Get Updates
Get notified of breaking news, exclusive insights, and must-see stories!

ನಾರಾಯಣ ಗೌಡ ಕೆ. ಸಿ.

ನಾರಾಯಣ ಗೌಡ ಕೆ. ಸಿ.
ಮಂಡ್ಯ ಜಿಲ್ಲೆಯ ಕೆ. ಆರ್.
By Moumi Majumdar | Monday, August 29, 2022, 04:52:57 PM [IST]

ನಾರಾಯಣ ಗೌಡ ಕೆ. ಸಿ. ಜೀವನ ಚರಿತ್ರೆ

ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ಕ್ಷೇತ್ರದ ಶಾಸಕರು ಕೆ. ಸಿ. ನಾರಾಯಣ ಗೌಡ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು.

ಒಕ್ಕಲಿಗ ಸಮುದಾಯದ ನಾಯಕ ಕೆ. ಸಿ. ನಾರಾಯಣ ಗೌಡ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆಯಲು ನಾರಾಯಣ ಗೌಡರು ಕಾರಣ.

2008ರ ಚುನಾವಣೆಯಲ್ಲಿ ಕೃಷ್ಣರಾಜಪೇಟೆ (ಕೆ. ಆರ್. ಪೇಟೆ)ಯಲ್ಲಿ ಮೊದಲ ಬಾರಿಗೆ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಕೆ. ಸಿ. ನಾರಾಯಣ ಗೌಡ 10,218 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.

ಬಳಿಕ 2013 ಮತ್ತು 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು, ಗೆಲುವು ಸಾಧಿಸಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಳಿಕ ಬಿಜೆಪಿ ಸೇರಿದ ಅವರು 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕಾ ಹಾಗೂ ರೇಷ್ಮೆ ಖಾತೆ ಸಚಿವರಾದರು. ಬಳಿಕ ಖಾತೆ ಬದಲಾವಣೆ ಮಾಡಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೊಣೆ ನೀಡಲಾಯಿತು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮತ್ತೆ ಸಚಿವರಾದರು. ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಹೊಣೆ ನೀಡಲಾಯಿತು.

ಮತ್ತಷ್ಟು ಓದು

ನಾರಾಯಣ ಗೌಡ ಕೆ. ಸಿ. ವಯಕ್ತಿಕ ಜೀವನ

ಪೂರ್ಣ ಹೆಸರು ನಾರಾಯಣ ಗೌಡ ಕೆ. ಸಿ.
ಜನ್ಮ ದಿನಾಂಕ 21 Jul 1962 (ವಯಸ್ಸು 63)
ಹುಟ್ಟಿದ ಸ್ಥಳ ಕೆ. ಆರ್. ಪೇಟೆ, ಮಂಡ್ಯ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Diploma in hotel management
ಉದ್ಯೋಗ ಕೃಷಿ, ಹೋಟೆಲ್ ಉದ್ಯಮ
ತಂದೆಯ ಹೆಸರು ಚಿಕ್ಕೇಗೌಡ
ತಾಯಿಯ ಹೆಸರು ಪುಟ್ಟಮ್ಮ
ಅವಲಂಬಿತರ ಹೆಸರು ದೇವಕಿ
ಅವಲಂಬಿತರ ಉದ್ಯೋಗ ಕೃಷಿ, ಗೃಹಿಣಿ
ಧರ್ಮ ಹಿಂದು
ಜಾತಿ ಒಕ್ಕಲಿಗ
ವೆಬ್‌ಸೈಟ್ www.kcn.gov.in

ನಾರಾಯಣ ಗೌಡ ಕೆ. ಸಿ. ಒಟ್ಟು ಆಸ್ತಿ

ಒಟ್ಟು ಆಸ್ತಿ
₹4.73 CRORE
ಆಸ್ತಿ
₹6.72 CRORE
ಸಾಲಸೋಲ
₹1.98 CRORE

ನಾರಾಯಣ ಗೌಡ ಕೆ. ಸಿ. ಕುರಿತು ಆಸಕ್ತಿದಾಯಕ ಸಂಗತಿಗಳು

ಎರಡು ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಕೆ. ಸಿ. ನಾರಾಯಣ ಗೌಡ ಈಗ ಬಿಜೆಪಿ ನಾಯಕ

ಯಡಿಯೂರಪ್ಪ ತವರು ಕ್ಷೇತ್ರ ಕೆ. ಆರ್. ಪೇಟೆಯಲ್ಲಿ ಬಿಜೆಪಿ ಗೆಲ್ಲಿಸಿದ ಕೀರ್ತಿ

ಜೆಡಿಎಸ್‌ನಲ್ಲಿದ್ದ ಕೆ. ಸಿ. ನಾರಾಯಣ ಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು

ನಾರಾಯಣ ಗೌಡ ಕೆ. ಸಿ. ರಾಜಕೀಯ ಟೈಮ್‌ಲೈನ್

  • 2021: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆ
  • 2019: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರ್ಪಡೆ
  • 2018: ಎರಡನೇ ಬಾರಿಗೆ ಜೆಡಿಎಸ್‌ನಿಂದ ಅಭ್ಯರ್ಥಿಯಾಗಿ ಕಣಕ್ಕೆ, ಗೆಲುವು. ಶಾಸಕ ಸ್ಥಾನಕ್ಕೆ ರಾಜೀನಾಮೆ
  • 2013: ಕೆ. ಆರ್. ಪೇಟೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಗೆಲುವು
  • 2008: ಕೆ. ಆರ್. ಪೇಟೆಯಿಂದ ಮೊದಲ ಬಾರಿಗೆ ಬಿಎಸ್‌ಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ, ಸೋಲು

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+