• search
 • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಕನ್ಹೈಯ್ಯಾ ಕುಮಾರ

ಕನ್ಹೈಯ್ಯಾ ಕುಮಾರ

ಜೀವನ ಚರಿತ್ರೆ

ಕನ್ಹೈಯ್ಯಾ ಕುಮಾರ ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷರಾಗಿದ್ದರು. ಇವರು ತಮ್ಮ ಯಾವುದೇ ಸಾಧನೆಯಿಂದ ಖ್ಯಾತಿ ಗಳಿಸಲಿಲ್ಲ. ಬದಲಾಗಿ ಗುಂಪೊಂದರಲ್ಲಿ ಸೇರಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ್ದರಿಂದ ರಾಷ್ಟ್ರೀಯ ಖ್ಯಾತಿ ಪಡೆದಿದ್ದು ವಿಚಿತ್ರ. ಸಂಸತ್ ಭವನದ ಮೇಲೆ ದಾಳಿ ನಡೆಸಿದ ಅಪರಾಧಕ್ಕಾಗಿ ಮರಣದಂಡನೆಗೆ ಗುರಿಯಾದ ಅಫ್ಜಲ್ ಗುರು ಅವರಿಗೆ ಮರಣ ದಂಡನೆ ನೀಡುವುದನ್ನು ವಿರೋಧಿಸಿದ್ದರು. ಈ ಕುರಿತು ಬಿಜೆಪಿಯ ಮಹೇಶ ಗಿರಿ ಹಾಗೂ ಎಬಿವಿಪಿ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ 2016 ರಲ್ಲಿ ಇವರ ವಿರುದ್ಧ ರಾಷ್ಟ್ರದ್ರೋಹದ ಕೇಸ್ ದಾಖಲಾಯಿತು. ಆದರೆ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ಇವರು ತಳ್ಳಿ ಹಾಕಿದರು. ಸಿಪಿಐ ಪಕ್ಷದ ಕಟ್ಟಾ ಬೆಂಬಲಿಗರಾಗಿರುವ ಕನ್ಹೈಯ್ಯಾ ಕುಮಾರ ಬಿಹಾರದ ಬೇಗುಸರಾಯ್ನಲ್ಲಿ ಹುಟ್ಟಿದರು. ಪದವಿ ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿ ರಾಜಕಾರಣಕ್ಕೆ ಬಂದು ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡರು. ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ ಸೇರಿದರು. ಪಾಟ್ನಾದ ನಳಂದಾ ವಿಶ್ವವಿದ್ಯಾಲಯದಲ್ಲಿ ಎಂಎ ಶಿಕ್ಷಣದ ನಂತರ ಆಫ್ರಿಕನ್ ಸ್ಟಡೀಸ್ಗಾಗಿ 2011 ರಲ್ಲಿ ಜವಾಹರಲಾಲ ನೆಹರು ವಿಶ್ವವಿದ್ಯಾಲಯ ಸೇರಿಕೊಂಡರು. ಜೆಎನ್ಯು ಪ್ರವೇಶ ಪರೀಕ್ಷೆಯಲ್ಲಿ ಇವರು ಪ್ರಥಮ ರ್ಯಾಂಕ್ ಪಡೆದಿದ್ದರು. 2018 ರಲ್ಲಿ ಸಿಪಿಐ ಸೇರಿದ ಇವರು ಈಗ 2019 ರಲ್ಲಿ ಸಿಪಿಐ ಟಿಕೆಟ್ ಮೇಲೆ ಬೇಗುಸರಾಯ್ ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ವಯಕ್ತಿಕ ಜೀವನ

ಪೂರ್ಣ ಹೆಸರು ಕನ್ಹೈಯ್ಯಾ ಕುಮಾರ
ಜನ್ಮ ದಿನಾಂಕ 13 Jan 1987 (ವಯಸ್ಸು 35)
ಹುಟ್ಟಿದ ಸ್ಥಳ ಬೇಗುಸರಾಯ್, ಬಿಹಾರ
ಪಕ್ಷದ ಹೆಸರು Communist Party Of India
ವಿದ್ಯಾರ್ಹತೆ
ಉದ್ಯೋಗ ಸಾಮಾಜಿಕ ಕಾರ್ಯಕರ್ತ ಹಾಗೂ ರಾಜಕಾರಣಿ
ತಂದೆಯ ಹೆಸರು ಜೈಶಂಕರ ಸಿಂಗ್
ತಾಯಿಯ ಹೆಸರು ಮೀನಾ ದೇವಿ

ವಿಳಾಸ

ಖಾಯಂ ವಿಳಾಸ ಖರೈಯಾ ಗ್ರಾಮ, ಅರಾರಿಯಾ ಜಿಲ್ಲೆ
ಪ್ರಸ್ತುತ ವಿಳಾಸ ಖರೈಯಾ ಗ್ರಾಮ, ಅರಾರಿಯಾ ಜಿಲ್ಲೆ
ಸಂಪರ್ಕ ಸಂಖ್ಯೆ NA
ಈ ಮೇಲ್ NA

ಆಸಕ್ತಿಕರ ಅಂಶಗಳು

ಕನ್ಹೈಯ್ಯಾ ಕುಮಾರ ಎಐಎಸ್ಎಫ್ ನಿಂದ ಆಯ್ಕೆಯಾದ ಜೆಎನ್ಯುದ ವಿದ್ಯಾರ್ಥಿ ಯೂನಿಯನ್ ನ ಪ್ರಥಮ ಅಧ್ಯಕ್ಷರಾಗಿದ್ದಾರೆ. ಈ ಮುಂಚೆ ಜೆಎನ್ಯುದಲ್ಲಿ ಹಿಡಿತ ಸಾಧಿಸಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಇವರೆಲ್ಲರನ್ನೂ ಹಿಮ್ಮೆಟ್ಟಿಸಿ ಎಐಎಸ್ಎಫ್ ನಿಂದ ಆಯ್ಕೆಯಾದರು.

ರಾಜಕೀಯ ಕಾಲಾನುಕ್ರಮ

 • 2019
  ಬೇಗುಸರಾಯನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.
 • 2018
  ಸಿಪಿಐ ಸದಸ್ಯರಾಗಿ ಆಯ್ಕೆಯಾದರು.
 • 2015
  ಜೆಎನ್ಯು ಸ್ಟೂಡೆಂಟ್ಸ್ ಯೂನಿಯನ್ನ ಪ್ರಥಮ ಎಐಎಸ್ಎಫ್ ಅಧ್ಯಕ್ಷರಾದರು.
 • 2008
  ಎಐಎಸ್ಎಫ್ ಸೇರಿದರು.

’ಬಿಹಾರ ಟು ತಿಹಾರ; ಮೈ ಪೊಲಿಟಿಕಲ್ ಜರ್ನಿ’ ಎಂಬ ಆತ್ಮಕಥನವನ್ನು ಅಕ್ಟೋಬರ್ 2016 ರಲ್ಲಿ ಪ್ರಕಟಿಸಿದ್ದಾರೆ.
ಒಟ್ಟು ಆಸ್ತಿN/A
ಆಸ್ತಿN/A
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X