2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಸಾರನ್ ಲೋಕಸಭಾ ಕ್ಷೇತ್ರದಲ್ಲಿ ಲಾಲೂ ಪ್ರಸಾದ ಅವರ ಪತ್ನಿ ರಾಬ್ರಿ ದೇವಿ ಅವರನ್ನು ಸೋಲಿಸಿದ ರಾಜೀವ ಪ್ರತಾಪ ರೂಡಿ ಸಂಸದರಾಗಿ ಚುನಾಯಿತರಾದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬಿಜಪಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಇವರು ವಾಣಿಜ್ಯ ಹಾಗೂ ಕೈಗಾರಿಕಾ ರಾಜ್ಯ ಮಂತ್ರಿಯಾಗಿದ್ದರು. ನಂತರ ನರೇಂದ್ರ ಮೋದಿಯವರ ಸರಕಾರದಲ್ಲಿ ಕೌಶಲಾಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ಖಾತೆಯ ರಾಜ್ಯ ದರ್ಜೆ (ಸ್ವತಂತ್ರ ಖಾತೆ) ಸಚಿವರಾಗಿದ್ದರು. ಆದರೆ 2017ರಲ್ಲಿ ನಡೆದ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಇವರನ್ನು ಸಂಪುಟದಿಂದ ಕೈಬಿಡಲಾಯಿತು. ಮೂರು ಬಾರಿ ಸಂಸದರಾಗಿ ಚುನಾಯಿತರಾಗಿರುವ ರೂಡಿ, ಪ್ರಸ್ತುತ ಅವಧಿಯಲ್ಲಿಯೂ ಸಾರನ್ ಕ್ಷೇತ್ರದ ಸಂಸದರಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಡಿಸೆಂಬರ್ 2018 ರಲ್ಲಿ ಇವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಿಸಿದರು.
| ಪೂರ್ಣ ಹೆಸರು | ರಾಜೀವ ಪ್ರತಾಪ ರೂಡಿ |
| ಜನ್ಮ ದಿನಾಂಕ | 30 Mar 1962 (ವಯಸ್ಸು 63) |
| ಹುಟ್ಟಿದ ಸ್ಥಳ | ಪಾಟ್ನಾ, ಬಿಹಾರ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Post Graduate |
| ಉದ್ಯೋಗ | ಸಾಮಾಜಿಕ ಕಾರ್ಯಕರ್ತ, ಶಿಕ್ಷಣ ಚಿಂತಕ, ನ್ಯಾಯವಾದಿ, ಕಮರ್ಶಿಯಲ್ ಪೈಲಟ್ |
| ತಂದೆಯ ಹೆಸರು | ದಿವಂಗತ ಶ್ರೀ ವಿ.ಎನ್. ಸಿಂಗ್ |
| ತಾಯಿಯ ಹೆಸರು | ಪ್ರಭಾ ಸಿಂಗ್ |
| ಅವಲಂಬಿತರ ಹೆಸರು | ಶ್ರೀಮತಿ ನೀಲಂ ಪ್ರತಾಪ ಸಿಂಗ್ |
| ಅವಲಂಬಿತರ ಉದ್ಯೋಗ | ಸಾಮಾಜಿಕ ಕಾರ್ಯಕರ್ತೆ |
| ಮಕ್ಕಳು | 2 ಪುತ್ರಿ(ಯರು) |
| ಧರ್ಮ | ಹಿಂದು |
| ವೆಬ್‌ಸೈಟ್ | rajivprataprudy.com |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.