Get Updates
Get notified of breaking news, exclusive insights, and must-see stories!

ಮನೀಷ ಸಿಸೋಡಿಯಾ

ಮನೀಷ ಸಿಸೋಡಿಯಾ
ಮನೀಷ ಸಿಸೋಡಿಯಾ ಇವರು ವೃತ್ತಿಯಿಂದ ಪತ್ರಕರ್ತರು. ಇವರು ಜಿ ನ್ಯೂಸ್ ಮತ್ತು ಆಲ್ ಇಂಡಿಯಾ ರೇಡಿಯೋ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
By Zainab Ashraf | Friday, February 1, 2019, 05:56:02 PM [IST]

ಮನೀಷ ಸಿಸೋಡಿಯಾ ಜೀವನ ಚರಿತ್ರೆ

ಮನೀಷ ಸಿಸೋಡಿಯಾ ಇವರು ವೃತ್ತಿಯಿಂದ ಪತ್ರಕರ್ತರು. ಇವರು ಜಿ ನ್ಯೂಸ್ ಮತ್ತು ಆಲ್ ಇಂಡಿಯಾ ರೇಡಿಯೋ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಪರಿವರ್ತನ್ ಎಂಬ ಸರಕಾರೇತರ ಸಂಸ್ಥೆಯ ಸಕ್ರಿಯ ಕಾರ್ಯಕರ್ತರೂ ಆಗಿದ್ದಾರೆ. 2011 ರಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ ಅವರು ಆರಂಭಿಸಿದ ಭ್ರಷ್ಟಾಚಾರ ವಿರೋಧಿ ‘ಇಂಡಿಯಾ ಆಗೈನ್ಸ್ಟ್ ಕರಪ್ಶನ್’ ಆಂದೋಲನದ ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದರು. ನಂತರ ಇವರು ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯರಾಗಿ ಆಯ್ಕೆಯಾದರು. 2013 ರಲ್ಲಿ ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಇವರು ಶಾಸಕರಾಗಿ ಆಯ್ಕೆಯಾದರು.

ಮತ್ತಷ್ಟು ಓದು

ಮನೀಷ ಸಿಸೋಡಿಯಾ ವಯಕ್ತಿಕ ಜೀವನ

ಪೂರ್ಣ ಹೆಸರು ಮನೀಷ ಸಿಸೋಡಿಯಾ
ಜನ್ಮ ದಿನಾಂಕ 05 Jan 1972 (ವಯಸ್ಸು 54)
ಹುಟ್ಟಿದ ಸ್ಥಳ ಹಾಪೂರ ಜಿಲ್ಲೆ, ಉತ್ತರ ಪ್ರದೇಶ
ಪಕ್ಷದ ಹೆಸರು Aam Aadmi Party
ವಿದ್ಯಾರ್ಹತೆ Others
ಉದ್ಯೋಗ ಪತ್ರಕರ್ತ
ತಂದೆಯ ಹೆಸರು ಧರಂಪಾಲ್ ಸಿಂಗ್
ತಾಯಿಯ ಹೆಸರು N/A
ಅವಲಂಬಿತರ ಹೆಸರು ಸೀಮಾ ಸಿಸೋಡಿಯಾ
ಅವಲಂಬಿತರ ಉದ್ಯೋಗ ಹೌಸ್ ವೈಫ್
ಮಕ್ಕಳು 1 ಪುತ್ರ(ರು)
ಧರ್ಮ ಹಿಂದು
ವೆಬ್‌ಸೈಟ್ http://aamaadmiparty.org/teams/manish-sisodia

ಮನೀಷ ಸಿಸೋಡಿಯಾ ಒಟ್ಟು ಆಸ್ತಿ

ಒಟ್ಟು ಆಸ್ತಿ
₹-0.11 CRORE
ಆಸ್ತಿ
₹1.43 CRORE
ಸಾಲಸೋಲ
₹1.54 CRORE

ಮನೀಷ ಸಿಸೋಡಿಯಾ ಕುರಿತು ಆಸಕ್ತಿದಾಯಕ ಸಂಗತಿಗಳು

ಆಲ್ ಇಂಡಿಯಾ ರೇಡಿಯೋದಲ್ಲಿ ‘ಜೀರೊ ಅವರ್’ ಎಂಬ ಕಾರ್ಯಕ್ರಮವನ್ನು ಇವರು ನಡೆಸಿಕೊಡುತ್ತಿದ್ದರು. ಇವರು 2006ರಲ್ಲಿ ಪಬ್ಲಿಕ್ ಕಾಸ್ ರಿಸರ್ಚ್ ಫೌಂಡೇಶನ್ ಸ್ಥಾಪಿಸಿದರು. ಮನೀಷ ಸಿಸೋಡಿಯಾ ಅವರಿಗೆ ದಕ್ಷಿಣ ಭಾರತೀಯ ಹಾಗೂ ಪಂಜಾಬಿ ಶೈಲಿಯ ಆಹಾರಗಳು ತುಂಬಾ ಇಷ್ಟ.

ಮನೀಷ ಸಿಸೋಡಿಯಾ ರಾಜಕೀಯ ಟೈಮ್‌ಲೈನ್

  • 2015: 2015 ರ ಫೆಬ್ರವರಿ 14ರಂದು ಮನೀಶ್ ಸಿಸೋಡಿಯಾ ದೆಹಲಿಯ ಪ್ರಥಮ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರು ಪ್ರತಾಪ ಗಂಜ್ ವಿಧಾನ ಸಭಾ ಕ್ಷೇತ್ರದಿಂದ ಜಯಗಳಿಸಿದ್ದರು.
  • 2013: ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನಕುಲ್ ಭಾರದ್ವಾಜ್ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು.
  • 2012: ತಮ್ಮಮಿತ್ರ ಕೇಜ್ರಿವಾಲ್ ಅವರೊಂದಿಗೆ ಸೇರಿಕೊಂಡು ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿದರು. (ಎಎಪಿ)

ಹಿಂದಿನ ಇತಿಹಾಸ

  • 2011: ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗಿಯಾದರು.
  • 2006: 2006 ರಲ್ಲಿ ಅಭಿನಂದನ್ ಸೇಖ್ರಿ ಹಾಗೂ ಅರವಿಂದ ಕೇಜ್ರಿವಾಲ್ ಅವರೊಂದಿಗೆ ಸೇರಿಕೊಂಡು ’ಪಬ್ಲಿಕ್ ಕಾಸ್ ರಿಸರ್ಚ್ ಫೌಂಡೇಶನ್’ ಸ್ಥಾಪಿಸಿದರು. ಅಲ್ಲದೆ ಮತ್ತೊಂದು ಎನ್‌ಜಿಒ ’ಕಬೀರ’ ಇದರ ಸ್ಥಾಪನೆಯಲ್ಲೂ ಸಿಸೋಡಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ.
  • 1997: 1997 ರಲ್ಲಿ ಇವರು ಸುದ್ದಿ ಸಂಪಾದಕರಾಗಿ ಹಾಗೂ ವಾಚಕರಾಗಿ ಜೀ ನ್ಯೂಸ್ ಸುದ್ದಿ ಸಂಸ್ಥೆಯನ್ನು ಸೇರಿದರು. 2005 ರವರೆಗೆ ಈ ಸಂಸ್ಥೆಯಲ್ಲಿ ಕೆಲಸ ಮಾಡಿದರು.
  • 1996: ’ಆಲ್ ಇಂಡಿಯಾ ರೇಡಿಯೊ’ ದಲ್ಲಿ ಇವರು ’ಜೀರೊ ಅವರ್’ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.
  • 1993: 1993 ರಲ್ಲಿ ಭಾರತೀಯ ವಿದ್ಯಾ ಭವನದಿಂದ ಸಮೂಹ ಸಂವಹನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದ ನಂತರ ಇವರು ಪತ್ರಕರ್ತರಾಗಿ ವೃತ್ತಿಯನ್ನು ಆರಂಭಿಸಿದರು.

ಮನೀಷ ಸಿಸೋಡಿಯಾ ಸಾಧನೆಗಳು

ಇವರು ಉತ್ತಮ ಶಿಕ್ಷಣ ಸಚಿವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಇವರೊಬ್ಬ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿ ಚಿತ್ರ ನಿರ್ಮಾಪಕರೂ ಆಗಿದ್ದಾರೆ. 2016ರಲ್ಲಿ ಇಂಡಿಯನ್ ಎಕ್ಸಪ್ರೆಸ್ ಪ್ರಕಟಿಸಿದ ಭಾರತದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸಿಸೋಡಿಯ ಸ್ಥಾನ ಪಡೆದಿದ್ದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+