ಕರ್ನಾಟಕ ರಾಜ್ಯದ ರಾಜಕಾರಣಿಯಾಗಿರುವ ರಮೇಶ ಜಿಗಜಿಣಗಿ ಪ್ರಸ್ತುತ ಕೇಂದ್ರ ಸರಕಾರದಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆಯ ರಾಜ್ಯ ದರ್ಜೆ ಸಚಿವರಾಗಿದ್ದಾರೆ. 1998 ರಿಂದ ನಡೆದ 5 ಲೋಕಸಭಾ ಚುನಾವಣೆಗಳಲ್ಲಿ ಸತತವಾಗಿ ಜಯ ಸಾಧಿಸಿದ ಹೆಗ್ಗಳಿಕೆ ಹೊಂದಿರುವ ಇವರು 12, 13, 14, 15 ಹಾಗೂ 16 ನೇ ಲೋಕಸಭೆಗಳ ಸಂಸದರಾಗಿ ಚುನಾಯಿತರಾಗಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಇವರೊಬ್ಬ ಪೊಲೀಸ್ ಅಧಿಕಾರಿಯಾಗಿದ್ದರು ಹಾಗೂ ಸಂಗೀತದಲ್ಲಿ ಅಪಾರವಾದ ಅಭಿರುಚಿ ಹೊಂದಿದ್ದರು. ದಲಿತರ ಹಕ್ಕುಗಳನ್ನು ಕಾಪಾಡುವಲ್ಲಿ ಇವರು ಸತತವಾಗಿ ಹೋರಾಡುತ್ತ ಬಂದಿದ್ದಾರೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ 3 ಬಾರಿ ಆಯ್ಕೆಯಾಗಿದ್ದ ಇವರು ಪ್ರಸ್ತುತ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ತನ್ನ ರಾಜಕೀಯ ಗುರು ರಾಮಕೃಷ್ಣ ಹೆಗಡೆ ಅವರು ನಿಧನರಾಗುವವರೆಗೂ ಜನತಾ ದಳದಲ್ಲಿದ್ದ ಜಿಗಜಿಣಗಿ, ನಂತರ ಬಿಜೆಪಿ ಸೇರಿದರು. ಸತತವಾಗಿ ಸಂಸದರಾಗಿ ಆಯ್ಕೆಯಾಗುವ ಮುನ್ನ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಕರ್ನಾಟಕ ವಿಧಾನ ಸಭೆಯ ಶಾಸಕರೂ ಆಗಿದ್ದರು.
| ಪೂರ್ಣ ಹೆಸರು | ರಮೇಶ ಜಿಗಜಿಣಗಿ |
| ಜನ್ಮ ದಿನಾಂಕ | 28 Jun 1952 (ವಯಸ್ಸು 73) |
| ಹುಟ್ಟಿದ ಸ್ಥಳ | ಅಥರ್ಗಾ, ವಿಜಯಪುರ, ಕರ್ನಾಟಕ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Graduate |
| ಉದ್ಯೋಗ | ಕೃಷಿಕ, ಸಂಗೀತಗಾರ, ವ್ಯಾಪಾರಿ, ಉದ್ಯಮಿ |
| ತಂದೆಯ ಹೆಸರು | ಶ್ರೀ ಚಂದಪ್ಪ |
| ತಾಯಿಯ ಹೆಸರು | ಶ್ರೀಮತಿ ಬೌರಮ್ಮ |
| ಅವಲಂಬಿತರ ಹೆಸರು | ಶ್ರೀಮತಿ ಶೋಭಾ |
| ಅವಲಂಬಿತರ ಉದ್ಯೋಗ | ಹೌಸ್ ವೈಫ್ |
| ಮಕ್ಕಳು | 2 ಪುತ್ರ(ರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.