• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಜೈರಾಮ ರಮೇಶ

ಜೈರಾಮ ರಮೇಶ

ಜೀವನ ಚರಿತ್ರೆ

ಜೈರಾಮ ರಮೇಶ ಓರ್ವ ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದು, 1990 ರಲ್ಲಿ ವಿ.ಪಿ. ಸಿಂಗ ಸರಕಾರದಲ್ಲಿ ಹಾಗೂ ಪಿ.ವಿ. ನರಸಿಂಹರಾವ ಆಡಳಿತಾವಧಿಯಲ್ಲಿ ಮನಮೋಹನ್ ಸಿಂಗ್ ಅವರ ಹಣಕಾಸು ಖಾತೆಯಡಿ ಸೇವೆ ಸಲ್ಲಿಸಿದ್ದಾರೆ. 1996-98 ರ ಅವಧಿಯಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಸಲಹಾಗಾರರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಸರಕಾರದ ರಾಜ್ಯ ಹಣಕಾಸು ಆಯೋಗದ ಉಪಾಧ್ಯಕ್ಷರಾಗಿ ಹಾಗೂ ಆಂಧ್ರ ಪ್ರದೇಶದ ಆರ್ಥಿಕ ಸಲಹಾ ಮಂಡಳಿಗಾಗಿ ಸೇವೆ ಸಲ್ಲಿಸಿದ್ದಾರೆ. 2004 ರಲ್ಲಿ ಆಂಧ್ರ ಪ್ರದೇಶದ ಆದಿಲಾಬಾದ್‌ನಿಂದ ರಾಜ್ಯಸಭೆಗೆ ಆಯ್ಕೆಯಾದರು. ಇದಾದ ನಂತರ ಮನಮೋಹನ್ ಸಿಂಗ್ ಕ್ಯಾಬಿನೆಟ್‌ನಲ್ಲಿ ಸಚಿವರಾದರು. 2010 ರಲ್ಲಿ ರಾಜ್ಯಸಭೆಗೆ ಪುನರಾಯ್ಕೆಯಾದ ಇವರು ಕೇಂದ್ರದ ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ಸಚಿವರಾಗಿ ನೇಮಕಗೊಂಡರು. ಪರಿಸರ ಹಾಗೂ ಅರಣ್ಯ ಖಾತೆ ಸಚಿವರಾದ ನಂತರ ಎತ್ತುಗಳನ್ನು ಬಳಸಿ ಆಟದ ಪ್ರದರ್ಶನಗಳಿಗೆ ತಡೆ ಹೇರಿದರು. ಆದರೆ ಅವರ ಈ ಕ್ರಮದಿಂದ 2016 ರಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಟವನ್ನು ನಿಷೇಧಿಸಬೇಕಾಗಿ ಬಂದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಜೈರಾಮ ರಮೇಶ 2015 ರಲ್ಲಿ ಮೂರನೇ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.

ವಯಕ್ತಿಕ ಜೀವನ

ಪೂರ್ಣ ಹೆಸರು ಜೈರಾಮ ರಮೇಶ
ಜನ್ಮ ದಿನಾಂಕ 09 Apr 1954 (ವಯಸ್ಸು 68)
ಹುಟ್ಟಿದ ಸ್ಥಳ ಚಿಕ್ಕಮಗಳೂರು, ಕರ್ನಾಟಕ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ
ಉದ್ಯೋಗ ಅರ್ಥಶಾಸ್ತ್ರಜ್ಞ
ತಂದೆಯ ಹೆಸರು ದಿವಂಗತ ಶ್ರೀ ಸಿ.ಕೆ. ರಮೇಶ
ತಾಯಿಯ ಹೆಸರು ಶ್ರೀಮತಿ ಶ್ರೀದೇವಿ ರಮೇಶ
ಅವಲಂಬಿತರ ಹೆಸರು ಶ್ರೀಮತಿ ಕೆ.ಆರ್. ಜಯಶ್ರೀ
ಅವಲಂಬಿತರ ಉದ್ಯೋಗ ಹೌಸವೈಫ್
ಮಕ್ಕಳು 2 ಪುತ್ರ(ರು)

ವಿಳಾಸ

ಖಾಯಂ ವಿಳಾಸ 6-3-862/3, ಸಾದತ್ ಮಂಜಿಲ್, ಅಪೂರ್ವಾ ಯುನಿಟ್ ನಂ. 4, ಅಮೀರಪೇಟ್, ಖೈರತಾಬಾದ, ಹೈದರಾಬಾದ – 500016
ಪ್ರಸ್ತುತ ವಿಳಾಸ ಸಿ-ಐ/9, ಲೋಧಿ ಗಾರ್ಡನ್, ರಾಜೇಶ ಪೈಲಟ್ ಮಾರ್ಗ, ಹೊಸದಿಲ್ಲಿ
ಸಂಪರ್ಕ ಸಂಖ್ಯೆ 24635888, 24635333,21430813,
ಈ ಮೇಲ್ jairam@sansad.nic.in

ಆಸಕ್ತಿಕರ ಅಂಶಗಳು

ಹೈದರಾಬಾದಿನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದಾರೆ.
ಒಟ್ಟು ಆಸ್ತಿ4.83 CRORE
ಆಸ್ತಿ4.83 CRORE
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.