ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಶಾಸಕ ಆರ್. ಅಶೋಕ್ ಕರ್ನಾಟಕ ಬಿಜೆಪಿಯ ಹಿರಿಯ ನಾಯಕರು. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಂದಾಯ ಸಚಿವರು.
ರಾಮಯ್ಯ, ಆಂಜನಮ್ಮ ದಂಪತಿಗಳ ಪುತ್ರ ಆರ್. ಅಶೋಕ್ ಬಾಲ್ಯದಿಂದಲೂ ಆರ್‌ಎಸ್ಎಸ್ ಜೊತೆ ನಂಟು ಹೊಂದಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದ ಇವರು ಬಳಿಕ ಗೃಹ ಖಾತೆ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುವ ತನಕ ಬೆಳೆದರು.
ಬಿಎಸ್ಸಿ ಪದವಿಯನ್ನು ಅಶೋಕ್ ಬೆಂಗಳೂರಿನ ವಿಶ್ವೇಶ್ವರಪುರ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿನಾಯಕರಾಗಿ ಬೆಳೆದ ಇವರು ಬಳಿಕ ಬಿಜೆಪಿ ಸೇರಿದರು. ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ಮಾಡಿದ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಎಲ್. ಕೆ. ಅಡ್ವಾಣಿ ಸೇರಿದಂತೆ ಇತರ ನಾಯಕರ ಜೊತೆ ಸುಮಾರು ಮೂರು ತಿಂಗಳು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದರು.
ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷರಾಗಿ ಎರಡು ಸಲ ಅವಿರೋಧವಾಗಿ ಆಯ್ಕೆಯಾದರು. 1997ರಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದರು. ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಶಾಸಕರಾದರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಪದ್ಮನಾಭನಗರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. 2008, 2013, 2018ರ ಚುನಾವಣೆಯಲ್ಲಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ರಾಜ್ಯದಲ್ಲಿ 'ಮಡಿಲು' ಕಿಟ್ ಯೋಜನೆ ಆರಂಭಿಸಿದ ಹೆಗ್ಗಳಿಕೆ ಅಶೋಕ ಅವರದ್ದಾಗಿದೆ.
2008ರ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಮತಗಳಿಂದ ಆಯ್ಕೆಯಾದರು. ಯಡಿಯೂರಪ್ಪ ಸಂಪುಟದಲ್ಲಿ ಗೃಹ ಮತ್ತು ಸಾರಿಗೆ ಸಚಿವರಾದರು. ಸಾರಿಗೆ ಕ್ಷೇತ್ರದ ಸುಧಾರಣೆಗೆ ಹಲವಾರು ಯೋಜನೆ ಜಾರಿಗೊಳಿಸಿದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್. ಅಶೋಕ್ ಉಪಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಣೆ ಮಾಡಿದರು.
2018ರ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಕಂದಾಯ, ಮುಜರಾಯಿ ಖಾತೆ ಸಚಿವರಾಗಿ ಅಶೋಕ್ ಕಾರ್ಯ ನಿರ್ವಹಣೆ ಮಾಡಿದರು. 2021ರಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಕಂದಾಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
| ಪೂರ್ಣ ಹೆಸರು | ಆರ್. ಅಶೋಕ |
| ಜನ್ಮ ದಿನಾಂಕ | 01 Jul 1957 (ವಯಸ್ಸು 68) |
| ಹುಟ್ಟಿದ ಸ್ಥಳ | ಬೆಂಗಳೂರು, ಕರ್ನಾಟಕ |
| ಪಕ್ಷದ ಹೆಸರು | Bharatiya Janata Party |
| ವಿದ್ಯಾರ್ಹತೆ | Graduate |
| ಉದ್ಯೋಗ | ರಾಜಕಾರಣಿ, ಕೃಷಿಕ, ಸಾರ್ವಜನಿಕ ಸೇವಕ |
| ತಂದೆಯ ಹೆಸರು | ರಾಮಯ್ಯ |
| ತಾಯಿಯ ಹೆಸರು | ಆಂಜನಮ್ಮ |
| ಅವಲಂಬಿತರ ಹೆಸರು | ಪ್ರಮೀಳಾ ರಾಣಿ |
| ಅವಲಂಬಿತರ ಉದ್ಯೋಗ | ಕೃಷಿಕ ಹಾಗೂ ಹೌಸ್ ವೈಫ್ |
| ಮಕ್ಕಳು | 2 ಪುತ್ರ(ರು) |
| ಧರ್ಮ | ಹಿಂದು |
| ವೆಬ್‌ಸೈಟ್ | https://rashoka.in/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.