ಮುಖ್ಯಪುಟ
 » 
ಕೃಷ್ಣ ಬೈರೇಗೌಡ

ಕೃಷ್ಣ ಬೈರೇಗೌಡ

ಕೃಷ್ಣ ಬೈರೇಗೌಡ

ಕರ್ನಾಟಕ ಕಾಂಗ್ರೆಸ್‌ನ ಯುವ ನಾಯಕರಲ್ಲಿ ಒಬ್ಬರು ಕೃಷ್ಣ ಬೈರೇಗೌಡ. ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಇವರು ಮಾಜಿ ಸಚಿವ ದಿ.

ಕೃಷ್ಣ ಬೈರೇಗೌಡ ಜೀವನ ಚರಿತ್ರೆ

ಕರ್ನಾಟಕ ಕಾಂಗ್ರೆಸ್‌ನ ಯುವ ನಾಯಕರಲ್ಲಿ ಒಬ್ಬರು ಕೃಷ್ಣ ಬೈರೇಗೌಡ. ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಇವರು ಮಾಜಿ ಸಚಿವ ದಿ. ಸಿ. ಬೈರೇಗೌಡರ ಪುತ್ರ.

ಒಕ್ಕಲಿಗ ಸಮುದಾಯದ ನಾಯಕ ಕೃಷ್ಣ ಬೈರೇಗೌಡ ಅಮೆರಿಕದಲ್ಲಿ ವ್ಯಾಸಂಗ ಮಾಡಿದವರು. 2003ರಲ್ಲಿ ತಂದೆ ನಿಧನದ ಬಳಿಕ ಕೋಲಾರ ಜಿಲ್ಲೆಯ ವೇಮಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದರು. 2004ರಲ್ಲಿ ಇದೇ ಕ್ಷೇತ್ರದಿಂದ ಪುನರಾಯ್ಕೆಗೊಂಡರು.

2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಗೊಂಡಿತು. ವೇಮಗಲ್ ಕ್ಷೇತ್ರವೇ ಅಸ್ತಿತ್ವ ಕಳೆದುಕೊಂಡಿತು. 2008ರ ವಿಧಾನಸಭೆ ಚುನಾವಣೆಗೆ ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರವನ್ನು ಕೃಷ್ಣ ಬೈರೇಗೌಡ ಆಯ್ಕೆ ಮಾಡಿಕೊಂಡರು.

2008, 2013 ಮತ್ತು 2018ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಕೃಷ್ಣ ಬೈರೇಗೌಡ ಆಯ್ಕೆಯಾದರು. 2013ರ ಚುನಾವಣೆ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಕೃಷ್ಣ ಬೈರೇಗೌಡ ಕೃಷಿ ಖಾತೆ ಸಚಿವರಾದರು.

2018ರ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ, ಮಾನವ ಸಂಪನ್ಮೂಲ ಇಲಾಖೆ ಸಚಿವರಾದರು.

ಕೃಷ್ಣ ಬೈರೇಗೌಡ 2009ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿಯ ಅನಂತ ಕುಮಾರ್ ವಿರುದ್ಧ 400341 ಮತಗಳನ್ನು ಪಡೆದು ಸೋಲು ಕಂಡರು.

ಎಐಸಿಸಿಯ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಪರಮಾಪ್ತರಲ್ಲಿ ಕೃಷ್ಣ ಬೈರೇಗೌಡ ಸಹ ಒಬ್ಬರು. ಕೃಷಿ, ರೈತರ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿಧಾನಸಭೆಯಲ್ಲಿ ಉತ್ತಮವಾಗಿ ವಿಚಾರ ಮಂಡಿಸುತ್ತಾರೆ. ಕರ್ನಾಟಕ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಮತ್ತಷ್ಟು ಓದು
By Moumi Majumdar Updated: Thursday, August 25, 2022, 04:42:44 PM [IST]

ಕೃಷ್ಣ ಬೈರೇಗೌಡ ವಯಕ್ತಿಕ ಜೀವನ

ಪೂರ್ಣ ಹೆಸರು ಕೃಷ್ಣ ಬೈರೇಗೌಡ
ಜನ್ಮ ದಿನಾಂಕ 04 Apr 1973 (ವಯಸ್ಸು 51)
ಹುಟ್ಟಿದ ಸ್ಥಳ ಬೆಂಗಳೂರು
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Post Graduate
ಉದ್ಯೋಗ ಕೃಷಿಕ
ತಂದೆಯ ಹೆಸರು ಸಿ. ಬೈರೇಗೌಡ
ತಾಯಿಯ ಹೆಸರು ಸಾವಿತ್ರಮ್ಮ
ಧರ್ಮ ಹಿಂದು
ಜಾತಿ ಒಕ್ಕಲಿಗ
ವೆಬ್‌ಸೈಟ್ http://krishnabyregowda.in/
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಕೃಷ್ಣ ಬೈರೇಗೌಡ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹15.75 CRORE
ಆಸ್ತಿ:₹16.71 CRORE
ಸಾಲಸೋಲ: ₹95.22 LAKHS

ಕೃಷ್ಣ ಬೈರೇಗೌಡ ಕುರಿತು ಆಸಕ್ತಿದಾಯಕ ಸಂಗತಿಗಳು

ಅಮೆರಿಕದಲ್ಲಿ ವ್ಯಾಸಂಗ ಮಾಡಿ ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯರಾಗಿರುವ ನಾಯಕರು

ಅಮೆರಿಕದಲ್ಲಿರುವ ಇಥಿಯೋಪಿಯಾ ರಾಜತಾಂತ್ರಿಕ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆಪ್ತರಾದ ನಾಯಕರಲ್ಲಿ ಒಬ್ಬರು

ಕೃಷ್ಣ ಬೈರೇಗೌಡ ರಾಜಕೀಯ ಟೈಮ್‌ಲೈನ್

2018
  • ಬ್ಯಾಟರಾಯನಪುರ ಕ್ಷೇತ್ರದಿಂದ ಗೆಲುವು. ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟ ಸೇರ್ಪಡೆ
2013
  • ಬ್ಯಾಟರಾಯನಪುರ ಕ್ಷೇತ್ರದಿಂದ ಮತ್ತೆ ಗೆಲುವು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಖಾತೆ ನಿರ್ವಹಣೆ
2009
  • ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ. ಬಿಜೆಪಿಯ ಅನಂತ ಕುಮಾರ್ ವಿರುದ್ಧ ಸೋಲು
2008
  • ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ, ಗೆಲುವು
2007
  • ಕರ್ನಾಟಕ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ
2004
  • ವೇಮಗಲ್ ಕ್ಷೇತ್ರದಿಂದ ಶಾಸಕರಾಗಿ ಪುನರಾಯ್ಕೆಗೊಂಡರು.
2003
  • ಕೋಲಾರದ ವೇಮಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶ

ಹಿಂದಿನ ಇತಿಹಾಸ

2000
  • ಬೆಂಗಳೂರು ಹೊರವಲಯದಲ್ಲಿ ಜಮೀನು ಖರೀದಿ ಮಾಡಿ ಕೃಷಿ ಕೆಲಸ ಆರಂಭಿಸಿದರು.
1998
  • ವಾಷಿಗ್ಟಂನ್‌ನಲ್ಲಿರುವ ಇಥಿಯೋಪಿಯಾ ರಾಜತಾಂತ್ರಿಕ ಕಚೇರಿಯಲ್ಲಿ ಪ್ರೊಜೆಕ್ಟ್‌ ಅಸೋಸಿಯೇಟ್ ಆಗಿ ಒಂದು ವರ್ಷ ಕೆಲಸ ಮಾಡಿದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X