• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ರಾಬ್ರಿ ದೇವಿ

ರಾಬ್ರಿ ದೇವಿ

ಜೀವನ ಚರಿತ್ರೆ

ರಾಬ್ರಿ ದೇವಿ ಬಿಹಾರ ರಾಜ್ಯದ ರಾಜಕಾರಣಿಯಾಗಿದ್ದಾರೆ. ಇವರು ರಾಷ್ಟ್ರೀಯ ಜನತಾ ದಳದಿಂದ ಮೂರು ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮುಖ್ಯಮಂತ್ರಿಯಾಗುವ ಮೊದಲು ಇವರು ಸಾಮಾನ್ಯ ಗೃಹಿಣಿಯಾಗಿದ್ದು, ರಾಜಕೀಯದಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಇಂಥ ಮಹಿಳೆ ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿದ್ದು ದೇಶದ ರಾಜಕೀಯ ಇತಿಹಾಸದಲ್ಲೇ ವಿಶಿಷ್ಟ ಘಟನೆಯಾಗಿದೆ. ಅಲ್ಲದೆ ರಾಬ್ರಿ ದೇವಿ ಬಿಹಾರದ ಪ್ರಥಮ ಮಹಿಳಾ ಮುಖ್ಯಮಂತ್ರಿಯೂ ಹೌದು. 1956 ರಲ್ಲಿ ಬಿಹಾರದ ಗೋಪಾಲಗಂಜ್‌ನಲ್ಲಿ ಜನಿಸಿದ ಇವರು 8ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. 1973ರಲ್ಲಿ ಲಾಲೂ ಪ್ರಸಾದ ಯಾದವ್ ಅವರೊಂದಿಗೆ ವಿವಾಹವಾಯಿತು. ಲಾಲೂ ರಾಬ್ರಿ ದಂಪತಿಗೆ ಇಬ್ಬರು ಗಂಡು ಹಾಗೂ ಏಳು ಜನ ಹೆಣ್ಣು ಮಕ್ಕಳಿದ್ದಾರೆ. ಪತಿ ಲಾಲೂ ಪ್ರಸಾದ ಯಾದವ್ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ರೈಲ್ವೆ ಸಚಿವರಾಗಿದ್ದರು. ಹೀಗಾಗಿ ಇವರಿಗೆ ರಾಜಕೀಯ ಮನೆತನದ ಹಿನ್ನೆಲೆ ಇತ್ತು.

ವಯಕ್ತಿಕ ಜೀವನ

ಪೂರ್ಣ ಹೆಸರು ರಾಬ್ರಿ ದೇವಿ
ಜನ್ಮ ದಿನಾಂಕ 01 Jan 1959 (ವಯಸ್ಸು 64)
ಹುಟ್ಟಿದ ಸ್ಥಳ ಸಾಲಾರಕಲನ್, ಲೈನ್ ಬಜಾರ, ಗೋಪಾಲಗಂಜ್, ಬಿಹಾರ
ಪಕ್ಷದ ಹೆಸರು Rashtriya Janata Dal
ವಿದ್ಯಾರ್ಹತೆ 8th Pass
ಉದ್ಯೋಗ ಸಾಮಾಜಿಕ ಕಾರ್ಯಕರ್ತೆ ಮತ್ತು ರಾಜಕಾರಣಿ
ತಂದೆಯ ಹೆಸರು NA
ತಾಯಿಯ ಹೆಸರು NA
ಅವಲಂಬಿತರ ಹೆಸರು ಲಾಲೂ ಪ್ರಸಾದ ಯಾದವ್
ಅವಲಂಬಿತರ ಉದ್ಯೋಗ ರಾಜಕಾರಣಿ
ಮಕ್ಕಳು 2 ಪುತ್ರ(ರು) 7 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ ನಂ.208, ಕೌಟಿಲ್ಯ ನಗರ, ಎಂಪಿ ಎಂಎಲ್‌ಎ ಕಾಲನಿ, ಪೋಸ್ಟ್ ಬಿವಿ ಕಾಲೇಜ್, ಪಾಟ್ನಾ ಜಿಲ್ಲೆ, ಬಿಹಾರ
ಪ್ರಸ್ತುತ ವಿಳಾಸ NA
ಸಂಪರ್ಕ ಸಂಖ್ಯೆ 0612-2217222
ಈ ಮೇಲ್ rjdyouth@gmail.com

ಆಸಕ್ತಿಕರ ಅಂಶಗಳು

ಮೇವು ಹಗರಣದಲ್ಲಿ ಪತಿ ಲಾಲೂ ಪ್ರಸಾದ ಯಾದವ್ ಅಪರಾಧಿ ಎಂದು ತೀರ್ಪು ಬಂದ ನಂತರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ಇಂಥ ಸಂದರ್ಭದಲ್ಲಿ ಯಾರೂ ಊಹಿಸಿರದ ಬೆಳವಣಿಗೆಯೊಂದರಲ್ಲಿ ರಾಬ್ರಿ ದೇವಿ ಜುಲೈ 25, 1997 ರಂದು ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಕೀಯ ಕಾಲಾನುಕ್ರಮ

 • 2014
  ಸಾರನ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ರಾಬ್ರಿ ದೇವಿ ಚುನಾವಣೆ ಸೋತರು.
 • 2005
  2005 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ವೈಶಾಲಿಯ ರಾಘೋಪುರ ವಿಭಾಗದಿಂದ ಶಾಸಕಿಯಾದರು.
 • 2000
  2000ನೇ ಇಸ್ವಿಯಲ್ಲಿ ರಾಬ್ರಿ ದೇವಿ ಮತ್ತೆ ಮುಖ್ಯಮಂತ್ರಿಯಾದರು.
 • 2000-2005
  ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರೈಸಿದರು.
 • 1997-1999
  1997 ರಿಂದ 1999 ರ ಮಧ್ಯೆ ರಾಬ್ರಿ ದೇವಿ ಮುಖ್ಯಮಂತ್ರಿಯಾಗಿ ಪ್ರಥಮ ಅವಧಿಯನ್ನು ಪೂರೈಸಿದರು.

ಹಿಂದಿನ ಇತಿಹಾಸ

 • 1995
  ರಾಜಕೀಯಕ್ಕೆ ಬರುವ ಮುನ್ನ ಅಪ್ಪಟ ಗೃಹಿಣಿಯಾಗಿದ್ದರು.

NA
ಒಟ್ಟು ಆಸ್ತಿ6.24 CRORE
ಆಸ್ತಿ7.54 CRORE
ಸಾಲಸೋಲ1.3 CRORE

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಆಲ್ಬಂ