ಮಿಥುನ್ ಚಕ್ರವರ್ತಿ (ಜನನ ಗೌರಂಗ ಚಕ್ರವರ್ತಿ; 16 ಜೂನ್ 1950) ಓರ್ವ ಜನಪ್ರಿಯ ಭಾರತೀಯ ಚಲನಚಿತ್ರ ನಟ, ಗಾಯಕ, ನಿರ್ಮಾಪಕ, ಬರಹಗಾರ, ಸಮಾಜ ಸೇವಕ, ಉದ್ಯಮಿ, ದೂರದರ್ಶನ ನಿರೂಪಕ ಮತ್ತು ಮಾಜಿ ರಾಜ್ಯಸಭಾ ಸದಸ್ಯ. ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳ ಜೊತೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮಿಥುನ್ ಚಕ್ರವರ್ತಿ ಅವರು ಆರ್ಟ್ ಹೌಸ್ ನ 'ಮ್ರಿಗಯಾ' (1976) ಎಂಬ ನಾಟಕದೊಂದಿಗೆ ನಟನಾ ವೃತ್ತಿಗೆ ಪಾದಾರ್ಪಣೆ ಮಾಡಿದರು. ಇದರ ಅತ್ಯುತ್ತಮ ಅಭಿನಯಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
1982 ರ 'ಡಿಸ್ಕೋ ಡ್ಯಾನ್ಸರ್ ' ಚಲನಚಿತ್ರದಲ್ಲಿ ಚಕ್ರವರ್ತಿ ಜಿಮ್ಮಿ ಪಾತ್ರವನ್ನು ನಿರ್ವಹಿಸಿದರು.
ಭಾರತ ಸೇರಿದಂತೆ ಸೋವಿಯತ್ ಒಕ್ಕೂಟ ಮತ್ತು ರಷ್ಯಾದಲ್ಲಿ ಈ ಸಿನಿಮಾ ಯಶಸ್ವಿಯಾಗಿ ಓಡಿತು. ಡಿಸ್ಕೋ ಡ್ಯಾನ್ಸರ್ ಜೊತೆಗೆ ಮಿಥುನ್ ಚಕ್ರವರ್ತಿ, 'ಸುರಕ್ಷಾ', 'ಸಾಹಸ್', 'ವಾರ್ದತ್', 'ವಾಂಟೆಡ್', ಬಾಕ್ಸರ್, ಪ್ಯಾರ್ ಜುಕ್ತಾ ನಹಿನ್, ಪ್ಯಾರಿ ಬೆಹ್ನಾ, ಅವಿನಾಶ್, ಡ್ಯಾನ್ಸ್ ಡ್ಯಾನ್ಸ್, ಪ್ರೇಮ್ ಪ್ರತಿಜ್ಞಾ, ಮುಜ್ರಿಮ್, ಅಗ್ನಿಪಥ್, ಯುಗಂಧರ್, ದಿ ಡಾನ್, ಜಲ್ಲಡ್ ಸಿನಿಮಾದಲ್ಲಿ ನಟಿಸಿದರು. 1991 ರಲ್ಲಿ 'ಅಗ್ನಿಪಥ್' ಚಿತ್ರದಲ್ಲಿನ ಕೃಷ್ಣನ್ ಅಯ್ಯರ್ ನರಿಯಲ್ ಪನಿವಾಲಾ ಪಾತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.
'ತಹಾದರ್ ಕಥಾ' (1992) ಮತ್ತು 'ಸ್ವಾಮಿ ವಿವೇಕಾನಂದ' (1998) ಚಿತ್ರದ ಅಭಿನಯಕ್ಕಾಗಿ ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡರು. ಚಕ್ರವರ್ತಿ ಅವರು ಬಂಗಾಳಿ, ಹಿಂದಿ, ಒಡಿಯಾ, ಭೋಜ್‌ಪುರಿ, ತಮಿಳು, ತೆಲುಗು, ಕನ್ನಡ, ಮತ್ತು ಪಂಜಾಬಿ ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
1989 ರಲ್ಲಿ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ ಒಟ್ಟು 19 ಚಲನಚಿತ್ರಗಳು ಬಿಡುಗಡೆಯಾದವು. ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆಯಿತು. ಇದೀಗ 2021ರಲ್ಲೂ ಬಾಲಿವುಡ್ ನಲ್ಲಿ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.
ಆತಿಥ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದ
ಚಕ್ರವರ್ತಿ ಅವರು 'ಮೊನಾರ್ಕ್ ಗ್ರೂಪ್' ಅನ್ನು ಹೊಂದಿದ್ದಾರೆ. ಜೊತೆಗೆ ಪಾಪರಾಟ್ಜಿ ಪ್ರೊಡಕ್ಷನ್ಸ್ ಹೌಸ್ ಅನ್ನು ಪ್ರಾರಂಭಿಸಿದ್ದಾರೆ. 1992 ರಲ್ಲಿ, ಇವರು, ದಿಲೀಪ್ ಕುಮಾರ್ ಮತ್ತು ಸುನಿಲ್ ದತ್ ಅವರೊಂದಿಗೆ ಸೇರಿ ಸಿನಿ ಮತ್ತು ಟಿ.ವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (ಸಿಎನ್ ಟಿಎಎ) ಎಂಬ ನಿರ್ಗತಿಕ ನಟರಿಗೆ ಸಹಾಯ ಮಾಡಲು ಟ್ರಸ್ಟ್ ಸ್ಥಾಪಿಸಿದರು. ಇದಲ್ಲದೆ ಫಿಲ್ಮ್ ಸ್ಟುಡಿಯೋಸ್ ಸೆಟ್ಟಿಂಗ್ ಮತ್ತು ಅಲೈಡ್ ಮಜ್ದೂರ್ ಯೂನಿಯನ್ ಅಧ್ಯಕ್ಷರಾಗಿದ್ದರು. ಇದು ಸಿನಿ ಕಾರ್ಮಿಕರ ಕಲ್ಯಾಣ, ಕ್ಷೇಮಾಭಿವೃದ್ಧಿಯನ್ಮು ನೋಡಿಕೊಳ್ಳುತ್ತದೆ ಮತ್ತು ಅವರ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತದೆ.
ಟೆಲಿವಿಷನ್ ಶೋ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ' ನಲ್ಲಿ ಚಕ್ರವರ್ತಿ ಗ್ರ್ಯಾಂಡ್ ಮಾಸ್ಟರ್ ಆಗಿದ್ದು, ಈಗಾಗಲೇ ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ. 2012ರ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲಲ್ಲು ತೃಣಮೂಲ ಕಾಂಗ್ರೆಸ್ ಬೆಂಬಲ ಅವಶ್ಯ ವಾಗಿತ್ತು. ಆಗ ಮಿಥುನ್ ಚಕ್ರವರ್ತಿ ಅವರು ಪ್ರಣಬ್ ಮುಖರ್ಜಿ ಮತ್ತು ಮಮತಾ ಬ್ಯಾನರ್ಜಿ ನಡುವೆ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.
ಚಕ್ರವರ್ತಿ ಅವರ ಜೀವನವನ್ನು ಆಧರಿಸಿ 'ಜಿಮ್ಮಿ ಜಿಂಗ್‌ಚಕ್' ಎಂಬ ಕಾಮಿಕ್ ಪುಸ್ತಕವನ್ನು ಹೊರತರಲಾಗಿದೆ.
| ಪೂರ್ಣ ಹೆಸರು | ಮಿಥುನ್ ಚಕ್ರವರ್ತಿ |
| ಜನ್ಮ ದಿನಾಂಕ | 16 Jun 1950 (ವಯಸ್ಸು 75) |
| ಹುಟ್ಟಿದ ಸ್ಥಳ | ಕೋಲ್ಕತ್ತಾ, ಪಶ್ಚಿಮ ಬಂಗಾಳ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Graduated from Indian Film & Telivision Institute, Pune |
| ಉದ್ಯೋಗ | Actor |
| ತಂದೆಯ ಹೆಸರು | ಬಸಂತ ಕುಮಾರ್ ಚಕ್ರವರ್ತಿ |
| ತಾಯಿಯ ಹೆಸರು | .ಶಾಂತಿರಾಣಿ ಚಕ್ರವರ್ತಿ |
| ಅವಲಂಬಿತರ ಹೆಸರು | ಯೋಗಿತಾ ಬಾಲಿ |
| ಅವಲಂಬಿತರ ಉದ್ಯೋಗ | ನಟಿ, ಚಲನಚಿತ್ರ ನಿರ್ಮಾಪಕಿ |
| ಮಕ್ಕಳು | 3 ಪುತ್ರ(ರು) 1 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.