992 ರ ಅವಧಿಯಲ್ಲಿ ವ್ಯವಹಾರ ಸಲಹಾ ಸಮಿತಿ ಚೇರಮನ್‌ರಾಗಿ, ಗೋವಾಗೆ ಕೇಂದ್ರದ ಹೆಚ್ಚಿನ ನೆರವು ಪಡೆಯಲು ರಚಿಸಲಾದ ಸದನ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು.
  • 1991: 1991 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
  • 1990: 1990 ರಲ್ಲಿ ಕೃಷಿ, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆಗಳ ಕ್ಯಾಬಿನೆಟ್ ದರ್ಜೆ ಸಚಿವರಾಗಿ ನೇಮಿಸಲ್ಪಟ್ಟರು. 1990 ರ ಮಾರ್ಚನಿಂದ ಡಿಸೆಂಬರ್‌ವರೆಗೆ ಅವರು ಈ ಸಚಿವ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸಿದರು.
  • 1989 - 94: ಪ್ರಥಮ ಗೋವಾ ವಿಧಾನಸಭೆಯ ಶಾಸಕರಾಗಿ ಚುನಾಯಿತರಾದರು. 1989 ರಿಂದ 90 ರ ಅವಧಿಯಲ್ಲಿ ಅಂದಾಜು ಸಮಿತಿಯ ಚೇರಮನ್‌ರಾಗಿ ಕಾರ್ಯನಿರ್ವಹಿಸಿದರು.
  • 1985 - 87: 1985 ರಿಂದ 1986 ರ ಅವಧಿಯಲ್ಲಿ ಗೋವಾ ವಿಧಾನಸಭೆಯ ಅಂದಾಜು ಸಮಿತಿಯ ಚೇರಮನ್‌ರಾಗಿ, 1986 ರಿಂದ 1987 ರ ಅವಧಿಯಲ್ಲಿ ಸದನ ಪ್ರತಿನಿಧಿ ಸಮಿತಿಯ ಸದಸ್ಯರಾಗಿ ಮತ್ತು ಅಂದಾಜು ಸಮಿತಿಯ ಚೇರಮನ್‌ರಾಗಿ ಆಯ್ಕೆಯಾದರು.
  • 1984 - 89: ಗೋವಾದ ಪೊಂಡಾ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾದರು.
  • 1980: 1980 ರಲ್ಲಿ ರವಿ ನಾಯ್ಕ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಅಧ್ಯಕ್ಷರಾದರು. ಪಕ್ಷದ ಟಿಕೆಟ್‌ನಿಂದ ಪ್ರಥಮ ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತರು.
  • 1978: ಗೋವಾದ ಪೊಂಡಾ ನಗರ ಪಾಲಿಕೆಯ ನಗರ ಸೇವಕರಾಗಿ ಚುನಾಯಿತರಾದರು.
  • 1975: ರವಿ ನಾಯ್ಕ 1975 ರಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಯುವ ಘಟಕದ ಸದಸ್ಯರಾದರು.
  • ಅಕ್ಟೋಬರ್ 24, 2000 ದಿಂದ ಫೆಬ್ರವರಿ 27, 2002 ರವರೆಗೆ: ಗೋವಾದ ಉಪ ಮುಖ್ಯಮಂತ್ರಿಯಾಗಿ ಲೋಕೋಪಯೋಗಿ, ಪಶು ಸಂಗೋಪನೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಗಳ ಜವಾಬ್ದಾರಿ ನಿಭಾಯಿಸಿದರು.
  • ಜೂನ್ 9, 1999 ರಿಂದ ನವೆಂಬರ್ 24, 1999 ರವರೆಗೆ: ಲೋಕೋಪಯೋಗಿ, ವಸತಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮುದ್ರಣ ಮತ್ತು ಸ್ಟೇಸನರಿ ಖಾತೆಗಳ ಕ್ಯಾಬಿನೆಟ್ ಸಚಿವರಾಗಿ ಕೆಲಸ ಮಾಡಿದರು.
  • ಏಪ್ರಿಲ್ 2, 1994 ರಿಂದ ಏಪ್ರಿಲ್ 8, 1994: ಕೇವಲ ಆರು ದಿನಗಳ ಅವಧಿಗಾಗಿ ಗೋವಾ ಮುಖ್ಯಮಂತ್ರಿಯಾಗಿದ್ದರು.

ಹಿಂದಿನ ಇತಿಹಾಸ

  • 1980: ಪೊಂಡಾದಲ್ಲಿ ಬಾರ್ ಹಾಗೂ ರೆಸ್ಟೊರೆಂಟ್ ಆರಂಭಿಸುವ ಮೂಲಕ ವೃತ್ತಿ ಜೀವನಕ್ಕೆ ಕಾಲಿಟ್ಟರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+