• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ರಮೇಶ್‌ ಜಾರಕಿಹೊಳಿ

ರಮೇಶ್‌ ಜಾರಕಿಹೊಳಿ

ಜೀವನ ಚರಿತ್ರೆ

ಬೆಳಗಾವಿ ಜಿಲ್ಲೆಯ ಜಾರಕಿಹೊಳಿ ಕುಟುಂಬಕ್ಕೆ ಸೇರಿದ ಪ್ರಭಾವಿ ರಾಜಕಾರಣಿ ರಮೇಶ್ ಜಾರಕಿಹೊಳಿ. ಯಾವುದೇ ಪಕ್ಷದಲ್ಲಿರಲಿ ಪಕ್ಷದ ಹೊರತಾಗಿಯೂ ವೈಯಕ್ತಿಕ ವರ್ಚಸ್ಸಿನ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಪ್ರಭಾವ ಹೊಂದಿರುವವರು.

ಪ್ರಸ್ತುತ ಬಿಜೆಪಿಯಲ್ಲಿರುವ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಗೋಕಾಕ ವಿಧಾನಸಭಾ ಕ್ಷೇತ್ರದ ಶಾಸಕರು. ರಮೇಶ್ ಜಾರಕಿಹೊಳಿ ಪದವೀಧರರು. ರಾಜಕೀಯಕ್ಕೆ ಬರುವ ಮೊದಲು ಉದ್ಯಮಿಯಾಗಿ, ಕೃಷಿಕರಾಗಿದ್ದರು. ಈಗಲೂ ಇವರು ಸಕ್ಕರೆ ಕಾರ್ಖನೆಗಳ ಒಡೆತನ ಹೊಂದಿದ್ದಾರೆ.

ಮೊದಲು ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಆರಂಭಿಸಿದ ರಮೇಶ್ ಜಾರಕಿಹೊಳಿ ಸದ್ಯ ಬಿಜೆಪಿಯಲ್ಲಿದ್ದಾರೆ. ಜಾರಕಿಹೊಳಿ ಕುಟುಂಬದ ನಾಲ್ವರು ಸಹೋದರರಲ್ಲಿ ರಮೇಶ್ ಜಾರಕಿಹೊಳಿ ಅವರು ಸಹ ಒಬ್ಬರು. ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ 'ಬೆಳಗಾವಿ ಸಾಹುಕಾರ' ಎಂದೇ ಖ್ಯಾತಿ ಪಡೆದಿದ್ದಾರೆ.

1999ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದು 55 ಸಾವಿರ ಮತಗಳ ಅಂತರದಿಂದ ಸಂಯುಕ್ತ ಜನತಾದಳದ ಸದಾಶಿವರನ್ನು ಸೋಲಿಸಿ ಶಾಸಕರಾದರು. ಬಳಿಕ 6 ಬಾರಿ ಗೋಕಾಕ್ ಕ್ಷೇತ್ರದಿಂದ ಅವರು ಗೆಲುವು ಕಂಡಿದ್ದಾರೆ.

ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ರಮೇಶ್ ಜಾರಕಿಹೊಳಿ ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿ ಸಹ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಸುಮಾರು 2 ದಶಕಗಳಿಂದ ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಬೆಳಗಾವಿಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯದಲ್ಲೇ ಯಾವುದೇ ಸರ್ಕಾರ ಬರಲಿ ಜಾರಕಿಹೊಳಿ ಕುಟುಂಬದ ಒಬ್ಬರು ಸಚಿವರಾಗಿರುತ್ತಾರೆ ಎಂಬ ಮಟ್ಟಿಗೆ ಈ ಕುಟುಂಬ ರಾಜ್ಯ ರಾಜಕೀಯದಲ್ಲಿ ಪ್ರಭಾವ ಹೊಂದಿದೆ.

ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ, ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಾರಕಿಹೊಳಿ ಕುಟುಂಬದ ಸದಸ್ಯರು, ರಮೇಶ್‌ ಜಾರಕಿಹೊಳಿ ವಿವಿಧ ಖಾತೆಗಳ ಸಚಿವರಾಗಿದ್ದರು.

2018ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳುವಂತೆ ಮಾಡುವಲ್ಲಿ ರಮೇಶ್‌ ಜಾರಕಿಹೊಳಿ ಪ್ರಭಾವ ಇರುವುದು ಗುಟ್ಟಾಗಿ ಏನೂ ಉಳಿದಿಲ್ಲ. 2018ರಲ್ಲಿ ಗೋಕಾಕ್‌ನಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆದ್ದಿದ್ದ ರಮೇಶ್ ಜಾರಕಿಹೊಳಿ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರ ಬೀಳಿಸಿ, ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಸಹೋದರನನ್ನೇ ಸೋಲಿಸಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2019ರಲ್ಲಿ ಬಿ. ಎಸ್.‌ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ರಮೇಶ್‌ ಜಾರಕಿಹೊಳಿ ಸಚಿವರಾಗಿದ್ದರು. ಜಲಸಂಪನ್ಮೂಲ ಖಾತೆಯನ್ನು ಅವರಿಗೆ ನೀಡಲಾಗಿತ್ತು. ಆದರೆ ಅಶ್ಲೀಲ ಸಿಡಿಯೊಂದು ಬಿಡುಗಡೆಯಾದ ಬಳಿಕ ಅವರು 2021ರ ಮಾರ್ಚ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1999ರಲ್ಲಿ ರಾಜಕೀಯಕ್ಕೆ ರಮೇಶ್ ಜಾರಕಿಹೊಳಿ ಪಾದಾರ್ಪಣೆ ಮಾಡಿದರೂ ಸಚಿವರಾಗಿದ್ದು 2016ರಲ್ಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಿ ಸತೀಶ್ ಜಾರಕಿಹೊಳಿ ಕೈ ಬಿಟ್ಟು, ರಮೇಶ್‌ ಜಾರಕಿಹೊಳಿ ಸಂಪುಟಕ್ಕೆ ಸೇರಿಸಿಕೊಂಡರು. ಸಣ್ಣ, ಮಧ್ಯಮ ಕೈಗಾರಿಕಾ ಸಚಿವ ಸ್ಥಾನ ನೀಡಿದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ರಮೇಶ್ ಜಾರಕಿಹೊಳಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಖಾತೆ ಸಚಿವರಾದರು. ಆದರೆ 2019ರಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಶಾಸಕರಲ್ಲಿ ರಮೇಶ್ ಜಾರಕಿಹೊಳಿ ಸಹ ಒಬ್ಬರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರವನ್ನೇ ಬೀಳಿಸಿದರು.

ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿ ಉಪ ಚುನಾವಣೆಯಲ್ಲಿ ಗೆದ್ದು ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾದರು.

ವಯಕ್ತಿಕ ಜೀವನ

ಪೂರ್ಣ ಹೆಸರು ರಮೇಶ್‌ ಜಾರಕಿಹೊಳಿ
ಜನ್ಮ ದಿನಾಂಕ 01 May 1960 (ವಯಸ್ಸು 62)
ಹುಟ್ಟಿದ ಸ್ಥಳ ಬೆಳಗಾವಿ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ B.A. (1st Year)
ಉದ್ಯೋಗ ಉದ್ಯಮಿ, ಕೃಷಿಕ
ತಂದೆಯ ಹೆಸರು ಲಕ್ಷ್ಮಣರಾವ್ ಜಾರಕಿಹೊಳಿ
ತಾಯಿಯ ಹೆಸರು .
ಅವಲಂಬಿತರ ಹೆಸರು .
ಅವಲಂಬಿತರ ಉದ್ಯೋಗ House wife & Agriculture

ವಿಳಾಸ

ಖಾಯಂ ವಿಳಾಸ 211/2ಬಿ, ಲಕ್ಷ್ಮೀ ನಿವಾಸ, ಫಾಲ್ಸ್‌ ರಸ್ತೆ, ಗೋಕಾಕ 591307, ಬೆಳಗಾವಿ, ಕರ್ನಾಟಕ
ಪ್ರಸ್ತುತ ವಿಳಾಸ 211/2ಬಿ, ಲಕ್ಷ್ಮೀ ನಿವಾಸ, ಫಾಲ್ಸ್‌ ರಸ್ತೆ, ಗೋಕಾಕ 591307, ಬೆಳಗಾವಿ, ಕರ್ನಾಟಕ
ಸಂಪರ್ಕ ಸಂಖ್ಯೆ 8332-228800, 9845727000
ಈ ಮೇಲ್ jarkiholiramesh@gmail.com
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ಬೆಳಗಾವಿಯ ಜಾರಕಿಹೊಳಿ ಕುಟುಂಬದಲ್ಲಿ ಹಿರಿಯರು ರಮೇಶ್ ಜಾರಕಿಹೊಳಿ

ಪಕ್ಷದ ಚಿನ್ಹೆ ಬಿಟ್ಟು ವೈಯಕ್ತಿಕ ವರ್ಚಸ್ಸಿನಿಂದಲೂ ಚುನಾವಣೆ ಗೆದ್ದು ಬರುವಷ್ಟು ಪ್ರಭಾವಿ ನಾಯಕ

ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಶಾಸಕರು. ಲಖನ್ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯರು

ರಾಜಕೀಯ ಕಾಲಾನುಕ್ರಮ

 • 2021
  3/3/2021ರಂದು ಜಲ ಸಂಪನ್ಮೂಲ (ಬೃಹತ್ ಮತ್ತು ಮಧ್ಯಮ ನೀರಾವರಿ) ಸಚಿವ ಸ್ಥಾನಕ್ಕೆ ರಾಜೀನಾಮೆ
 • 2020
  2019ರ ಡಿಸೆಂಬರ್‌ ಉಪ ಚುನಾವಣೆಯಲ್ಲಿ ಗೆದ್ದ ರಮೇಶ್ ಜಾರಕಿಹೊಳಿ 2020ರ ಫೆಬ್ರವರಿಯಲ್ಲಿ ಬಿ. ಎಸ್. ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆ.
 • 2019
  2/7/2019ರಂದು ಗೋಕಾಕ್ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ. 2019ರ ಡಿಸೆಂಬರ್‌ನಲ್ಲಿ ನಡೆದ ಗೋಕಾಕ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು
 • 2018
  2018ರ ವಿಧಾನಸಭೆ ಚುನಾವಣೆಯಲ್ಲಿ 90,249 ಮತಗಳನ್ನು ಪಡೆದು ಬಿಜೆಪಿಯ ಅಶೋಕ ಪೂಜಾರಿ ವಿರುದ್ಧ ಗೆಲವು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂಪುಟಕ್ಕೆ ಪೌರಾಡಳಿತ ಖಾತೆ ಸಚಿವರಾಗಿ ಸೇರ್ಪಡೆ
 • 2016
  ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾಗಿ ಸೇರ್ಪಡೆ
 • 2013
  79,175 ಮತಗಳನ್ನು ಪಡೆದು ಜೆಡಿಎಸ್ ಅಭ್ಯರ್ಥಿಯಾದ ಅಶೋಕ ಪೂಜಾರಿ ವಿರುದ್ಧ ಗೆಲುವು
 • 2008
  ಜೆಡಿಎಸ್‌ ಅಭ್ಯರ್ಥಿ ಅಶೋಕ್ ನಿಂಗಪ್ಪ ಪೂಜಾರಿ ವಿರುದ್ಧ 7 ಸಾವಿರ ಮತಗಳ ಅಂತರದಿಂದ ಜಯ
 • 2004
  ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಯ ಮಟ್ಟೆನ್ನವರ್ ಮಲ್ಲಪ್ಪ ಲಕ್ಷ್ಮಣ್ ವಿರುದ್ಧ 15 ಸಾವಿರ ಮತಗಳ ಅಂತರದಿಂದ ಜಯ
 • 1999
  ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ. ಬೆಳಗಾವಿಯ ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 55,000 ಮತಗಳ ಅಂತರದಿಂದ ಸಂಯುಕ್ತ ಜನತಾದಳದ ಸದಾಶಿವ ವಿರುದ್ಧ ಗೆಲುವು.
ಒಟ್ಟು ಆಸ್ತಿ51.01 CRORE
ಆಸ್ತಿ96.71 CRORE
ಸಾಲಸೋಲ45.7 CRORE

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.