ಮೈಕೆಲ್ ಲೋಬೊ

ಮೈಕೆಲ್ ಲೋಬೊ
ಮೈಕೆಲ್ ವಿನ್ಸೆಂಟ್ ಲೋಬೊ ಇವರು ಗೋವಾ ರಾಜ್ಯದವರಾಗಿದ್ದು, ರಾಜಕಾರಣಿ ಹಾಗೂ ವ್ಯಾಪಾರೋದ್ಯಮಿಯಾಗಿದ್ದಾರೆ. ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದ ಇವರು ಬಿಜೆಪಿ ಪಕ್ಷದ ಸದಸ್ಯರಾಗಿದ್ದಾರೆ.
By Rashmi | Thursday, May 30, 2019, 03:45:57 PM [IST]

ಮೈಕೆಲ್ ಲೋಬೊ ಜೀವನ ಚರಿತ್ರೆ

ಮೈಕೆಲ್ ವಿನ್ಸೆಂಟ್ ಲೋಬೊ ಇವರು ಗೋವಾ ರಾಜ್ಯದವರಾಗಿದ್ದು, ರಾಜಕಾರಣಿ ಹಾಗೂ ವ್ಯಾಪಾರೋದ್ಯಮಿಯಾಗಿದ್ದಾರೆ. ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದ ಇವರು ಬಿಜೆಪಿ ಪಕ್ಷದ ಸದಸ್ಯರಾಗಿದ್ದಾರೆ. 2012 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಲ್ಲಂಗುಟೆ ವಿಧಾನಸಭಾ ಕ್ಷೇತ್ರದಲ್ಲಿ ಆಗ ಶಾಸಕರಾಗಿದ್ದ ಆಗ್ನೆಲೊ ನಿಕೋಲಾಸ್ ಫರ್ನಾಂಡಿಸ್ ಅವರನ್ನು ಸೋಲಿಸಿ 2012ರ ಮಾರ್ಚ್ 7 ರಂದು ಗೋವಾ 6ನೇ ವಿಧಾನಸಭೆಯ ಶಾಸಕರಾದರು. ನಾರ್ತ ಗೋವಾ ಪ್ಲಾನಿಂಗ್ ಆಂಡ್ ಡೆವಲಪಮೆಂಟ್ ಅಥಾರಿಟಿ ಚೇರಮನ್‌ರಾಗಿರುವ ಇವರು ಗೋವಾ ಸರಕಾರದ ಹಲವಾರು ಕಮೀಟಿಗಳ ಸದಸ್ಯರಾಗಿದ್ದಾರೆ. ಕಾಂಡೋಲಿಮ್‌ನಲ್ಲಿ ಭಾರತದ ಪ್ರಥಮ ಪ್ಲೇಬಾಯ್ ಕ್ಲಬ್ ಸ್ಥಾಪನೆಗೆ ಇವರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.

ಮತ್ತಷ್ಟು ಓದು

ಮೈಕೆಲ್ ಲೋಬೊ ವಯಕ್ತಿಕ ಜೀವನ

ಪೂರ್ಣ ಹೆಸರು ಮೈಕೆಲ್ ಲೋಬೊ
ಜನ್ಮ ದಿನಾಂಕ 18 Jun 1976 (ವಯಸ್ಸು 49)
ಹುಟ್ಟಿದ ಸ್ಥಳ ಮಾಪುಸಾ, ಗೋವಾ
ಪಕ್ಷದ ಹೆಸರು Karnataka Janata Paksha
ವಿದ್ಯಾರ್ಹತೆ 10th Pass
ಉದ್ಯೋಗ ರಾಜಕಾರಣಿ, ವ್ಯಾಪಾರೋದ್ಯಮಿ
ತಂದೆಯ ಹೆಸರು ಮೆಲಶಿಯಾಡೆಸ್ ವಿನ್ಸೆಂಟ್ ಲೋಬೊ
ತಾಯಿಯ ಹೆಸರು ಅಲ್ಮೀರಾ ಲೋಬೊ
ಅವಲಂಬಿತರ ಹೆಸರು ಸಾಂಚಾ ಡೆಲಿಲಾ ಲೋಬೊ
ಅವಲಂಬಿತರ ಉದ್ಯೋಗ ಹೌಸ್ ವೈಫ್ ಹಾಗೂ ಸರಪಂಚ್
ಮಕ್ಕಳು 2 ಪುತ್ರ(ರು)
ವೆಬ್‌ಸೈಟ್ http://michaellobo.co.in

ಮೈಕೆಲ್ ಲೋಬೊ ಒಟ್ಟು ಆಸ್ತಿ

ಒಟ್ಟು ಆಸ್ತಿ
₹3.06 LAKHS
ಆಸ್ತಿ
₹14.06 LAKHS
ಸಾಲಸೋಲ
₹11 LAKHS

ಮೈಕೆಲ್ ಲೋಬೊ ಕುರಿತು ಆಸಕ್ತಿದಾಯಕ ಸಂಗತಿಗಳು

ತಮ್ಮ ನಿರಂತರ ಕೆಲಸದ ಮಧ್ಯೆಯೂ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಇವರು ಗೋವಾದ ಐಎಸ್‌ಎಲ್ ಟೀಂ ಎಫ್‌ಸಿ ಗೋವಾದ ಕಟ್ಟರ್ ಅಭಿಮಾನಿ. ಹಲವಾರು ಕ್ರೀಡಾ ಸಂಸ್ಥೆಗಳಿಗೆ ಸತತವಾಗಿ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ತಮ್ಮ ಸಮಸ್ಯೆಗಳ ಅಹವಾಲು ಹೊತ್ತು ಇವರ ಬಳಿಗೆ ಬರುವ ಜನರಿಗೆ ಮಾನವೀಯತೆಯಿಂದ ಸ್ಪಂದಿಸುವ ಗುಣದಿಂದ ಇವರು ಹೆಸರುವಾಸಿಯಾಗಿದ್ದಾರೆ.

ಮೈಕೆಲ್ ಲೋಬೊ ಸಾಧನೆಗಳು

ಪಾರ್ರಾ ಸಿಟಿಜೆನ್ಸ್ ಫೋರಂ ಕಾರ್ಯದರ್ಶಿಯಾಗಿದ್ದರು.
ನಾರ್ತ್ ಗೋವಾ ಬಿಜೆಪಿ ಅಧ್ಯಕ್ಷರಾದರು ಹಾಗೂ ನಾರ್ತ್ ಗೋವಾ ಪ್ಲಾನಿಂಗ್ ಆಂಡ್ ಡೆವಲಪಮೆಂಟ್ ಅಥಾರಿಟಿಯ ಚೇರಮನ್‌ರಾದರು.
ಮೈಕೆಲ್ ಲೋಬೊ ನೇತೃತ್ವದಲ್ಲಿ ಕಲ್ಲಂಗುಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು ಕೆಲವೇ ವರ್ಷಗಳಲ್ಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಪಾರ್ಕಿಂಗ್, ಎಂಟರಟೇನಮೆಂಟ್ ಜೋನ್‌ಗಳು, ಒಳಚರಂಡಿ ವ್ಯವಸ್ಥೆ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಪ್ಲೇಬಾಯ್ ಕ್ಲಬ್ ಆರಂಭಿಸುವುದರ ವಿರುದ್ಧ ಹೋರಾಡಿದ ಇವರು ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡರು. ಇವರ ಹೋರಾಟದ ಫಲದಿಂದ ಸಮಾಜವಿರೋಧಿ ವ್ಯಕ್ತಿಗಳು ಆರಂಭಿಸಿದ್ದ ಹಲವಾರು ಅಕ್ರಮ ನೈಟ್ ಕ್ಲಬ್ ಹಾಗೂ ಡಾನ್ಸ್ ಬಾರ್‌ಗಳನ್ನು ಸರಕಾರ ಮುಚ್ಚಿಸಿತು.
2016 ರಲ್ಲಿ ಪುಣೆಯ ಭಾರತೀಯ ಛಾತ್ರ ಸಂಸದ್ ಫೌಂಡೇಶನ್ ಹಾಗೂ ಎಂಎಇಇಆರ್‌ನ ಎಂಐಟಿ ಸ್ಕೂಲ್ ಆಫ್ ಗವರ್ನಮೆಂಟ್ ವತಿಯಿಂದ ಇವರಿಗೆ ಐಡಿಯಲ್ ಯೂತ್ ಲೆಜಿಸ್ಲೇಚರ್ ಅವಾರ್ಡ್ (ಯುವ ವಿಧಾಯಕ್ ಪುರಸ್ಕಾರ) ನೀಡಲಾಯಿತು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+