Get Updates
Get notified of breaking news, exclusive insights, and must-see stories!

ಪ್ರತಾಪ ಸಿಂಹ

ಪ್ರತಾಪ ಸಿಂಹ
ಪ್ರತಾಪ್ ಸಿಂಹ ಕರ್ನಾಟಕ ಬಿಜೆಪಿಯ ನಾಯಕ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರು.
By Shalini | Thursday, August 25, 2022, 12:34:24 PM [IST]

ಪ್ರತಾಪ ಸಿಂಹ ಜೀವನ ಚರಿತ್ರೆ

ಪ್ರತಾಪ್ ಸಿಂಹ ಕರ್ನಾಟಕ ಬಿಜೆಪಿಯ ನಾಯಕ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರು. 2014ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ಪ್ರತಾಪ್ ಸಿಂಹ 2019ರ ಲೋಕಸಭಾ ಚುನಾವಣೆಯಲ್ಲಿಯೂ ಜಯಗಳಿಸಿದ್ದಾರೆ.

ಒಕ್ಕಲಿಗ ಸಮುದಾಯದ ನಾಯಕ ಪ್ರತಾಪ್ ಸಿಂಹ ಚುನಾವಣೆಗೆ ಸ್ಪರ್ಧಿಸುವ ಮೊದಲು ಪತ್ರಕರ್ತರಾಗಿದ್ದರು. ವಿಜಯ ಕರ್ನಾಟಕ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿದ್ದ ಅವರು 'ಬೆತ್ತಲೆ ಜಗತ್ತು' ಎಂಬ ಅಂಕಣದ ಮೂಲಕ ರಾಜ್ಯದ ಜನರಿಗೆ ಪರಿಚಿತರಾಗಿದ್ದರು.

2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆ ದೇಶಾದ್ಯಂತ ಜೋರಾಗಿತ್ತು. ಆಗ ಬಿಜೆಪಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ನೀಡಿತು. 503908 ಮತಗಳನ್ನು ಪಡೆದು ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಪ್ರತಾಪ್ ಸಿಂಹಗೆ ಟಿಕೆಟ್ ನೀಡಿತು. 688974 ಮತಗಳನ್ನು ಪಡೆದು ಸಿ. ಎಚ್. ವಿಜಯಶಂಕರ್ ಸೋಲಿಸಿ ಎರಡನೇ ಬಾರಿಗೆ ಸಂಸತ್‌ ಪ್ರವೇಶಿಸಿದರು.

ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಕಸ್ತೂರಿ ರಂಗನ್ ವರದಿ ಪರಾಮರ್ಶೆ ಸಮಿತಿ, ಸಾರಿಗೆ ಮತ್ತು ಪ್ರವಾಸೋದ್ಯಮ ಸಮಿತಿ, ಸರಕು ಸಾಗಾಣಿಕೆ, ಹೆದ್ದಾರಿ ಹಾಗೂ ಜಲ ಸಾರಿಗೆ ಖಾತೆ ಸಲಹಾ ಸಮಿತಿ ಸೇರಿದಂತೆ ವಿವಿಧ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ನರೇಂದ್ರ ಮೋದಿ ಯಾರೂ ತುಳಿಯದ ಹಾದಿ, ಟಿಪ್ಪು ಸುಲ್ತಾನ್ ಸ್ವಾತಂತ್ರ ವೀರನಾ?, ನೇತಾಜಿ ಚಲೋ ದಿಲ್ಲಿ ಎಂದು ಹೋದವರೆಲ್ಲಿ? ಸೇರಿದಂತೆ ಹಲವು ಪುಸ್ತಕಗಳನ್ನು ಪ್ರತಾಪ್ ಸಿಂಹ ಬರೆದಿದ್ದಾರೆ.

ಸಂಸದ ಪ್ರತಾಪ್ ಸಿಂಹ ಕರ್ನಾಟಕ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಮತ್ತಷ್ಟು ಓದು

ಪ್ರತಾಪ ಸಿಂಹ ವಯಕ್ತಿಕ ಜೀವನ

ಪೂರ್ಣ ಹೆಸರು ಪ್ರತಾಪ ಸಿಂಹ
ಜನ್ಮ ದಿನಾಂಕ 21 Jun 1976 (ವಯಸ್ಸು 49)
ಹುಟ್ಟಿದ ಸ್ಥಳ ಬೇಲೂರು, ಹಾಸನ ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Post Graduate
ಉದ್ಯೋಗ ಪತ್ರಕರ್ತ
ತಂದೆಯ ಹೆಸರು ಬಿ.ಇ. ಗೋಪಾಲ ಗೌಡ
ತಾಯಿಯ ಹೆಸರು ಪುಷ್ಪಾ
ಅವಲಂಬಿತರ ಹೆಸರು ಅರ್ಪಿತಾ ಜೆ.ಎಸ್.
ಮಕ್ಕಳು 1 ಪುತ್ರಿ(ಯರು)
ಧರ್ಮ ಹಿಂದು
ಜಾತಿ ಒಕ್ಕಲಿಗ
ವೆಬ್‌ಸೈಟ್ http://www.pratapsimha.com/

ಪ್ರತಾಪ ಸಿಂಹ ಒಟ್ಟು ಆಸ್ತಿ

ಒಟ್ಟು ಆಸ್ತಿ
₹19.23 LAKHS
ಆಸ್ತಿ
₹63.22 LAKHS
ಸಾಲಸೋಲ
₹43.99 LAKHS

ಪ್ರತಾಪ ಸಿಂಹ ಕುರಿತು ಆಸಕ್ತಿದಾಯಕ ಸಂಗತಿಗಳು

ಸಂಸದರಾಗುವ ಮೊದಲು 13 ವರ್ಷಗಳ ಕಾಲ ಪತ್ರಕರ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಹಲವಾರು ಪುಸ್ತಕಗಳು, ಬೆತ್ತಲೆ ಜಗತ್ತು ಅಂಕಣ ಬರಹದ ಮೂಲಕ ಕರ್ನಾಟಕದ ಜನರಿಗೆ ಚಿರಪರಿಚಿತರು

ಮೊದಲ ಚುನಾವಣೆಯಲ್ಲಿಯೇ ಜಯಗಳಿಸುವ ಮೂಲಕ ಲೋಕಸಭೆ ಪ್ರವೇಶ ಮಾಡಿದರು.

ಪ್ರತಾಪ ಸಿಂಹ ರಾಜಕೀಯ ಟೈಮ್‌ಲೈನ್

  • 2019: ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೈಸೂರು-ಕೊಡಗು ಕ್ಷೇತ್ರದಿಂದ ಚುನಾವಣಾ ಕಣಕ್ಕೆ. ಎರಡನೇ ಬಾರಿಯೂ ಗೆಲುವ
  • 2014 : ಮಾರ್ಚ್‌ನಲ್ಲಿ ಬಿಜೆಪಿ ಪಕ್ಷ ಸೇರ್ಪಡೆ. ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಯಲು ಟಿಕೆಟ್

ಹಿಂದಿನ ಇತಿಹಾಸ

  • 1999: ಟ್ರೇನಿ ಪತ್ರಕರ್ತರಾಗಿ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಕೆಲಸ ಆರಂಭಿಸಿದರು.

ಪ್ರತಾಪ ಸಿಂಹ ಸಾಧನೆಗಳು

2011ರಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.
ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಪತ್ರಕರ್ತ ಎಂಬ ಹೆಗ್ಗಳಿಕೆ ಪ್ರತಾಪ್ ಸಿಂಹ ಅವರದ್ದು.

2008ರಲ್ಲಿ ಅಂಕಣ ಬರಹ 'ಬೆತ್ತಲೆ ಜಗತ್ತು' ಗಾಗಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+