India
  • search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಲಾಲು ಪ್ರಸಾದ ಯಾದವ್

ಲಾಲು ಪ್ರಸಾದ ಯಾದವ್

ಜೀವನ ಚರಿತ್ರೆ

ಲಾಲು ಪ್ರಸಾದ ಯಾದವ ಬಿಹಾರ ರಾಜ್ಯದವರಾಗಿದ್ದು, ಅತ್ಯಂತ ಕ್ರಿಯಾಶೀಲ ರಾಜಕಾರಣಿಯಾಗಿದ್ದಾರೆ. ಇವರು ರಾಷ್ಟ್ರೀಯ ಜನತಾ ದಳದ ಅಧ್ಯಕ್ಷರಾಗಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವಾಗಲೇ ವಿದ್ಯಾರ್ಥಿ ರಾಜಕಾರಣಕ್ಕೆ ಧುಮುಕಿದರು. 1977 ರಲ್ಲಿ ತಮ್ಮ 29ನೇ ವಯಸ್ಸಿನಲ್ಲಿ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ಇವರು ಅತಿ ಕಿರಿಯ ವಯಸ್ಸಿನ ಸಂಸದರಾಗಿದ್ದರು. 1990 ರಲ್ಲಿ ಬಿಹಾರದ ಮುಖ್ಯಮಂತ್ರಿಯಾದ ಇವರು, ಮೇವು ಹಗರಣದ ಆರೋಪದ ಹಿನ್ನೆಲೆಯಲ್ಲಿ 1997ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಪ್ರಥಮ ಮೇವು ಹಗರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿದ ಸಿಬಿಐ ಕೋರ್ಟ್ 2013ರಲ್ಲಿ ಲಾಲು ಪ್ರಸಾದ ಅವರಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 25 ಲಕ್ಷ ರೂ. ದಂಡ ವಿಧಿಸಿತು. ನಂತರ ಮೂರನೇ ಮೇವು ಹಗರಣದಲ್ಲಿ ಸಹ ಇವರನ್ನು ಅಪರಾಧಿ ಎಂದು ಕೋರ್ಟ ತೀರ್ಪು ನೀಡಿತು. ಎರಡನೇ ಮೇವು ಹಗರಣದಲ್ಲಿ ಮೂರೂವರೆ ವರ್ಷದ ಜೈಲು ಶಿಕ್ಷೆ ವಿಧಿಸಲಾಯಿತು. ಡುಮ್ಕಾ ಖಜಾನೆಯಿಂದ 3.13 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ನಾಲ್ಕನೇ ಮೇವು ಹಗರಣದಲ್ಲಿ ಸಹ ಇವರನ್ನು ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿತು. ಈ ಪ್ರಕರಣದಲ್ಲಿ ಲಾಲು ಪ್ರಸಾದ ಅವರಿಗೆ ಒಟ್ಟು 14 ವರ್ಷ ಜೈಲುವಾಸ ಹಾಗೂ 60 ಲಕ್ಷ ರೂ. ದಂಡ ವಿಧಿಸಲಾಯಿತು.

ವಯಕ್ತಿಕ ಜೀವನ

ಪೂರ್ಣ ಹೆಸರು ಲಾಲು ಪ್ರಸಾದ ಯಾದವ್
ಜನ್ಮ ದಿನಾಂಕ 11 Jun 1948 (ವಯಸ್ಸು 74)
ಹುಟ್ಟಿದ ಸ್ಥಳ ಫುಲ್ವಾರಿಯಾ, ಗೋಪಾಲಗಂಜ್ ಜಿಲ್ಲೆ
ಪಕ್ಷದ ಹೆಸರು Rashtriya Janata Dal
ವಿದ್ಯಾರ್ಹತೆ Graduate Professional
ಉದ್ಯೋಗ ಸಾಮಾಜಿಕ ಕಾರ್ಯಕರ್ತ, ವಕೀಲ
ತಂದೆಯ ಹೆಸರು ಶ್ರೀ ಕುಂದನ್ ರಾಯ್
ತಾಯಿಯ ಹೆಸರು ಮರಚ್ಛಿಯಾ ದೇವಿ
ಅವಲಂಬಿತರ ಹೆಸರು ರಾಬ್ರಿ ದೇವಿ
ಅವಲಂಬಿತರ ಉದ್ಯೋಗ ರಾಜಕಾರಣಿ
ಮಕ್ಕಳು 2 ಪುತ್ರ(ರು) 7 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ ನಂ.5, ದೇಶರತ್ನಾ ಮಾರ್ಗ, ಪಾಟ್ನಾ, ಬಿಹಾರ
ಪ್ರಸ್ತುತ ವಿಳಾಸ ನಂ.8, ಸಮಾನಪುರಾ, ಬಿಹಾರ ವೆಟರ್ನರಿ ಕಾಲೇಜ್, ಪಾಟ್ನಾ – 800 014
ಸಂಪರ್ಕ ಸಂಖ್ಯೆ 011 - 23357182
ಈ ಮೇಲ್ info@rjd.co.in
ವೆಬ್‌ಸೈಟ್ http://rjd.co.in/shri-lalu-prasad-yadav.html
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ಪಾಟ್ನಾ ವಿಶ್ವವಿದ್ಯಾಲಯದ ಬಿ.ಎನ್. ಕಾಲೇಜಿನಿಂದ ಎಲ್‌ಎಲ್‌ಬಿ ಡಿಗ್ರಿ ಹಾಗೂ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಲಾಲು ಪ್ರಸಾದ ಯಾದವ್ ಪಾಟ್ನಾದ ಬಿಹಾರ ವೆಟರ್ನರಿ ಕಾಲೇಜಿನಲ್ಲಿ ಕ್ಲರ್ಕ ಆಗಿ ವೃತ್ತಿ ಆರಂಭಿಸಿದರು. ಇವರ ಹಿರಿಯ ಸಹೋದರ ಇದೇ ಕಾಲೇಜಿನಲ್ಲಿ ಗುಮಾಸ್ತರಾಗಿದ್ದರು. ಲಾಲು ಪ್ರಸಾದ ಅವರಿಗೆ ಒಟ್ಟು 6 ಜನ ಸಹೋದರ, ಸಹೋದರಿಯರಿದ್ದಾರೆ. ಲಾಲು ಪ್ರಸಾದ ಹಾಗೂ ರಾಬ್ರಿ ದೇವಿ ದಂಪತಿಗೆ 9 ಜನ ಮಕ್ಕಳಿದ್ದಾರೆ. ಇದರಲ್ಲಿ ಇಬ್ಬರು ಪುತ್ರರು ಹಾಗೂ 7 ಜನ ಪುತ್ರಿಯರು. ಫುಟಬಾಲ್, ಕುಸ್ತಿ, ಕ್ರಿಕೆಟ್, ಬ್ಯಾಡ್ಮಿಂಟನ್, ಕಬಡ್ಡಿ ಹಾಗೂ ಇನ್ನಿತರ ಆಟಗಳಲ್ಲಿ ಲಾಲು ಆಸಕ್ತಿ ಹೊಂದಿದ್ದಾರೆ. 2001 ರಲ್ಲಿ ಇವರು ಬಿಹಾರ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದರು. ಛಾಪ್ರಾ ಹಾಗೂ ಪಾಟ್ನಾಗಳಲ್ಲಿರುವ ಸ್ಪೋರ್ಟ್ಸ ಕ್ಲಬ್‌ಗಳೊಂದಿಗೆ ಇವರು ನಿಕಟ ಒಡನಾಟ ಹೊಂದಿದ್ದಾರೆ. 1990ರ ಸೆಪ್ಟೆಂಬರ್ 23 ರಂದು ರಾಮರಥ ಯಾತ್ರೆ ಮೂಲಕ ಅಯೋಧ್ಯೆಗೆ ತೆರಳುತ್ತಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಸಮಸ್ತಿಪುರದಲ್ಲಿ ಬಂಧಿಸುವ ಮೂಲಕ ಲಾಲು ಪ್ರಸಾದ ಯಾದವ್ ಸೆಕ್ಯೂಲರ್ ಮುಖಂಡನಾಗಿ ಗುರುತಿಸಿಕೊಂಡರು.
ಲಾಲು ಪ್ರಸಾದ ವಿರುದ್ಧದ ಪ್ರಮುಖ ಕೇಸುಗಳು ಹೀಗಿವೆ:
1. 1998: ಆದಾಯಕ್ಕೆ ಮಿರಿದ ಆಸ್ತಿ ಸಂಪಾದನೆ ಪ್ರಕರಣ
2. 1996: ಮೇವು ಹಗರಣ- 2ನೇ ಪ್ರಕರಣದಲ್ಲಿ ದೇವಘರ ಖಜಾನೆಗೆ 89.27 ಲಕ್ಷ ರೂ. ವಂಚನೆ ಆರೋಪ. 2017ರಲ್ಲಿ ಅಪರಾಧಿ ಎಂದು ತೀರ್ಪು.
3. 1996: ಮೇವು ಹಗರಣ- 3ನೇ ಪ್ರಕರಣದಲ್ಲಿ ಚಾಯಬಾಸಾ ಖಜಾನೆಗೆ 35.62 ಕೋಟಿ ರೂ. ವಂಚನೆ ಆರೋಪ. 2018ರಲ್ಲಿ ಅಪರಾಧಿ ಎಂದು ತೀರ್ಪು.
4. 1996: ಮೇವು ಹಗರಣ- 4ನೇ ಪ್ರಕರಣದಲ್ಲಿ ಡುಮ್ಕಾ ಖಜಾನೆಗೆ 3.97 ಕೋಟಿ ರೂ. ವಂಚನೆ ಆರೋಪ. ೨೦೧೮ ರಲ್ಲಿ ಅಪರಾಧಿ ಎಂದು ತೀರ್ಪು.
5. 1996: ಮೇವು ಹಗರಣ- 5ನೇ ಪ್ರಕರಣದಲ್ಲಿ ದೋರಂಡಾ ಖಜಾನೆಗೆ 184 ಕೋಟಿ ರೂ. ವಂಚನೆ ಆರೋಪ. ಈ ಪ್ರಕರಣ ವಿಚಾರಣೆ ಹಂತದಲ್ಲಿದೆ.
6. 2005: ಭಾರತೀಯ ರೈಲ್ವೆ ಟೆಂಡರ್ ಹಗರಣ: ಲಾಲು ಪ್ರಸಾದ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ
7. 2017: ಡಿಲೈಟ್ ಪ್ರಾಪರ್ಟೀಸ್ 45 ಕೋಟಿ ರೂ. ಆದಾಯಕ್ಕೆ ಮಿರಿದ ಆಸ್ತಿ ಸಂಪಾದನೆ ಹಾಗೂ ತೆರಿಗೆ ವಂಚನೆ ಪ್ರಕರಣ. ಜಾರಿ ನಿರ್ದೇಶನಾಲಯದಿಂದ ಲಾಲು ಪ್ರಸಾದ ಕುಟುಂಬದ ವಿರುದ್ಧ ಪ್ರಕರಣ ದಾಖಲು.
8. 2017: ಎಬಿ ಎಕ್ಸಪೋರ್ಟ್ಸ್ ಆದಾಯಕ್ಕೆ ಮೀರಿದ ಆಸ್ತಿ ಸಂಪಾದನೆ ಹಾಗೂ ತೆರಿಗೆ ವಂಚನೆ ಪ್ರಕರಣ. ಲಾಲು ಪ್ರಸಾದ ಕುಟುಂಬದ ವಿರುದ್ಧ ಜಾರಿ ನಿರ್ದೇಶನಾಲಯದಿಂದ ಪ್ರಕರಣ ದಾಖಲು.
9. 2017: ಪಾಟ್ನಾ ಝೂ ಮಣ್ಣು ಹಗರಣ
ಒಟ್ಟು ಆಸ್ತಿ3.05 CRORE
ಆಸ್ತಿ3.21 CRORE
ಸಾಲಸೋಲ16.27 LAKHS

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಸಾಮಾಜಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X