ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಸಂಸ್ಥಾಪಕರು. ಮೂರು ಬಾರಿ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದವರು. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಕ್ಟೋಬರ್ 10, 2022ರ ಸೋಮವಾರ ನಿಧನ ಹೊಂದಿದರು.
ಮುಲಾಯಂ ಸಿಂಗ್ ಯಾದವ್ 1989 ರಿಂದ 1991, 1993 ರಿಂದ 1995 ಮತ್ತು 2003 ರಿಂದ 2007ರ ತನಕ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು. ಮುಲಾಯಂ ಸಿಂಗ್ ಯಾದವ್ ಪುತ್ರ ಅಖಿಲೇಶ್ ಯಾದವ್ ಸಹ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
1996 ರಿಂದ 1998ರ ತನಕ ಮುಲಾಯಂ ಸಿಂಗ್ ಯಾದವ್ ಭಾರತದ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. 1974 ರಿಂದ 2007ರ ನಡುವೆ ಒಟ್ಟು 7 ಬಾರಿ ಉತ್ತರ ಪ್ರದೇಶ ವಿಧಾನಸಭೆಗೆ ಶಾಸಕರಾಗಿ ಅವರು ಆಯ್ಕೆಗೊಂಡಿದ್ದಾರೆ. ಹಲವು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡ ಅವರು ಅಂತಿಮವಾಗಿ ಸಮಾಜವಾದಿ ಪಕ್ಷ ಸ್ಥಾಪನೆ ಮಾಡುವ ತೀರ್ಮಾನ ಮಾಡಿದರು. 1992ರಲ್ಲಿ ಪಕ್ಷ ಸ್ಥಾಪಿಸಿದರು.
ರಾಜ್ಯದಲ್ಲಿ ಪಕ್ಷದ ಹಲವಾರು ಚುನಾವಣೆಯಲ್ಲಿ ಗೆಲ್ಲುವಂತೆ, ಉತ್ತರ ಪ್ರದೇಶದ ಪ್ರಮುಖ ವಿರೋಧ ಪಕ್ಷವಾಗುವಂತೆ ಸಮಾಜವಾದಿ ಪಕ್ಷವನ್ನು ಕಟ್ಟಿ ಬೆಳೆಸಿದರು.
| ಪೂರ್ಣ ಹೆಸರು | ಮುಲಾಯಂ ಸಿಂಗ್ ಯಾದವ್ |
| ಜನ್ಮ ದಿನಾಂಕ | 21 Nov 1939 |
| ಮೃತಪಟ್ಟ ದಿನಾಂಕ | 10 Oct 2022 (ವಯಸ್ಸು 82) |
| ಹುಟ್ಟಿದ ಸ್ಥಳ | ಸೈಫೈ, (ಉತ್ತರ ಪ್ರದೇಶ) |
| ಪಕ್ಷದ ಹೆಸರು | Samajwadi Party |
| ವಿದ್ಯಾರ್ಹತೆ | Post Graduate |
| ಉದ್ಯೋಗ | ಕೃಷಿಕ, ಸಮಾಜ ಸೇವೆ |
| ತಂದೆಯ ಹೆಸರು | ಸುಗುರ್ ಸಿಂಗ್ ಯಾದವ್ |
| ತಾಯಿಯ ಹೆಸರು | ಮೂರ್ತಿ ದೇವಿ |
| ಅವಲಂಬಿತರ ಹೆಸರು | ಶ್ರೀಮತಾ ಸಾಧನಾ ಯಾದವ್ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಮಕ್ಕಳು | 2 ಪುತ್ರ(ರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.