ಎನ್. ಮಹೇಶ್

ಎನ್. ಮಹೇಶ್
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್‌.
By Ajay M V | Thursday, August 25, 2022, 02:13:48 PM [IST]

ಎನ್. ಮಹೇಶ್ ಜೀವನ ಚರಿತ್ರೆ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್‌. 2018ರ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಜೆಡಿಎಸ್ ಬೆಂಬಲದೊಂದಿಗೆ ಚುನಾವಣಾ ಕಣಕ್ಕಿಳಿದಿದ್ದ ಮಹೇಶ್ ಗೆಲುವು ಸಾಧಿಸಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸೇರಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿದ್ದ ಎನ್. ಮಹೇಶ್ 1999ರಲ್ಲಿ ಸರ್ಕಾರಿ ಉದ್ಯೋಗ ತೊರೆದು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ದಲಿತ ನಾಯಕರಾದ ಅವರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಪಕ್ಷ ಸೇರಿದರು. ಕರ್ನಾಟಕ ಬಿಎಸ್‌ಪಿ ಪಕ್ಷದ ರಾಜ್ಯಾಧ್ಯಕ್ಷರಾದರು.

ಮೊದಲ ಬಾರಿಗೆ ಕಿರುಗಾವಲು ಕ್ಷೇತ್ರದಿಂದ ಜನತಾ ಪರಿವಾರದ ನಾಯಕ ಕೆ. ಎನ್. ನಾಗೇಗೌಡರ ವಿರುದ್ಧ ಚುಣಾವಣೆಗೆ ಸ್ಪರ್ಧಿಸಿ ಸೋಲುಕಂಡರು. ಬಳಿಕ ಕೊಳ್ಳೇಗಾಲ ಕ್ಷೇತ್ರದಿಂದ 2004, 2008, 2013ರ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಕಣಕ್ಕಿಳಿದು ಸತತ ಸೋಲು ಅನುಭವಿಸಿದರು. 2009ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಆರ್. ಧ್ರುವ ನಾರಾಯಣ ವಿರುದ್ಧ ಸೋತರು.

2018ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಜೆಡಿಎಸ್ ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿತು. ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್‌ಪಿ-ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಎನ್. ಮಹೇಶ್ 71,792 ಮತಗಳನ್ನು ಪಡೆದು ಮೊದಲ ಬಾರಿಗೆ ಗೆಲುವು ಸಾಧಿಸಿದರು.

ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರೂ ಆದರು. ಆದರೆ ಸರ್ಕಾರ ರಚನೆಯಾಗಿ ನಾಲ್ಕೂವರೆ ತಿಂಗಳಿನಲ್ಲಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.

ಶಾಸಕರ ರಾಜೀನಾಮೆ ಬಳಿಕ ಎಚ್. ಡಿ. ಕುಮಾರಸ್ವಾಮಿ ಸರ್ಕಾರ ಬಹುಮತ ಸಾಬೀತುಪಡಿಸುವ ಅನಿವಾರ್ಯತೆ ಎದುರಾಯಿತು. ಆಗ ಬಿಎಸ್‌ಪಿ ಪಕ್ಷ ಜೆಡಿಎಸ್ ಬೆಂಬಲಿಸುವಂತೆ ಎನ್‌. ಮಹೇಶ್‌ಗೆ ಸೂಚಿಸಿತು. ಆದರೆ, ಅವರು ತಟಸ್ಥವಾಗಿರಲು ಬಯಸಿದರು. ಪರಿಣಾಮ ಬಿಎಸ್‌ಪಿ ಪಕ್ಷದಿಂದ ಉಚ್ಛಾಟನೆಗೊಂಡರು.

ಮೈತ್ರಿ ಸರ್ಕಾರ ಪತನದ ನಂತರ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. 2021ರ ಆಗಸ್ಟ್ 5ರಂದು ಎನ್. ಮಹೇಶ್ ಬಿಜೆಪಿ ಸೇರಿದ್ದಾರೆ.

ಮತ್ತಷ್ಟು ಓದು

ಎನ್. ಮಹೇಶ್ ವಯಕ್ತಿಕ ಜೀವನ

ಪೂರ್ಣ ಹೆಸರು ಎನ್. ಮಹೇಶ್
ಜನ್ಮ ದಿನಾಂಕ 01 Jun 1956 (ವಯಸ್ಸು 69)
ಹುಟ್ಟಿದ ಸ್ಥಳ ಮೈಸೂರು
ಪಕ್ಷದ ಹೆಸರು Bahujan Samaj Party
ವಿದ್ಯಾರ್ಹತೆ Post Graduate
ಉದ್ಯೋಗ ಸರ್ಕಾರಿ ನೌಕರ, ರಾಜಕಾರಣಿ
ತಂದೆಯ ಹೆಸರು N-A
ತಾಯಿಯ ಹೆಸರು N-A
ಅವಲಂಬಿತರ ಹೆಸರು ವಿಜಯಾ
ಅವಲಂಬಿತರ ಉದ್ಯೋಗ ಎಜೆಎಂ ಅಧಿಕಾರಿ, ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್, ಬೆಂಗಳೂರು.
ಜಾತಿ ದಲಿತ

ಎನ್. ಮಹೇಶ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹75.66 LAKHS
ಆಸ್ತಿ
₹75.66 LAKHS
ಸಾಲಸೋಲ
N/A

ಎನ್. ಮಹೇಶ್ ಕುರಿತು ಆಸಕ್ತಿದಾಯಕ ಸಂಗತಿಗಳು

ಸುಮಾರು 20 ವರ್ಷಗಳಿಗೂ ಅಧಿಕ ಕಾಲ ಎನ್. ಮಹೇಶ್ ಕರ್ನಾಟಕದಲ್ಲಿ ಬಿಎಸ್‌ಪಿ ಪಕ್ಷ ಸಂಘಟನೆ ಮಾಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿದ್ದ ಅವರು ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದರು.

2018ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ದಕ್ಷಿಣ ಭಾರತದಲ್ಲಿ ಶಾಸಕರಾಗಿ ಆಯ್ಕೆಯಾದ ಮೊದಲ ಬಿಎಸ್‌ಪಿ ಶಾಸಕ ಎಂಬ ಹೆಗ್ಗಳಿಕೆ ಪಡೆದರು.

2013ರ ಚುನಾವಣೆಯಲ್ಲಿ ಎನ್. ಮಹೇಶ್ ಕೊಳ್ಳೇಗಾಲದಲ್ಲಿ ಸೋತರು. ಆದರೆ ಅವರು ಚುನಾವಣೆಯಲ್ಲಿ 37,209 ಮತಗಳನ್ನು ಪಡೆದಿದ್ದರು.

ಎನ್. ಮಹೇಶ್ ರಾಜಕೀಯ ಟೈಮ್‌ಲೈನ್

  • 2021: ಬಿಎಸ್‌ಪಿಯಿಂದ ಉಚ್ಛಾಟನೆಗೊಂಡಿದ್ದ ಎನ್. ಮಹೇಶ್ ಬಿಜೆಪಿ ಸೇರ್ಪಡೆ.
  • 2019: ಜುಲೈನಲ್ಲಿ ಬಿಎಸ್‌ಪಿ ಪಕ್ಷದಿಂದ ಎನ್. ಮಹೇಶ್ ಉಚ್ಛಾಟನೆ
  • 2018: ಜೆಡಿಎಸ್ ಜೊತೆಗಿನ ಮೈತ್ರಿ ಬಳಿಕ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್‌ಪಿ-ಜೆಡಿಎಸ್ ಒಂಟಿ ಅಭ್ಯರ್ಥಿಯಾಗಿ ಕಣಕ್ಕೆ, ಗೆಲುವು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಪ್ರಾಥಮಿಕ & ಪ್ರೌಢ ಶಿಕ್ಷಣ ಖಾತೆ ಹೊಣೆ. 2018ರ ಅಕ್ಟೋಬರ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ.
  • 2013: ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಸೋಲು. ಆದರೆ 37,209 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರು.
  • 2009: ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲು
  • 1999: ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿದ್ದ ಎನ್. ಮಹೇಶ್ ಸರ್ಕಾರಿ ಉದ್ಯೋಗ ತೊರೆದು ರಾಜಕೀಯಕ್ಕೆ ಸೇರ್ಪಡೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+