• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ರಜನಿಕಾಂತ್

ರಜನಿಕಾಂತ್

ಜೀವನ ಚರಿತ್ರೆ

ಸೂಪರ್ ಸ್ಟಾರ್ ರಜನಿಕಾಂತ್ ಡಿಸೆಂಬರ್ 12, 1950ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಆಗ ಮೈಸೂರು ರಾಜ್ಯಕ್ಕೆ ಸೇರಿದ್ದ ಪ್ರದೇಶ ಈಗ ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ. ಅವರ ಮೂಲ ಹೆಸರು ಶಿವಾಜಿರಾವ್ ಗಾಯಕ್‌ವಾಡ್. 5ನೇ ವಯಸ್ಸಿನಲ್ಲಿಯೇ ರಜನಿಕಾಂತ್ ತಾಯಿಯನ್ನು ಕಳೆದುಕೊಂಡರು.

ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಬಳಿಕ ರಾಮಕೃಷ್ಣ ಮಿಷನ್‌ನ ಶಾಖೆಯಾದ ವಿವೇಕಾನಂದ ಬಾಲಕ ಸಂಘದಲ್ಲಿ ವ್ಯಾಸಂಗ ಮಾಡಿದರು. ಅವರ ಮಾತೃಭಾಷೆ ಮರಾಠಿ. ಆದರೆ, ಆ ಭಾಷೆಯಲ್ಲಿ ಅವರು ಯಾವುದೇ ಸಿನಿಮಾಗಳನ್ನು ಮಾಡಿಲ್ಲ.

ರಜನಿಕಾಂತ್ ಸೂಪರ್ ಸ್ಟಾರ್ ಆಗಿ ಬೆಳೆದು ಬಂದ ಹಾದಿ ಸುಲಭವಾಗಿರಲಿಲ್ಲ. ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಆಗಲೇ ಅವರು ಹಲವಾರು ವೇದಿಕೆ ಕಾರ್ಯಕ್ರಮ, ಸ್ಟಂಟ್‌ಗಳ ಮೂಲಕ ನಟನೆಯಲ್ಲಿ ಇರುವ ಆಸಕ್ತಿ ತೋರಿಸಿದ್ದರು.

ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ರಜನಿಕಾಂತ್ ರಜನಿ ಸರ್ ಎಂದೇ ಖ್ಯಾತಿ ಪಡೆದಿದ್ದಾರೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತದ ಸಿನಿಮಾ ಜಗತ್ತಿಗೆ ಸಲ್ಲಿಸಿದ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಉತ್ತಮ ನಟನೆಗಾಗಿ ಫಿಲ್ಮ್ ಫೇರ್, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಕಲೈಮಾಣಿ ಪ್ರಶಸ್ತಿ, ಶಿವಾಜಿ ಗಣೇಶನ್ ಪ್ರಶಸ್ತಿ ಪಡೆದಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಪಶಸ್ತಿಗಳಾದ ಪದ್ಮಭೂಷಣ, ಪದ್ಮವಿಭೂಷಣಗಳನ್ನು ಪಡೆದಿದ್ದಾರೆ.

ಈ ಸೂಪರ್ ಸ್ಟಾರ್ ತಮಿಳುನಾಡು ರಾಜಕೀಯದ ಮೇಲೆ ಭಾರೀ ಪ್ರಭಾವ ಬೀರಿದ್ದಾರೆ. ಚುನಾವಣಾ ಫಲಿತಾಂಶವನ್ನು ಬದಲಾವಣೆ ಮಾಡುವಷ್ಟು ಪ್ರಭಾವ ಹೊಂದಿದ್ದಾರೆ. ಹಿಂದೆಯೂ ಹಲವು ಬಾರಿ ರಾಜಕೀಯ ನಿಲುವುಗಳನ್ನು ಅವರು ವ್ಯಕ್ತಪಡಿಸಿದ್ದಾರೆ. ರಾಜಕೀಯಕ್ಕೆ ಅವರು ಪಾದಾರ್ಪಣೆ ಮಾಡಲು ಎಂದು ಕಾಯಲಾಗುತ್ತಿದೆ.

ವಯಕ್ತಿಕ ಜೀವನ

ಪೂರ್ಣ ಹೆಸರು ರಜನಿಕಾಂತ್
ಜನ್ಮ ದಿನಾಂಕ 12 Dec 1950 (ವಯಸ್ಸು 72)
ಹುಟ್ಟಿದ ಸ್ಥಳ ಬೆಂಗಳೂರು
ಪಕ್ಷದ ಹೆಸರು Independent
ವಿದ್ಯಾರ್ಹತೆ Diploma in acting from Madras Film Institute
ಉದ್ಯೋಗ Actor
ತಂದೆಯ ಹೆಸರು ರಾಮೋಜಿ ರಾವ್ ಗಾಯಕ್‌ವಾಡ್
ತಾಯಿಯ ಹೆಸರು ಜೀಜಾಬಾಯಿ
ಅವಲಂಬಿತರ ಹೆಸರು ಲತಾ ರಜನಿಕಾಂತ್
ಅವಲಂಬಿತರ ಉದ್ಯೋಗ N/A
ಮಕ್ಕಳು 2 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ 18, Raghava Veera Avenue, Poes Garden, Chennai, TamilNadu, India
ಸಂಪರ್ಕ ಸಂಖ್ಯೆ +91 88702-02833
ಈ ಮೇಲ್ not available
ವೆಬ್‌ಸೈಟ್ http://rajinikanth.com/
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ಸಿನಿಮಾಕ್ಕೆ ಬರುವ ಮೊದಲು ರಜನಿಕಾಂತ್ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದಾರೆ.

ರಜನಿಕಾಂತ್ ಮೂಲ ಹೆಸರು ಶಿವಾಜಿ ರಾವ್ ಗಾಯಕ್‌ವಾಡ್. ಮರಾಠದ ಪ್ರಸಿದ್ಧ ಚಕ್ರವರ್ತಿ ಶಿವಾಜಿ ಮಹಾರಾಜ್ ಹೆಸರನ್ನು ಇಡಲಾಗಿದೆ.

ಸಿಬಿಎಸ್‌ಇ ಶಾಲೆ ಪಠ್ಯದಲ್ಲಿ ಸೇರ್ಪಡೆಗೊಂಡಿರುವ ಭಾರತದ ಏಕೈಕ ನಟ ರಜನಿಕಾಂತ್. ಅವರ ಕುರಿತು ಪಠ್ಯ ಬಸ್ ಕಂಡಕ್ಟರ್‌ ಟು ಸೂಪರ್ ಸ್ಟಾರ್ ಎಂದು ಇದೆ.

2000-2010ರ ತನಕ ರಜನಿಕಾಂತ್ 26 ಕೋಟಿ ಸಂಭಾವಣೆ ಪಡೆದಿದ್ದಾರೆ. ಜಾಕಿ ಚಾನ್ ನಂತರ ಏಷ್ಯಾದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ 2ನೇ ನಟ

ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಜನಿಕಾಂತ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್

ರಜನಿಕಾಂತ್ ಬಾಬಾರ ಅತಿ ದೊಡ್ಡ ಅನುಯಾಯಿ. ದೇವರು, ಧರ್ಮಗಳ ಬಗ್ಗೆ ಅಪಾರವಾದ ನಂಬಿಕೆ ಹೊಂದಿದ್ದಾರೆ.

ರಜನಿಕಾಂತ್ ಪುತ್ರಿ ಐಶ್ವರ್ಯಾ ನಟ ಧನುಷ್ ವಿವಾಹವಾಗಿದ್ದಾರೆ.

ರಾಜಕೀಯ ಕಾಲಾನುಕ್ರಮ

  • 2020
    2020ರ ಡಿಸೆಂಬರ್ 3ರಂದು ರಜನಿಕಾಂತ್ ಅಧಿಕೃತವಾಗಿ ರಾಜಕೀಯಕ್ಕೆ ಬರುವುದಾಗಿ ಘೋಷಣೆ ಮಾಡಿದರು. 2020ರ ಡಿಸೆಂಬರ್ 31ರಂದು ಅವರು ಪಕ್ಷದ ಹೆಸರು ಮತ್ತು ಚಿನ್ಹೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
  • 2017
    2017 ಡಿಸೆಂಬರ್ 31ರಂದು ತಮಿಳುನಾಡು ವಿಧಾನಸಭೆ ಚುನಾವಣೆ 2021ರಲ್ಲಿ ರಾಜಕೀಯ ಪ್ರವೇಶ, ತಮ್ಮ ಹೊಸ ಪಕ್ಷ ಸ್ಪರ್ಧಿಸುವುದಾಗಿ ರಜನಿಕಾಂತ್ ಘೋಷಿಸಿದ್ದರು.

ಹಿಂದಿನ ಇತಿಹಾಸ

  • 1975
    ರಜನಿಕಾಂತ್ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಿತ್ರವನ್ನು ನಿರ್ದೇಶನ ಮಾಡಿದ್ದು ಬಾಲಚಂದರ್. ಕಮಲ್ ಹಾಸನ್ ಮತ್ತು ಶ್ರೀವಿದ್ಯಾ ಈ ಚಿತ್ರದಲ್ಲಿ ನಟಿಸಿದ್ದರು. ಅದೇ ವರ್ಷ ಅವರು ಕಥಾ ಸಂಗಮ ಎಂಬ ಕನ್ನಡ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದರು.
ಒಟ್ಟು ಆಸ್ತಿ376 CRORE
ಆಸ್ತಿ376 CRORE
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X