ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಜೆ. ಸಿ. ಮಾಧುಸ್ವಾಮಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸದ್ಯ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು.
ಜಯಚಾಮರಾಜಪುರ ಚಂದ್ರಶೇಖರಯ್ಯ ಮಾಧುಸ್ವಾಮಿ (ಜೆ. ಸಿ. ಮಾಧುಸ್ವಾಮಿ) ಪೂರ್ಣ ಹೆಸರು. ನಾಲ್ಕು ಬಾರಿ ಶಾಸಕರಾಗಿರುವ ಜೆ. ಸಿ. ಮಾಧುಸ್ವಾಮಿ ಮೂಲತಃ ಕೃಷಿಕರು. 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಅವರು ಸಚಿವರಾದರು, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರೆದಿದ್ದಾರೆ.
ಲಿಂಗಾಯತ (ನೊಳಂಬ) ಸಮುದಾಯದ ನಾಯಕ ಜೆ. ಸಿ. ಮಾಧುಸ್ವಾಮಿ ಕಾನೂನು ಪದವೀಧರರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆ. ಸಿ. ಮಾಧುಸ್ವಾಮಿ ಕಾನೂನು ಕಾಲೇಜಿನಲ್ಲಿ ಸಹಪಾಠಿಗಳು ಎಂಬುದು ಅಚ್ಚರಿಯ ವಿಚಾರವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ನಡೆದ ವಿಶ್ವಾಸಮತದ ಮೇಲಿನ ಚರ್ಚೆಯಲ್ಲಿ ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು ಜೆ. ಸಿ. ಮಾಧುಸ್ವಾಮಿ. ಕರ್ನಾಟಕದ ಹಲವಾರು ಜನರು ಮೊದಲ ಬಾರಿಗೆ ಅವರ ಹೆಸರು ಕೇಳಿದ್ದು ಸಹ ಆಗಲೇ.
ಸದನದಲ್ಲಿ ಪ್ರತಿಪಕ್ಷಗಳಿಗೆ ಜೆ. ಸಿ. ಮಾಧುಸ್ವಾಮಿ ನೀಡುತ್ತಿದ್ದ ತಿರುಗೇಟುಗಳು. ಕಾನೂನು ವಿಚಾರದಲ್ಲಿ ಅವರು ಮಂಡಿಸುತ್ತಿದ್ದ ವಿಚಾರಗಳನ್ನು ನೋಡಿದವರು. ಬಿಜೆಪಿಗೆ ಸದನದಲ್ಲೊಬ್ಬರು ಸರಿಯಾದ ನಾಯಕ ಸಿಕ್ಕರು ಎಂದು ಮಾತನಾಡಿಕೊಳ್ಳಲಾರಂಭಿಸಿದರು.
ಎಚ್. ಡಿ. ಕುಮಾರಸ್ವಾಮಿ ಸರ್ಕಾರ ಪತನಗೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಜೆ. ಸಿ. ಮಾಧುಸ್ವಾಮಿ ಸಚಿವರಾದರು. ಮೊದಲು ಜನತಾಪಕ್ಷದ ಒಟ್ಟಿಗೆ ಗುರುತಿಸಿಕೊಂಡಿದ್ದ ಮಾಧುಸ್ವಾಮಿ ಬಳಿಕ ರಾಮಕೃಷ್ಣ ಹೆಗಡೆ ಜೊತೆ ಇದ್ದರು. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಸಂಪರ್ಕಕ್ಕೆ ಬಂದ ಅವರು ಬಳಿಕ ಬಿಜೆಪಿಗೆ ಬಂದರು.
ಮೈಸೂರಿನಲ್ಲಿ ವ್ಯಾಸಂಗ ಮಾಡುವಾಗ ಲೇಖಕ ಪೂರ್ಣಚಂದ್ರ ತೇಜಸ್ವಿ ಸಂಪರ್ಕಕ್ಕೆ ಬಂದಿದ್ದರು. ಜೆಪಿ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ರಾಜಕೀಯ ಆರಂಭದ ದಿನಗಳಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದರು.
ಮಾಧುಸ್ವಾಮಿ ರಾಜಕೀಯಕ್ಕೆ ಬರುವ ಮೊದಲು ಕೃಷಿಕರು. ಈಗಲೂ ಸ್ವಂತ ಕ್ಷೇತ್ರದಲ್ಲಿ ಇದ್ದರೆ ತೋಟಗಳಿಗೆ ಭೇಟಿ ನೀಡಿದ ಬಳಿಕವೇ ಅವರೇ ದಿನ ಆರಂಭಿಸುತ್ತಾರೆ ಎನ್ನುತ್ತಾರೆ ಬಲ್ಲವರು.
| ಪೂರ್ಣ ಹೆಸರು | ಜೆ. ಸಿ. ಮಾಧುಸ್ವಾಮಿ |
| ಜನ್ಮ ದಿನಾಂಕ | 04 Feb 1953 (ವಯಸ್ಸು 73) |
| ಹುಟ್ಟಿದ ಸ್ಥಳ | ಚಿಕ್ಕನಾಯಕನಹಳ್ಳಿ |
| ಪಕ್ಷದ ಹೆಸರು | Bharatiya Janata Party |
| ವಿದ್ಯಾರ್ಹತೆ | LLB, M.A |
| ಉದ್ಯೋಗ | ರೈತ |
| ತಂದೆಯ ಹೆಸರು | ಚಂದ್ರಶೇಖರಯ್ಯ |
| ತಾಯಿಯ ಹೆಸರು | NA |
| ಅವಲಂಬಿತರ ಹೆಸರು | ತ್ರಿವೇಣಿ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಧರ್ಮ | ಹಿಂದು |
| ಜಾತಿ | ಲಿಂಗಾಯತ (ನೊಳಂಬ) |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.