ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ. 2013 ಮತ್ತು 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕಾಂಗ್ರೆಸ್‌ನ ಯುವ ನಾಯಕರಲ್ಲಿ ಪ್ರಿಯಾಂಕ್ ಎಂ. ಖರ್ಗೆ ಸಹ ಒಬ್ಬರು. ಬಿಎ ಪದವೀಧರರಾದ ಪ್ರಿಯಾಂಕ್ ಖರ್ಗೆ ಡಿಪಿ ಗ್ರಾಫಿಕ್ಸ್, ಡಿಎನ್ ಇನ್ ಅನಿಮೇಷನ್ ವ್ಯಾಸಂಗ ಮಾಡಿದ್ದಾರೆ.
2008ರ ತನಕ ಚಿತ್ತಾಪುರ ಕ್ಷೇತ್ರವನ್ನು ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿದ್ದರು. ಅವರು ರಾಷ್ಟ್ರ ರಾಜಕೀಯಕ್ಕೆ ತೆರಳಿದ ಮೇಲೆ ಪ್ರಿಯಾಂಕ್ ಖರ್ಗೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2013ರ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದ ಪ್ರಿಯಾಂಕ್ ಖರ್ಗೆ 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಿದಾಗ ಸಚಿವರಾದರು. ಐಟಿ & ಬಿಟಿ ಖಾತೆಯನ್ನು ನೀಡಲಾಯಿತು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿಯೂ ಕೆಲಸ ಮಾಡಿದರು.
ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿಯೇ ಎನ್‌ಎಸ್‌ಯುಐ ಸೇರಿದ್ದ ಪ್ರಿಯಾಂಕ್ ಖರ್ಗೆ ಬಳಿಕ ರಾಜಕೀಯಕ್ಕೆ ಬಂದರು. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿಯೂ ನೇಮಕಗೊಂಡರು. ಪ್ರಸ್ತುತ ಕೆಪಿಸಿಸಿ ಸಾಮಾಜಿಕ ಜಾಲತಾಣ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
| ಪೂರ್ಣ ಹೆಸರು | ಪ್ರಿಯಾಂಕ್ ಖರ್ಗೆ |
| ಜನ್ಮ ದಿನಾಂಕ | 22 Nov 1978 (ವಯಸ್ಸು 47) |
| ಹುಟ್ಟಿದ ಸ್ಥಳ | ಗುಲಬರ್ಗಾ, ಕರ್ನಾಟಕ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | 12th Pass |
| ಉದ್ಯೋಗ | ಉದ್ಯಮಿ |
| ತಂದೆಯ ಹೆಸರು | ಮಲ್ಲಿಕಾರ್ಜುನ ಖರ್ಗೆ |
| ತಾಯಿಯ ಹೆಸರು | ರಾಧಾಬಾಯಿ ಖರ್ಗೆ |
| ಅವಲಂಬಿತರ ಹೆಸರು | ಶ್ರುತಿ ಪಿ. ಖರ್ಗೆ |
| ಅವಲಂಬಿತರ ಉದ್ಯೋಗ | ವ್ಯಾಪಾರ |
| ಧರ್ಮ | ಹಿಂದು |
| ಜಾತಿ | ದಲಿತ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.