Get Updates
Get notified of breaking news, exclusive insights, and must-see stories!

ಮನೋಹರ ಪರಿಕ್ಕರ್

ಮನೋಹರ ಪರಿಕ್ಕರ್
ಮನೋಹರ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಯಲ್ಲಿ ತಮ್ಮ ಮೆಟಲರ್ಜಿಕಲ್ ಇಂಜನೀಯರಿಂಗ್ ಪದವಿ ನಂತರ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಆರ್.
By Ajay M V | Monday, February 8, 2021, 12:44:36 PM [IST]

ಮನೋಹರ ಪರಿಕ್ಕರ್ ಜೀವನ ಚರಿತ್ರೆ

ಮನೋಹರ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಯಲ್ಲಿ ತಮ್ಮ ಮೆಟಲರ್ಜಿಕಲ್ ಇಂಜನೀಯರಿಂಗ್ ಪದವಿ ನಂತರ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಆರ್.ಎಸ್.ಎಸ್.ನ ಸ್ವಯಂ ಸೇವಕರಾಗಿ ಬಾಲ್ಯದಿಂದಲೂ ಕಾರ್ಯನಿರ್ವಹಿಸಿದ ಇವರು ಮುಖ್ಯ ಶಿಕ್ಷಕ ಹಂತದವರೆಗೂ ಬಡ್ತಿ ಪಡೆದವರು.
1994ರಲ್ಲಿ ಮೊದಲ ಬಾರಿಗೆ ಗೋವಾ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದರು. 2000-04 ಗೋವಾ ಸಿಎಂ ಆಗಿದ್ದರು. ಅಲ್ಲದೇ ಈ ದೇಶದಲ್ಲಿ ರಾಜ್ಯವೊಂದರ ಸಿಎಂ ಆಗಿದ್ದ ಮೊದಲ ಐಐಟಿ ಪದವೀಧರ ಎಂಬ ಗೌರವಕ್ಕೂ ಪಾತ್ರರಾದರು. ಎರಡು ಬಾರಿ ದೇಶದ ರಕ್ಷಣಾ ಸಚಿವರಾಗಿ, 2 ಬಾರಿ ಗೋವಾ ಸಿಎಂ ಆಗಿದ್ದ ಮನೋಹರ ಪರಿಕ್ಕರ್, ಸಿಎಂ ಸ್ಥಾನದಲ್ಲಿದ್ದಾಗಲೇ ಧೀರ್ಘ ಕಾಲೀನ ಕ್ಯಾನ್ಸರ್ ಗೆ 17 ಮಾರ್ಚ್ 2019ರಂದು ಕೊನೆಯುಸಿರೆಳೆದರು.

ಮತ್ತಷ್ಟು ಓದು

ಮನೋಹರ ಪರಿಕ್ಕರ್ ವಯಕ್ತಿಕ ಜೀವನ

ಪೂರ್ಣ ಹೆಸರು ಮನೋಹರ ಪರಿಕ್ಕರ್
ಜನ್ಮ ದಿನಾಂಕ 13 Dec 1955
ಮೃತಪಟ್ಟ ದಿನಾಂಕ 17 Mar 2019 (ವಯಸ್ಸು 63)
ಹುಟ್ಟಿದ ಸ್ಥಳ ಮಾಪುಸಾ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ಇಂಜನೀಯರ್, ರಾಜಕಾರಣಿ
ತಂದೆಯ ಹೆಸರು ಗೋಪಾಲಕೃಷ್ಣ ಪರಿಕ್ಕರ್
ತಾಯಿಯ ಹೆಸರು ರಾಧಾಬಾಯಿ ಪರಿಕ್ಕರ್
ಅವಲಂಬಿತರ ಹೆಸರು ಮೇಧಾ ಪರಿಕ್ಕರ್
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 2 ಪುತ್ರ(ರು)
ವೆಬ್‌ಸೈಟ್ www.goa.gov.in

ಮನೋಹರ ಪರಿಕ್ಕರ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹2.97 CRORE
ಆಸ್ತಿ
₹3.4 CRORE
ಸಾಲಸೋಲ
₹43.83 LAKHS

ಮನೋಹರ ಪರಿಕ್ಕರ್ ಕುರಿತು ಆಸಕ್ತಿದಾಯಕ ಸಂಗತಿಗಳು

2004ರಲ್ಲಿ ಇಂಡಿಯಾ ಟುಡೆ ಮ್ಯಾಗಜಿನ್ನ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಗೌರವಕ್ಕೆ ಭಾಜನರಾದರು. ಮಿಸ್ಟರ್ ಕ್ಲೀನ್ ಖ್ಯಾತಿಯ ಮನೋಹರ್ ಪರಿಕ್ಕರ್ ತಮ್ಮ ಜೀವನದುದ್ದಕ್ಕೂ ಶುಭ್ರ ಹಸ್ತರಾಗಿಯೇ ಕಾರ್ಯನಿರ್ವಹಿಸಿ ಎಲ್ಲರ ಶ್ಲಾಘನೆಗೆ ಒಳಗಾದವರು. ಅವರ ನೇತೃತ್ವದಲ್ಲೇ ಸೇನಾ ಸಿಬ್ಬಂದಿಗಳ ದಶಕಗಳ ಬೇಡಿಕೆಯಾಗಿದ್ದ ಒನ್ ರ್ಯಾಂಕ್ ಒನ್ ಪೆನ್ಶನ್ (ಒಆರ್.ಒಪಿ) ಈಡೇರಿಸಿದರು. ಅವರ ಅವಧಿಯಲ್ಲೇ ಭಾರತ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಮ್ಯಾನ್ಮಾರ್ ಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಗಳನ್ನು ನಡೆಸಿತು.

ಮನೋಹರ ಪರಿಕ್ಕರ್ ಸಾಧನೆಗಳು

ಪರಿಕ್ಕರ್ ತಮ್ಮ ಗೋವಾ ಸಿಎಂ ಮೊದಲ ಅವಧಿಯಲ್ಲಿ ಹಲವು ಜನಪರ ನಿರ್ಣಯಗಳನ್ನು ಕೈಗೊಂಡರು. ದಯಾನಂದ ಸಾಮಾಜಿಕ ಸುರಕ್ಷಾ ಯೋಜನೆ ಜಾರಿಗೊಳಿಸಿ ಅದಕ್ಕೆ ಅಗತ್ಯ ಹಣಕಾಸು ಅನುದಾನ ಒದಗಿಸಿದರು. ಅಲ್ಲದೇ ಹಿರಿಯ ನಾಗರೀಕರು, ವಿಧವೆಯರು ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ ಮಾಸಿಕ ಪಿಂಚಿಣಿ ಜಾರಿಗೊಳಿಸಿದರು. ವಿದ್ಯಾರ್ಜನೆಗಾಗಿ ಬಡ್ಡಿರಹಿತ ಸಾಲ ಯೋಜನೆ ಆರಂಭಿಸಿ ವಿದ್ಯಾರ್ಥಿಗಳಿಗೂ ನೆರವು ನೀಡಿದರು. ಸೈಬರ್ ಏಜ್ ಯೋಜನೆ ಜಾರಿಗೊಳಿಸಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಗೋವಾ ರಾಜ್ಯದಲ್ಲಿನ ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಆಧ್ಯತೆ ನೀಡುವ ನಿಟ್ಟಿನಲ್ಲಿ ಕಾಮಧೇನು ಯೋಜನೆ ಜಾರಿಗೊಳಿಸಿದರು. ಸಿಎಂ ರೋಜಗಾರ್ ಯೋಜನೆ ಜಾರಿಗೊಳಿಸಿ ಸ್ವಯಂ ಉದ್ಯೋಗಿಗಳಿಗೆ ನೆರವು ನೀಡಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+