Get Updates
Get notified of breaking news, exclusive insights, and must-see stories!

ಕನಿಮೋಳಿ

ಕನಿಮೋಳಿ
ಮೂಲತಃ ಪತ್ರಕರ್ತೆ ಹಾಗೂ ಬರಹಗಾರ್ತಿಯಾದ ಕನಿಮೋಳಿ 2007 ರಲ್ಲಿ ಡಿಎಂಕೆ ಪಕ್ಷದಿಂದ ರಾಜ್ಯಸಭಾ ಸಂಸದರಾಗುವ ಮೂಲಕ ರಾಜಕೀಯಕ್ಕೆ ಬಂದರು. ಡಿಎಂಕೆ ಪಕ್ಷದ ಕಲಾ ವಿಭಾಗ, ಸಾಹಿತ್ಯ ವಿಭಾಗ ಹಾಗೂ ವಿಚಾರವಾದ ವಿಭಾಗಗಳಲ್ಲಿ ಪ್ರಮುಖ ಪಾತ್ರ ವಹಿಸಿ, ಮಹಿಳಾ ಹಕ್ಕುಗಳ ಪರ ಹೋರಾಟಗಾರ್ತಿಯಾಗಿ ಹಾಗೂ ನಾಗರಿಕರ ವಾಕ್ ಸ್ವಾತಂತ್ರ್ಯ ಪರ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡರು.
By Rashmi | Monday, April 29, 2019, 06:14:14 PM [IST]

ಕನಿಮೋಳಿ ಜೀವನ ಚರಿತ್ರೆ

ಮೂಲತಃ ಪತ್ರಕರ್ತೆ ಹಾಗೂ ಬರಹಗಾರ್ತಿಯಾದ ಕನಿಮೋಳಿ 2007 ರಲ್ಲಿ ಡಿಎಂಕೆ ಪಕ್ಷದಿಂದ ರಾಜ್ಯಸಭಾ ಸಂಸದರಾಗುವ ಮೂಲಕ ರಾಜಕೀಯಕ್ಕೆ ಬಂದರು. ಡಿಎಂಕೆ ಪಕ್ಷದ ಕಲಾ ವಿಭಾಗ, ಸಾಹಿತ್ಯ ವಿಭಾಗ ಹಾಗೂ ವಿಚಾರವಾದ ವಿಭಾಗಗಳಲ್ಲಿ ಪ್ರಮುಖ ಪಾತ್ರ ವಹಿಸಿ, ಮಹಿಳಾ ಹಕ್ಕುಗಳ ಪರ ಹೋರಾಟಗಾರ್ತಿಯಾಗಿ ಹಾಗೂ ನಾಗರಿಕರ ವಾಕ್ ಸ್ವಾತಂತ್ರ್ಯ ಪರ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡರು. ದಿ ಹಿಂದು ನ್ಯಾಷನಲ್ ಪ್ರೆಸ್ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷೆಯಾಗಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಪುತ್ರಿ, ಮಾಜಿ ಕೇಂದ್ರ ಮಂತ್ರಿ ಎಂ.ಕೆ. ಅಳಗಿರಿ ಅವರ ಸಹೋದರಿ ಹಾಗೂ ತಮಿಳುನಾಡಿನ ಮಾಜಿ ಉಪ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಹೋದರಿಯಾದ ಕನಿಮೋಳಿ ರಾಜಕೀಯದಲ್ಲಿ ಮಾತ್ರ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದರು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಂದ ಅತ್ಯುತ್ತಮ ಮಹಿಳಾ ಸಂಸದೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮತ್ತಷ್ಟು ಓದು

ಕನಿಮೋಳಿ ವಯಕ್ತಿಕ ಜೀವನ

ಪೂರ್ಣ ಹೆಸರು ಕನಿಮೋಳಿ
ಜನ್ಮ ದಿನಾಂಕ 05 Jan 1968 (ವಯಸ್ಸು 58)
ಹುಟ್ಟಿದ ಸ್ಥಳ ಚೆನ್ನೈ, ತಮಿಳು ನಾಡು
ಪಕ್ಷದ ಹೆಸರು Dravida Munetra Kazhagam
ವಿದ್ಯಾರ್ಹತೆ NULL
ಉದ್ಯೋಗ ರಾಜಕಾರಣಿ, ಕವಯತ್ರಿ, ಪತ್ರಕರ್ತೆ
ತಂದೆಯ ಹೆಸರು ಶ್ರೀ ಕರುಣಾನಿಧಿ
ತಾಯಿಯ ಹೆಸರು ಶ್ರೀಮತಿ ರಜತಿ ಕರುಣಾನಿಧಿ
ಅವಲಂಬಿತರ ಹೆಸರು ಶ್ರೀ ಜಿ. ಅರವಿಂದನ್
ಅವಲಂಬಿತರ ಉದ್ಯೋಗ ವಿದೇಶ ವ್ಯವಹಾರಗಳ ವಿಷಯ ಸಲಹಾಗಾರ್ತಿ
ಮಕ್ಕಳು 1 ಪುತ್ರ(ರು)

ಕನಿಮೋಳಿ ಒಟ್ಟು ಆಸ್ತಿ

ಒಟ್ಟು ಆಸ್ತಿ
N/A
ಆಸ್ತಿ
N/A
ಸಾಲಸೋಲ
N/A

ಕನಿಮೋಳಿ ಕುರಿತು ಆಸಕ್ತಿದಾಯಕ ಸಂಗತಿಗಳು

2018 ರಲ್ಲಿ ಹಿರಿಯ ರಾಜಕಾರಣಿ ಮುರಳಿ ಮನೋಹರ ಜೋಶಿ ಹಾಗೂ ಇನ್ನಿತರ ಮುಖಂಡರ ನೇತೃತ್ವದ ಸಮಿತಿಯು ಕನಿಮೋಳಿ ಅವರನ್ನು ಅತ್ಯುತ್ತಮ ಮಹಿಳಾ ಸಂಸದೆಯನ್ನಾಗಿ ಆಯ್ಕೆ ಮಾಡಿತು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಕನಿಮೋಳಿ ಸಾಧನೆಗಳು

ತಮಿಳುನಾಡಿನ ವಿರುಧುನಗರ ಜಿಲ್ಲೆ ಕರಿಯಾಪಟ್ಟಿಯಲ್ಲಿ 2008 ರಲ್ಲಿ ಪ್ರಥಮ ಬಾರಿ ಪ್ರಾಯೋಗಿಕವಾಗಿ ಉದ್ಯೋಗ ಮೇಳ ಆಯೋಜಿಸಿದರು. ಇದರ ಯಶಸ್ಸಿನ ನಂತರ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು ಸಂಘಟಿಸಿದರು. 2010ರ ವೇಳೆಗೆ ನಾಗರಕೋಯಿಲ್, ವೆಲ್ಲೋರ್, ಉಧಗಮಂಡಲಂ, ತಿರುಚಿರಾಪಳ್ಳಿ ಮತ್ತು ವಿರುಧುನಗರ ಜಿಲ್ಲೆಗಳಲ್ಲಿನ ಸುಮಾರು 1 ಲಕ್ಷ ಗ್ರಾಮೀಣ ನಿರುದ್ಯೋಗಿ ಯುವ ಜನತೆಗೆ ಈ ಉದ್ಯೋಗ ಮೇಳಗಳ ಮೂಲಕ ಕೆಲಸ ದೊರಕಿಸಿಕೊಟ್ಟರು. ಇಡೀ ತಮಿಳುನಾಡು ರಾಜ್ಯದಲ್ಲಿ ಮತ್ತಷ್ಟು ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+