• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಜಯಪ್ರದಾ

ಜಯಪ್ರದಾ

ಜೀವನ ಚರಿತ್ರೆ

ಭಾರತೀಯ ಚಿತ್ರರಂಗದಲ್ಲಿ ನಟಿಯಾಗಿ ಮಿಂಚಿದ ಜಯಪ್ರದಾ ನಂತರದಲ್ಲಿ ರಾಜಕಾರಣಕ್ಕೆ ಕಾಲಿಟ್ಟರು. ಉತ್ತರಪ್ರದೇಶದದ ರಾಂಪುರ ಕ್ಷೇತ್ರದಿಂದ ಸಮಾಜವಾದಿ ಅಭ್ಯರ್ಥಿಯಾಗಿ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾದರು. ಪ್ರಸ್ತುತ 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡರು. ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯಿಂದ ತಮ್ಮ ರಾಜಕಾರಣ ಆರಂಭಿಸಿದರು. ಆದರೆ ಅಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ಎಸ್ಪಿಗೆ ಸೇರ್ಪಡೆಗೊಂಡರು. ಅಲ್ಲಿಂದ ಹೊರಬಂದು ಸ್ವತಂತ್ರ್ಯ ಪಕ್ಷ ಕಟ್ಟಿ ಹೀನಾಯ ಸೋಲಿನ ಬಳಿಕ ಆರ್.ಎಲ್.ಡಿ.ಗೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡು. ಅಲ್ಲಿಂದ ಮತ್ತ ಬಿಜೆಪಿಗೆ ಸೇರ್ಪಡೆಯಾದರು.
ರಾಜಕಾರಣಕ್ಕೆ ಬರುವ ಮುನ್ನ ನಟಿ, ನಿರ್ಮಾಪಕಿಯಾಗಿ ಹೆಸರು ಗಳಿಸಿದ್ದ ಜಯಪ್ರದಾ ಎರಡು ದಶಕಗಳ ಕಾಲ ಮಿಂಚಿದವರು. ಕನ್ನಡ, ತೆಲುಗು, ತಮಿಳು, ಹಿಂದಿ, ಬಂಗಾಳಿ, ಮಲೆಯಾಳಂ ಮತ್ತು ಮರಾಠಿ ಹೀಗೆ ಬಹು ಭಾಷಾ ತಾರೆಯಾಗಿ ಮೆರೆದ ಇವರು ೨೮೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತಮ್ಮ ಮನೋಜ್ಞ ನಟನೆಗೆ ಹಲವಾರು ಪ್ರಶಸ್ತಿ ಮತ್ತು ಗೌರವಗಳನ್ನೂ ಗಳಿಸಿದ್ದಾರೆ. ೧೯೯೪ರಲ್ಲಿ ಟಿಡಿಪಿಗೆ ಸೇರುವ ಮೂಲಕ ರಾಜಕೀಯ ವೃತ್ತಿ ಜೀವನ ಆರಂಭಿಸಿದರು.

ವಯಕ್ತಿಕ ಜೀವನ

ಪೂರ್ಣ ಹೆಸರು ಜಯಪ್ರದಾ
ಜನ್ಮ ದಿನಾಂಕ 03 Apr 1962 (ವಯಸ್ಸು 60)
ಹುಟ್ಟಿದ ಸ್ಥಳ ರಾಜಮಂಡ್ರಿ (ಅಂಧ್ರಪ್ರದೇಶ)
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ
ಉದ್ಯೋಗ ನಟಿ, ನಿರ್ಮಾಪಕಿ, ಚಿತ್ರ ಹಂಚಿಕೆದಾರರು, ಸಾಮಾಜಿಕ ಕಾರ್ಯಕರ್ತೆ, ರಾಜಕಾರಣಿ
ತಂದೆಯ ಹೆಸರು ಶ್ರೀ ಕೃಷ್ಣಾ
ತಾಯಿಯ ಹೆಸರು ಶ್ರೀಮತಿ ನೀಲವೇಣಿ
ಅವಲಂಬಿತರ ಹೆಸರು ಶ್ರೀಕಾಂತ್ ನಹತಾ
ಅವಲಂಬಿತರ ಉದ್ಯೋಗ ಚಿತ್ರ ನಿರ್ಮಾಪಕ

ವಿಳಾಸ

ಖಾಯಂ ವಿಳಾಸ ಎ- 202, ಜುಹು ಪ್ರಿನ್ಸ್, ಜುಹು ತಾರಾ ರೋಡ, ಜುಹು ಮುಂಬೈ - 400 049, Mಮಹಾರಾಷ್ಟ್ರಾ
ಪ್ರಸ್ತುತ ವಿಳಾಸ 9, ಕನ್ನಿಂಗ್ ಲೇನ್, ನವದೆಹಲಿ - 110 001
ಸಂಪರ್ಕ ಸಂಖ್ಯೆ (011) 23782931
ಈ ಮೇಲ್ jp.nahata@sansad.nic.in

ಆಸಕ್ತಿಕರ ಅಂಶಗಳು

ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಆಜಂ ಖಾನ್ ಅಶ್ಲೀನ ನಡೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಸ್ಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಬೆಂಬಲದೊಂದಿಗೆ 2011ರಲ್ಲಿ ರಾಷ್ಟ್ರೀಯ ಲೋಕ್ ಮಂಚ್ ಹೆಸರಿನ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. 2012ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ 360 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿದರು. ಆದರೆ ಒಂದೇ ಒಂದು ಸ್ಥಾನಗಳಿಸುವಲ್ಲಿಯೂ ಇವರ ಪಕ್ಷ ವಿಫಲವಾಯಿತು.

ಐತಿಹಾಸಿಕ ವಿಷಯವನ್ನೊಳಗೊಂಡ ಚಿತ್ರ ಆಮ್ರಪಾಲಿ ಇವರಿಗೆ ಖ್ಯಾತಿ ತಂದುಕೊಟ್ಟಿತು. ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಅಭ್ಯಾಸದಿಂದ ಇವರು ಜನಮನ ಸೂರೆಗೊಂಡರು. ಆಂದ್ರಪ್ರದೇಶದ ವೆಂಕಟೇಶ್ವರ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದರು. ರಾಜೀವ್ ಗಾಂಧಿ ಪ್ರಶಸ್ತಿ, ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ. 2008ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ, ಕಲಾ ಸರಸ್ವತಿ ಪ್ರಶಸ್ತಿ, ನರ್ಗಿಸ್ ದತ್ ಚಿನ್ನದ ಪದಕ, ಕಿನ್ನೆರಾ ಸಾವಿತ್ರಿ ಪ್ರಶಸ್ತಿ, ಶಕುಂತಲಾ ಕಲಾರತ್ನಂ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಒಟ್ಟು ಆಸ್ತಿN/A
ಆಸ್ತಿN/A
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X