• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಲಾಲ್ ಕೃಷ್ಣ ಅಡ್ವಾಣಿ

ಲಾಲ್ ಕೃಷ್ಣ ಅಡ್ವಾಣಿ

ಜೀವನ ಚರಿತ್ರೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಅತ್ಯಂತ ಹಿರಿಯ ಮುಖಂಡರಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅಗ್ರಗಣ್ಯರು. 1941ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್)ದ ಸ್ವಯಂ ಸೇವಕರಾಗಿ ತಮ್ಮ 14ನೇ ವರ್ಷದಲ್ಲಿ ಸೇರ್ಪಡೆಗೊಳ್ಳುವ ಮೂಲಕ ಸಾಮಾಜಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಕರಾಚಿ ವಿಭಾಗದಲ್ಲಿ ಪ್ರಚಾರಕರಾಗಿ, ವಿವಿಧ ಶಾಖೆಗಳ ಆರಂಭಕ್ಕೆ ಕಾರಣರಾದರು. ಭಾರತ -ಪಾಕ್ ಬೇರ್ಪಟ್ಟ ನಂತರ ರಾಜಸ್ಥಾನದ ಮತ್ಸ್ಯಾ- ಆಳ್ವರ್ ಪ್ರದೇಶಕ್ಕೆ ಪ್ರಚಾರಕ್ಕಾಗಿ ಕಳಿಸಲ್ಪಟ್ಟರು. ಅಲ್ಲಿ ಭಾರತ-ಪಾಕ್ ಬೇರ್ಪಟ್ಟ ಕಾರಣಕ್ಕೆ ಜನಾಂಗೀಯ ಅಥವಾ ಕೋಮ ಗಲಭೆ ಆರಂಭಗೊಂಡಿತು. ಆದಾಗ್ಯೂ ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಭರತ್ ಪುರ, ಕೋಟಾ, ಬುಂದಿ ಮತ್ತು ಜಾಲ್ವಾರ್ ಜಿಲ್ಲೆಗಳಲ್ಲಿ 1952ರವರೆಗೆ ನೆಲೆಸಿದ್ದರು.

ನಂತರದಲ್ಲಿ ಅಡ್ವಾಣಿ ಅವರು ಆರ್ ಎಸ್ ಎಸ್ ಮತ್ತು ಶ್ಯಾಮ್ ಪ್ರಸಾದ ಮುಖರ್ಜಿ ಅವರೊಂದಿಗೆ ಸೇರಿ 1951ರಲ್ಲಿ ಭಾರತೀಯ ಜನಸಂಘ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದರು. 1957ರಲ್ಲಿ ದೆಹಲಿಗೆ ತೆರಳಿ ಸಂಸದೀಯ ವ್ಯವಹಾರಗಳಲ್ಲಿ ಪಾಲ್ಗೊಳ್ಳತೊಡಗಿದರು. ನಂತರದಲ್ಲಿ ದೆಹಲಿಯ ಜನಸಂಘದ ಕಾರ್ಯದರ್ಶಿ ಮತ್ತು ಕೆಲವೇ ದಿನಗಳಲ್ಲಿ ಅಧ್ಯಕ್ಷರಾಗಿ ಪದೋನ್ನತಿ ಪಡೆದರು. 1967ರಲ್ಲಿ ದೆಹಲಿಯ ನಗರಸಭೆಗೆ ನಡೆದ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರ್.ಎಸ್.ಎಸ್.ನ ವಾರಪತ್ರಿಕೆಯ ನಿರ್ವಾಹಕರಾಗಿ, 1966ರಲ್ಲಿ ರಾಷ್ಟ್ರೀಯ ಆಡಳಿತ ಮಂಡಳಿಗೆ ನೇಮಕಗೊಂಡರು.

1970ರಿಂದ ದೆಹಲಿಯಿಂದ ರಾಜ್ಯಸಭೆಗೆ 6 ವರ್ಷ ಕಾಲ ನಾಮಕರಣಗೊಂಡರು. ಜನಸಂಘದ ವಿವಿಧ ಹುದ್ದೆಗಳನ್ನು ನಿರ್ವಹಿಸಿ 1973ರಲ್ಲಿ ಖಾನ್ ಪುರ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ನೇಮಕಗೊಂಡರು. 1976ರಿಂದ 1982 ರವರೆಗೆ ಗುಜರಾತ್ ನಿಂದ ರಾಜ್ಯಸಭಾ ಸದಸ್ಯರಾಗಿ ಮುಂದುವರೆದರು. ಇಂದಿರಾ ಗಾಂಧಿ ಅವರ ತುರ್ತುಪರಿಸ್ಥಿತಿ ಸಂದರ್ಭದ ನಂತರದಲ್ಲಿ ಜನಸಂಘ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಜನತಾ ಪಾರ್ಟಿಯಲ್ಲಿ ವಿಲೀನಗೊಂಡವು. ಅಡ್ವಾಣಿ ಮತ್ತು ಅವರ ಜತೆಗಾರ ಅಟಲ್ ಬಿಹಾರಿ ವಾಜಪೇಯಿ ಅವರು ಲೋಕಸಭೆಗೆ ಜನತಾ ಪಕ್ಷದಿಂದ 1977ರಲ್ಲಿ ಸ್ಪರ್ಧಿಸಿದರು. ನಂತರದಲ್ಲಿ ಅಡ್ವಾಣಿ ಅತಿ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು ಮತ್ತು ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪಕರಲ್ಲಿ ಒಬ್ಬರಾದರು. ನಂತರ 1982ರಿಂದ ಮಧ್ಯಪ್ರದೇಶದಿಂದ ಬಿಜೆಪಿ ಪಕ್ಷದಿಂದ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಪುನರಾಯ್ಕೆಯಾದರು.

ವಯಕ್ತಿಕ ಜೀವನ

ಪೂರ್ಣ ಹೆಸರು ಲಾಲ್ ಕೃಷ್ಣ ಅಡ್ವಾಣಿ
ಜನ್ಮ ದಿನಾಂಕ 08 Nov 1927 (ವಯಸ್ಸು 93)
ಹುಟ್ಟಿದ ಸ್ಥಳ ಕರಾಚಿ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ಪತ್ರಕರ್ತರು, ರಾಜಕಾರಣಿ
ತಂದೆಯ ಹೆಸರು ಕೆ.ಡಿ. ಅಡ್ವಾಣಿ
ತಾಯಿಯ ಹೆಸರು ಗ್ಯಾನಿ ದೇವಿ
ಅವಲಂಬಿತರ ಹೆಸರು ಕಮಲಾ ಅಡ್ವಾಣಿ
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ 1835/16, ಕಸ್ತೂರಬಾಯಿ ಬ್ಲಾಕ್, ದೀನ್ ದಯಾಳ್ ಭವನ್, ಜೆ.ಪಿ. ಚೌಕ್, ಖಾನ್ ಪುರ, ಅಹಮದಾಬಾದ್-380 001, ಗುಜರಾತ್
ಪ್ರಸ್ತುತ ವಿಳಾಸ 30, ಪೃಥ್ವಿರಾಜ ರೋಡ ನವದೆಹಲಿ- 110 011
ಸಂಪರ್ಕ ಸಂಖ್ಯೆ 079-25504525
ಈ ಮೇಲ್ lk.advani@sansad.nic.in
ವೆಬ್‌ಸೈಟ್ http://lkadvani.in/

ಆಸಕ್ತಿಕರ ಅಂಶಗಳು

ರಾಮ ಜನ್ಮ ಭೂಮಿ ಅಭಿಯಾನದ ನಿರ್ಮಾತೃಗಳಾಗಿ, ಅದರ ಶಿಲ್ಪಿಯಾಗಿ ಖ್ಯಾತಿ ಗಳಿಸಿದರು. ರಥ ಯಾತ್ರೆ ಆಯೋಜನೆ ಮೂಲಕ ದೇಶಾದ್ಯಂತ ಜನಪ್ರೀಯತೆ ಗಳಿಸಿದರು. ಕರಸೇವಕರು, ಸ್ವಯಂಸೇವಕರ ಮೂಲಕ ರಥಯಾತ್ರೆ 2ವರ್ಷ ಕಾಲ ನಡೆಸಿದರು. ಅಲ್ಲದೇ ಬಾಬ್ರಿ ಮಸೀದಿಯಲ್ಲಿ ರಾಮ ಭಕ್ತರಿಗೆ ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಕರೆ ನೀಡಿ ಆ ನಿಟ್ಟಿನಲ್ಲಿ ಹೋರಾಟ ಸಂಘಟಿಸಿದರು.
ಒಟ್ಟು ಆಸ್ತಿ7.59 CRORE
ಆಸ್ತಿ7.59 CRORE
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಸಾಮಾಜಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X