ಖ್ಯಾತನಾಮ ನೆಹರು- ಗಾಂಧಿ ಕುಟುಂಬದಲ್ಲಿ ಹುಟ್ಟಿದ ರಾಜೀವ್ ಗಾಂಧಿ ಬಾಲ್ಯದಿಂದಲೂ ರಾಜಕಾರಣ ಹಾಗೂ ಆಗರ್ಭ ಸಿರಿವಂತಿಕೆಯಲ್ಲೇ ಬೆಳೆದವರು. ಅವರ ಸುತ್ತ ಮುತ್ತ ಖ್ಯಾತನಾಮರಿಂದಲೇ ಕೂಡಿದ್ದರಿಂದ ಸಹಜವಾಗಿ ಅವರು ಪ್ರಭಾವಿಯಾಗಿಯೇ ಯೌವನಕ್ಕೆ ಕಾಲಿಟ್ಟವರು. 1984ರಲ್ಲಿ ತಮ್ಮ ತಾಯಿ ಭಾರತದ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ದೇಶದ 6ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ಜವಾಹರಲಾಲ್ ನೆಹರು ಅವರ ಮೊಮ್ಮಗನಾಗಿ ಹುಟ್ಟಿ ಬೆಳೆದ ರಾಜೀವ್ ಸಹಜವಾದ ಪ್ರಭಾವ ಹೊಂದಿದ್ದರೂ ಸಹ ವಿಭಿನ್ನ ಆಲೋಚನೆ, ಕರ್ತತ್ವ ಶಕ್ತಿಗಳಿಂದ ಸಂಪ್ರದಾಯಗಳನ್ನು ಬದಿಗೊತ್ತಿ ಬೇರೆಯದೇ ಹೆಜ್ಜೆ ಇಟ್ಟು ತಮ್ಮ ವ್ಯಕ್ತಿತ್ವ ಹಾಗೂ ನಡೆಗಳನ್ನು ರೂಪಿಸಿಕೊಂಡವರು. ಭಾರತೀಯ ವಿಮಾನ ಯಾನ ಸಂಸ್ಥೆಯಲ್ಲಿ 1970ರಲ್ಲಿ ಪೈಲಟ್ ಆಗಿ ಸೇವೆಗೆ ಸೇರಿಕೊಂಡು, ನಂತರದಲ್ಲಿ ಇಟಲಿಯ ಸೋನಿಯಾ ಅವರನ್ನು ವಿವಾಹವಾದರು. ಇಂದಿರಾಗಾಂಧಿ ಅವರ ಹತ್ಯೆ, ಸಹೋದರ ಸಂಜಯ್ ಗಾಂಧಿ ಅವರ ದುರಂತಮಯ ಅಗಲಿಕೆ ವಂಶಪಾರಂಪರ್ಯ ಎಂಬಂತೆ ಭಾರತದ ಪ್ರಧಾನಿ ಹುದ್ದೆಗೆ ಏಕೈಕ ವ್ಯಕ್ತಿ ಎಂಬಂತೆ ಬಿಂಬಿಸಿ ಆ ಸ್ಥಾನಕ್ಕೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾದರು.
ಆದರೆ ಪ್ರಧಾನ ಮಂತ್ರಿಯಾಗಿದ್ದ ವೇಳೆ ಅಂತಾರಾಷ್ಟ್ರೀಯವಾಗಿ ಪ್ರಕ್ಷುಬ್ಧತೆ ಇದ್ದ ಸಂದರ್ಭವನ್ನು ನಾಜೂಕಾಗಿ ನಿರ್ವಹಿಸಿದರು. ಮಾಲ್ಡೀವ್ಸ್ ದಂಜೆ, ಶ್ರೀಲಂಕಾದಲ್ಲಿ ಎಲ್ ಟಿ ಟಿ ಇ ಉಗ್ರರ ಅಟ್ಟಹಾಸಕ್ಕೆ ಕೊನೆ ಹಾಡಲು ಅಲ್ಲಿಗೆ ಸೈನಿಕರನ್ನು ಕಳಿಸಿಕೊಟ್ಟರು. ಆದರೆ ಎಲ್ ಟಿ ಟಿ ಇ ವಿರುದ್ಧದ ಸೇನಾ ಕಾರ್ಯಾಚರಣೆಗೆ ನೆರವು ನೀಡಿದ್ದು ಆ ಸಂಘಟನೆಯನ್ನು ಕೆರಳಿಸಿತಲ್ಲದೇ, 1991 ರಲ್ಲಿ ರಾಜೀವ್ ಅವರ ಸಾವಿಗೆ ಕಾರಣವಾಯಿತು. ಇದರಿಂದಾಗಿ ರಾಜೀವ್ ಗಾಂಧಿ ಮಾನವ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾಯಿತು.
| ಪೂರ್ಣ ಹೆಸರು | ರಾಜೀವ್ ಗಾಂಧಿ |
| ಜನ್ಮ ದಿನಾಂಕ | 20 Aug 1944 |
| ಮೃತಪಟ್ಟ ದಿನಾಂಕ | 02 Dec 1989 (ವಯಸ್ಸು 45) |
| ಹುಟ್ಟಿದ ಸ್ಥಳ | ಮುಂಬೈ (ಮಹಾರಾಷ್ಟ್ರ) |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | |
| ಉದ್ಯೋಗ | ಪೈಲಟ್, ರಾಜಕಾರಣಿ |
| ತಂದೆಯ ಹೆಸರು | ದಿ. ಫಿರೋಜ್ ಗಾಂಧಿ |
| ತಾಯಿಯ ಹೆಸರು | ಇಂದಿರಾ ಗಾಂಧಿ |
| ಅವಲಂಬಿತರ ಹೆಸರು | ಸೋನಿಯಾ ಗಾಂಧಿ |
| ಅವಲಂಬಿತರ ಉದ್ಯೋಗ | ರಾಜಕಾರಣಿ |
| ಮಕ್ಕಳು | 1 ಪುತ್ರ(ರು) 1 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.