ಕಲಾಚಂದ್ರ ಜೋಸೆಫ್ ಜಾರ್ಜ್

ಕಲಾಚಂದ್ರ ಜೋಸೆಫ್ ಜಾರ್ಜ್
ಕಲಾಚಂದ್ರ ಜೋಸೆಫ್ ಜಾರ್ಜ್ ಇವರು ಕರ್ನಾಟಕ ರಾಜಕೀಯದಲ್ಲಿ ಕೆ. ಜೆ.
By Rashmi | Monday, April 29, 2019, 06:14:14 PM [IST]

ಕಲಾಚಂದ್ರ ಜೋಸೆಫ್ ಜಾರ್ಜ್ ಜೀವನ ಚರಿತ್ರೆ

ಕಲಾಚಂದ್ರ ಜೋಸೆಫ್ ಜಾರ್ಜ್ ಇವರು ಕರ್ನಾಟಕ ರಾಜಕೀಯದಲ್ಲಿ ಕೆ.ಜೆ. ಜಾರ್ಜ್ ಎಂದು ಹೆಸರುವಾಸಿಯಾಗಿದ್ದಾರೆ. ಇವರ ಕುಟುಂಬ ಮೂಲತಃ ಕೇರಳ ರಾಜ್ಯದವರಾಗಿದ್ದು, 1960 ರ ಸುಮಾರಿಗೆ ಇವರ ಪರಿವಾರವು ಕರ್ನಾಟಕದ ಕೊಡಗು ಜಿಲ್ಲೆ ಗೋಣಿಕೊಪ್ಪಲಿಗೆ ವಲಸೆ ಬಂದಿತು. ಕೃಷಿಕ ಕುಟುಂಬದಲ್ಲಿ ಮೂರನೇ ಮಗನಾಗಿ ಜನಿಸಿದ ಜಾರ್ಜ್ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಜಾರ್ಜ್ ಪ್ರಸ್ತುತ ಎಚ್.ಡಿ. ಕುಮಾರಸ್ವಾಮಿ ಸರಕಾರದಲ್ಲಿ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆಯ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. 1969 ರಲ್ಲಿ ಗೋಣಿಕೊಪ್ಪಲು ಟೌನ್ ಯುವ ಕಾಂಗ್ರೆಸ್ ಅಧ್ಯಕ್ಷರಾಗುವ ಮೂಲಕ ಇವರು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು.

ಮತ್ತಷ್ಟು ಓದು

ಕಲಾಚಂದ್ರ ಜೋಸೆಫ್ ಜಾರ್ಜ್ ವಯಕ್ತಿಕ ಜೀವನ

ಪೂರ್ಣ ಹೆಸರು ಕಲಾಚಂದ್ರ ಜೋಸೆಫ್ ಜಾರ್ಜ್
ಜನ್ಮ ದಿನಾಂಕ 24 Aug 1946 (ವಯಸ್ಸು 79)
ಹುಟ್ಟಿದ ಸ್ಥಳ ಕೇರಳ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ 12th Pass
ಉದ್ಯೋಗ ವ್ಯಾಪಾರ
ತಂದೆಯ ಹೆಸರು ಕಲಾಚಂದ್ರ ಚಾಕೋ ಜೋಸೆಫ್
ತಾಯಿಯ ಹೆಸರು ಮರಿಯಮ್ಮಾ ಜೋಸೆಫ್
ಅವಲಂಬಿತರ ಹೆಸರು ಸುಜಾ ಜಾರ್ಜ್
ಅವಲಂಬಿತರ ಉದ್ಯೋಗ ವ್ಯಾಪಾರ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಕ್ರಿಶ್ಚಿಯನ್

ಕಲಾಚಂದ್ರ ಜೋಸೆಫ್ ಜಾರ್ಜ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹32.28 CRORE
ಆಸ್ತಿ
₹80.38 CRORE
ಸಾಲಸೋಲ
₹48.1 CRORE

ಕಲಾಚಂದ್ರ ಜೋಸೆಫ್ ಜಾರ್ಜ್ ಕುರಿತು ಆಸಕ್ತಿದಾಯಕ ಸಂಗತಿಗಳು

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕೆ.ಜೆ. ಜಾರ್ಜ್ 1960 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದಾಗ ಪಕ್ಷಕ್ಕೆ ಹಣಕಾಸು ಸಹಾಯ ಮಾಡುತ್ತಿದ್ದರು.
ಗಾಲ್ಫ್ ಇವರ ಇಷ್ಟದ ಕ್ರೀಡೆಯಾಗಿದೆ.
2018ರ ಏಪ್ರಿಲ್‌ನಲ್ಲಿ ಕಾರ್ಪೊರೇಟ್ ವ್ಯವಹಾರಗಳ ಖಾತೆಯು ನೀಡಿದ ಮಾಹಿತಿಯ ಪ್ರಕಾರ ಜಾರ್ಜ್ ಈ ಮುಂದೆ ತೋರಿಸಲಾದ ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ:
- ಗಾಲ್ಫ್‌ ಲಿಂಕ್ - ಎಂಬೆಸಿ ಬ್ಯುಸಿನೆಸ್ ಪಾರ್ಕ ಮ್ಯಾನೇಜಮೆಂಟ್ ಸರ್ವಿಸಸ್ ಎಲ್‌ಎಲ್‌ಪಿ
- ಕಲಾಚಂದ್ರ ಹೋಲ್ಡಿಂಗ್ಸ್ ಎಲ್‌ಎಲ್‌ಪಿ
- ಕುಟ್ಟನಾಡ ರಬ್ಬರ್ ಕೊ ಲಿಮಿಟೆಡ್
- ಗಾಲ್ಫ್ ಲಿಂಕ್ಸ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್
- ಜಿ.ವಿ. ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್
- ಗಾಲ್ಫ್ ಲಿಂಕ್ಸ ಸಾಫ್ಟವೇರ್ ಪಾರ್ಕ ಪ್ರೈವೇಟ್ ಲಿಮಿಟೆಡ್
- ವೈಲ್ಡಫ್ಲವರ್ ಎಸ್ಟೇಟ್ ಆಂಡ್ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್
- ಎಂಎಒಜೆ ಇನ್ವೆಸ್ಟಮೆಂಟ್ಸ್ ಪ್ರೈವೇಟ್ ಲಿಮಿಟೆಡ್
- ಬುಕ್ ಆಂಡ್ ಮಾರ್ಕ್ಸ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್
- ಗಾಲ್ಫ್ ಲಿಂಕ್ - ಎಂಬೆಸಿ ಬ್ಯುಸಿನೆಸ್ ಪಾರ್ಕ ಮ್ಯಾನೇಜಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್
- ಡಿ.ಎಂ. ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್

ಕಲಾಚಂದ್ರ ಜೋಸೆಫ್ ಜಾರ್ಜ್ ಸಾಧನೆಗಳು

ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮೀಟಿಯಿಂದ ಬೆಂಗಳೂರಿನ ಅತ್ಯುತ್ತಮ ಜನಪ್ರತಿನಿಧಿ ಎಂದು ಗುರುತಿಸಲ್ಪಟ್ಟಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+