ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕ ಕೆ. ಆರ್. ರಮೇಶ್ ಕುಮಾರ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕರು. ಸಚಿವರಾಗಿ, ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡಿರುವ ಅವರು ನಟರೂ ಹೌದು.
ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕೆ. ಆರ್. ರಮೇಶ್ ಕುಮಾರ್ ಬೆಂಗಳೂರಲ್ಲಿ ಬಿಎಸ್‌ಸಿ ಪದವಿ ವ್ಯಾಸಂಗ ಮಾಡಿದರು. ವಿದ್ಯಾರ್ಥಿಯಾಗಿದ್ದಾಗಲೇ 'ಎಕ್ಸ್ಪೋ-70' ವಿಚಾರದಲ್ಲಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಒಟ್ಟು 5 ಬಾರಿ ಶ್ರೀನಿವಾಸಪುರ ಕ್ಷೇತ್ರದಿಂದ ಕೆ. ಆರ್. ರಮೇಶ್ ಕುಮಾರ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸುಮಾರು 40 ವರ್ಷಗಳ ರಾಜಕೀಯ ಜೀವನದಲ್ಲಿ ಹಲವು ಹುದ್ದೆಗಳನ್ನು ರಮೇಶ್ ಕುಮಾರ್ ನಿರ್ವಹಣೆ ಮಾಡಿದ್ದಾರೆ.
1994 ರಿಂದ 1999ರ ತನಕ ರಮೇಶ್ ಕುಮಾರ್ ಸ್ಪೀಕರ್ ಆಗಿ ಕೆಲಸ ಮಾಡಿದ್ದಾರೆ. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗಲೂ ಅವರು ಸ್ಪೀಕರ್ ಆಗಿದ್ದರು. ವಿಶ್ವಾಸ ಮತದ ಮೇಲಿನ ಚರ್ಚೆ ಸಂದರ್ಭದಲ್ಲಿ ರಮೇಶ್ ಕುಮಾರ್ ಆಡುತ್ತಿದ್ದ ಮಾತುಗಳು ರಾಜ್ಯದ ಜನರ ಗಮನ ಸೆಳೆಯುತ್ತಿದ್ದವು.
2018ರ ಚುನಾವಣೆಯಲ್ಲಿ ಕೆ. ಆರ್. ರಮೇಶ್ ಕುಮಾರ್ 93,571 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ರಾಜಕೀಯ ಹೊರತುಪಡಿಸಿ ರಮೇಶ್ ಕುಮಾರ್ ನಟರೂ ಹೌದು. ಕೆಲವು ಕನ್ನಡ ಧಾರವಾಹಿಗಳಲ್ಲಿ ಅವರು ನಟಿಸುವ ಮೂಲಕ ಜನರ ಮನೆಯನ್ನೂ ತಲುಪಿದ್ದಾರೆ.
| ಪೂರ್ಣ ಹೆಸರು | ಕೆ. ಆರ್. ರಮೇಶ್ ಕುಮಾರ್ |
| ಜನ್ಮ ದಿನಾಂಕ | 22 Nov 1949 (ವಯಸ್ಸು 76) |
| ಹುಟ್ಟಿದ ಸ್ಥಳ | ಅಡಗಲು, ಶ್ರೀನಿವಾಸಪುರ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | B. Sc from Government Arts & Science College Bangalore |
| ಉದ್ಯೋಗ | ಕೃಷಿ, ರಾಜಕಾರಣಿ |
| ತಂದೆಯ ಹೆಸರು | ರಾಮಯ್ಯ |
| ತಾಯಿಯ ಹೆಸರು | Not Known |
| ಅವಲಂಬಿತರ ಹೆಸರು | ವಿಜಯಲಕ್ಷ್ಮೀ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಧರ್ಮ | ಹಿಂದು |
| ಜಾತಿ | ಬ್ರಾಹ್ಮಣ |
| ವೆಬ್‌ಸೈಟ್ | en.m.wikipedia.org/wiki/K._R._Ramesh_Kumar |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.