• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಎಂ. ವೀರಪ್ಪ ಮೊಯ್ಲಿ

ಎಂ. ವೀರಪ್ಪ ಮೊಯ್ಲಿ

ಜೀವನ ಚರಿತ್ರೆ

ಮಾರ್ಪಾಡಿ ವೀರಪ್ಪ ಮೊಯ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಲ್ಲೊಬ್ಬರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಪೆಟ್ರೋಲಿಯಂ ಮತ್ತು ಕಾನೂನು ಖಾತೆ ಸಚಿವರು. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕೇತ್ರದಿಂದ ದೊಡ್ಡ ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ಮೇ 16, 2014 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದರು. ಇವರು ಪ್ರಸ್ತುತ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಜನರಲ್ ಸೆಕ್ರೆಟರಿಯಾಗಿದ್ದು, ಆಂಧ್ರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಲ್ಲೊಬ್ಬರಾಗಿರುವ ಮೊಯ್ಲಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಅವರಿಗೆ ರಾಜಕೀಯ ಸಲಹೆಗಳನ್ನು ಸಹ ನೀಡುತ್ತಾರೆ.

ವಯಕ್ತಿಕ ಜೀವನ

ಪೂರ್ಣ ಹೆಸರು ಎಂ. ವೀರಪ್ಪ ಮೊಯ್ಲಿ
ಜನ್ಮ ದಿನಾಂಕ 12 Jan 1940 (ವಯಸ್ಸು 83)
ಹುಟ್ಟಿದ ಸ್ಥಳ ಮೂಡಬಿದ್ರಿ, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Graduate Professional
ಉದ್ಯೋಗ ರಾಜಕಾರಣಿ, ಸಂಸದ, ನ್ಯಾಯವಾದಿ, ಲೇಖಕ, ಕವಿ
ತಂದೆಯ ಹೆಸರು ಪೂವಮ್ಮ
ತಾಯಿಯ ಹೆಸರು ತಮ್ಮಯ್ಯ
ಅವಲಂಬಿತರ ಹೆಸರು ಮಾಲತಿ
ಅವಲಂಬಿತರ ಉದ್ಯೋಗ ಹೌಸ್ ವೈಫ್, ಕೃಷಿ ಮಹಿಳೆ
ಮಕ್ಕಳು 1 ಪುತ್ರ(ರು) 3 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ ನಂ. 708, ಶಂಕರಮಠ ರಸ್ತೆ, ಚಿಕ್ಕಬಳ್ಳಾಪುರ ಟೌನ್, ಚಿಕ್ಕಬಳ್ಳಾಪುರ ಜಿಲ್ಲೆ
ಪ್ರಸ್ತುತ ವಿಳಾಸ ನಂ.3, ತುಘಲಕ್ ಲೇನ್, ಹೊಸದಿಲ್ಲಿ -110011
ಸಂಪರ್ಕ ಸಂಖ್ಯೆ 9845536333 - 08023430491
ಈ ಮೇಲ್ vmoily@kar.nic.in
ವೆಬ್‌ಸೈಟ್ http://www.moily.org
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ಪ್ರಮುಖ ಮುದ್ರಣ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇವರು ನಿಯಮಿತವಾಗಿ ಅಂಕಣಗಳನ್ನು ಬರೆಯುತ್ತಾರೆ. ’ಅನ್‌ಲೀಶಿಂಗ್ ಇಂಡಿಯಾ-ದಿ ಫೈರ್ ಆಫ್ ನಾಲೆಜ್’ ’ಶ್ರೀ ರಾಮಾಯಣ ಮಹಾನ್ವೇಷಣಂ’ ಸೇರಿದಂತೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಕಾಳಜಿ ಹೊಂದಿದ್ದು, ಹಣಕಾಸು ನಿರ್ವಹಣೆ ಹಾಗೂ ರಾಜ್ಯಗಳ ಮ್ಯಾಕ್ರೊ ಹಾಗೂ ಮೈಕ್ರೊ ಎಕನಾಮಿಕ್ಸ್ ಅವಶ್ಯಕತೆಗಳ ಬಗ್ಗೆ ಸತತ ಅಧ್ಯಯನ ನಡೆಸುತ್ತಾರೆ.
ಕ್ರಿಕೆಟ್ ಇವರ ಅಚ್ಚುಮೆಚ್ಚಿನ ಕ್ರೀಡೆಯಾಗಿದೆ.

ರಾಜಕೀಯ ಕಾಲಾನುಕ್ರಮ

 • 2015
  ಜನವರಿ 29, 2015 ರಿಂದೀಚೆಗೆ ಸಾಮಾನ್ಯ ಉದ್ದೇಶಗಳ ಸಮಿತಿಯ ಸದಸ್ಯರಾಗಿದ್ದಾರೆ.
 • 2014
  16ನೇ ಲೋಕಸಭೆಗೆ ಮತ್ತೊಮ್ಮೆ ಸಂಸದರಾಗಿ (2ನೇ ಅವಧಿ) ಆಯ್ಕೆಯಾದರು. ಸೆಪ್ಟೆಂಬರ್ 1, 2014 ರಿಂದ ಹಣಕಾಸು ಸ್ಥಾಯಿ ಸಮಿತಿಯ ಚೇರಮನ್, ವಿದೇಶಾಂಗ ವ್ಯವಹಾರ ಹಾಗೂ ಸಾಗರೋತ್ತರ ಭಾರತೀಯ ವ್ಯವಹಾರಗಳ ಖಾತೆಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.
 • 2009
  2009 ರಲ್ಲಿ 15ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು. 2009 ರಿಂದ 2012 ರವರೆಗೆ ಕ್ರಮವಾಗಿ ಕೇಂದ್ರದ ಕಾನೂನು ಮತ್ತು ನ್ಯಾಯ ಖಾತೆ, ಕಾರ್ಪೊರೇಟ್ ವ್ಯವಹಾರ, ಇಂಧನ, ಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಗಳ ಸಚಿವರಾಗಿ ಕೆಲಸ ಮಾಡಿದರು.
 • 1992
  1992 ರಿಂದ 94ರ ನಡುವೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
 • 1990
  1990 ರಲ್ಲಿ ಕರ್ನಾಟಕ ಸರಕಾರದ ಕ್ಯಾಬಿನೆಟ್ ದರ್ಜೆಯ ಶಿಕ್ಷಣ ಸಚಿವರಾದರು.
 • 1989
  1989 ರಲ್ಲಿ ಕರ್ನಾಟಕ ಸರಕಾರದ ಕಾನೂನು ಖಾತೆಯ ಕ್ಯಾಬಿನೆಟ್ ದರ್ಜೆ ಸಚಿವರಾದರು.
 • 1983
  ಈ ವರ್ಷ ಚುನಾವಣೆಯಲ್ಲಿ ಸೋತ ನಂತರ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾದರು.
 • 1980
  1980 ರಿಂದ 83 ರ ಅವಧಿಯಲ್ಲಿ ಕರ್ನಾಟಕದ ಹಣಕಾಸು ಖಾತೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿದರು.
 • 1975
  ಕರ್ನಾಟಕದ ಸಣ್ಣ ಕೈಗಾರಿಕಾ ಖಾತೆ ರಾಜ್ಯ ಸಚಿವರಾದರು.
 • 1972
  1972 ರಿಂದ 1979 ರವರೆಗೆ ಕರ್ನಾಟಕ ವಿಧಾನಸಭೆಯ ಸದಸ್ಯರು (ಆರು ಅವಧಿ)

ಹಿಂದಿನ ಇತಿಹಾಸ

 • 60ನೇ ದಶಕದ ಆರಂಭದಲ್ಲಿ
  ಮಂಗಳೂರಿನ ಹಂಪನಕಟ್ಟಾದಲ್ಲಿರುವ ಸರಕಾರಿ ಮಹಾವಿದ್ಯಾಲಯದಲ್ಲಿ (ಈಗ ಇದನ್ನು ಯುನಿವರ್ಸಿಟಿ ಕಾಲೇಜ್ ಎಂದು ಕರೆಯಲಾಗುತ್ತದೆ) ಬಿಎ ಪದವಿ ಪಾಸು ಮಾಡಿದರು. ನಂತರ ಬೆಂಗಳೂರಿನ ಯುನಿವರ್ಸಿಟಿ ಲಾ ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದರು.
 • 40ರ ದಶಕದ ಆರಂಭದಲ್ಲಿ
  ವೀರಪ್ಪ ಮೊಯ್ಲಿ 5 ವರ್ಷದ ಚಿಕ್ಕ ಬಾಲಕನಿರುವಾಗ ತನ್ನ ತಾಯಿಯ ತೊಡೆಯ ಮೇಲೆ ಕುಳಿತು ಊಟ ಮಾಡುತ್ತಿದ್ದರು. ಆಗ ಮನೆಯ ಮಾಲೀಕ ಬಂದು ಇವರ ಕುಟುಂಬವನ್ನು ದಿಢೀರನೆ ಮನೆಯಿಂದ ಹೊರಹಾಕಿದ ಘಟನೆ ಇವರ ಮನಸ್ಸಿನಲ್ಲಿ ಅಚ್ಚಳಿಯದೆ ದಾಖಲಾಯಿತು. ಈ ಘಟನೆಯಿಂದ ಅವರು ಜೀವನದಲ್ಲಿ ನ್ಯಾಯಕ್ಕಾಗಿ ಹೋರಾಡುವ ನಿರ್ಧಾರಕ್ಕೆ ಬರುವಂತಾಯಿತು.

ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಕುಡಿಯುವ ನೀರಿನ ಯೋಜನೆ, ಉದ್ಯೋಗ ಖಾತ್ರಿ ಯೋಜನೆ ಹಾಗೂ ವಸತಿ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರು.
ಬೃಹತ್ ನೀರಾವರಿ ಯೋಜನೆಗಳನ್ನು ಆರಂಭಿಸಿ ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸಿದರು. 1992-93, 1993-94, 1994-95, 1980-81, 1981-82, 1982-83 ನೇ ಸಾಲಿನಲ್ಲಿ ರಾಜ್ಯದ ಬಜೆಟ್‌ಗಳನ್ನು ಮಂಡಿಸಿದ ಕೀರ್ತಿ ಇವರಾಗಿದೆ. ಹಣಕಾಸು ಸಚಿವರಾಗಿದ್ದ ಪ್ರತಿ ಅವಧಿಯಲ್ಲಿಯೂ ಉಳಿತಾಯ ಬಜೆಟ್ ನೀಡಿದ್ದು ಇವರ ಸಾಧನೆಯಾಗಿದೆ.
ಕಂದಾಯ ಸುಧಾರಣಾ ಆಯೋಗದ ಚೇರಮನ್‌ರಾಗಿದ್ದರು.
2000ನೇ ಇಸ್ವಿಯಲ್ಲಿ ಅಮೀನ ಸದ್ಭಾವನಾ ಪ್ರಶಸ್ತಿಗೆ ಪಾತ್ರರಾದರು.
2001 ರಲ್ಲಿ ದೇವರಾಜ ಅರಸ್ ಪ್ರಶಸ್ತಿ, ಆರ್ಯುಭಟ ಪ್ರಶಸ್ತಿ, 2002ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, 2007ರಲ್ಲಿ ಮೂರ್ತಿದೇವಿ ಪ್ರಶಸ್ತಿ, 2014 ರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳನ್ನು ಮೊಯ್ಲಿ ಪಡೆದುಕೊಂಡಿದ್ದಾರೆ.
ಒಟ್ಟು ಆಸ್ತಿ9.79 CRORE
ಆಸ್ತಿ13.74 CRORE
ಸಾಲಸೋಲ3.94 CRORE

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.