Get Updates
Get notified of breaking news, exclusive insights, and must-see stories!

ಹಿಮಂತ ಬಿಸ್ವಾ ಶರ್ಮಾ

ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂನ ಗೌಹಾತಿಯ ಜೋರ್ಹತ್‌ನಲ್ಲಿ ಜನಿಸಿದ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ನಾಯಕರಾಗಿ ರಾಜಕೀಯರಂಗ ಪ್ರವೇಶಿಸಿದರು. ಅಸ್ಸಾಂನ ಜಲುಕ್ಬಾರಿ ಕ್ಷೇತ್ರದಿಂದ 2001 ರಿಂದ 2015 ರವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು.
By Rashmi | Monday, August 22, 2022, 09:59:53 AM [IST]

ಹಿಮಂತ ಬಿಸ್ವಾ ಶರ್ಮಾ ಜೀವನ ಚರಿತ್ರೆ

ಅಸ್ಸಾಂನ ಗೌಹಾತಿಯ ಜೋರ್ಹತ್‌ನಲ್ಲಿ ಜನಿಸಿದ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ನಾಯಕರಾಗಿ ರಾಜಕೀಯರಂಗ ಪ್ರವೇಶಿಸಿದರು. ಅಸ್ಸಾಂನ ಜಲುಕ್ಬಾರಿ ಕ್ಷೇತ್ರದಿಂದ 2001 ರಿಂದ 2015 ರವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ನಂತರ ಡಾ.ಶರ್ಮಾ ಅವರು ಕಾಂಗ್ರೆಸ್ ಗೆ ರಾಜೀನಾಮೆ‌ ನೀಡಿ ಆಗಸ್ಟ್ 2015 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 2016 ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ 24 ಮೇ 2016 ರಂದು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೆ, ಬಿಜೆಪಿ ಪಕ್ಷ ಹೊಸದಾಗಿ ರಚಿಸಲಾದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಇಡಿಎ) ಕನ್ವೀನರ್ ಆಗಿ ನೇಮಿಸಿತು. ರಾಜಕೀಯ ಶತ್ರುವಾದ ಕಾಂಗ್ರೆಸ್ ವಿರುದ್ಧ ಹೋರಾಡಲು ವಿಭಿನ್ನ ಪ್ರಾದೇಶಿಕ ಪಕ್ಷಗಳನ್ನು ಮಂಡಳಿಯಲ್ಲಿ ಕರೆತರುವುದು ಇದರ ಮುಖ್ಯ ಕಾರ್ಯವಾಗಿತ್ತು. ಅವರು 2017 ರಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು ಮತ್ತು ಜೂನ್ 2016 ರಲ್ಲಿ ಅಸ್ಸಾಂ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷರೂ ಆದರು. ಇವರ ತಂದೆ ದಿವಂಗತ ಕೈಲಾಶ್ ನಾಥ್ ಶರ್ಮಾ ಅವರು ಅಸ್ಸಾಂನ ಪ್ರಸಿದ್ಧ ಕವಿ ಮತ್ತು ಕಾದಂಬರಿಕಾರರಾಗಿದ್ದರು. ಅವರ ತಾಯಿ ಸ್ಮತಿ ಮೃಣಾಲಿನಿ ದೇವಿ ಅವರು ಅಸ್ಸಾಂ ಸಾಹಿತ್ಯ ಸಭೆಯೊಂದಿಗೆ ಸಕ್ರಿಯ ಸಂಪರ್ಕ ಹೊಂದಿದ್ದರು. ಡಾ.ಶರ್ಮಾ ಅವರು ರಿನಿಕಿ ಭುಯಾನ್ ಶರ್ಮಾ ಅವರನ್ನು ವಿವಾಹವಾದರು. ಈ ದಂಪತಿಗೆ ನಂದಿಲ್ ಎಂಬ ಮಗ ಹಾಗೂ ಸುಕನ್ಯಾ ಎಂಬ ಮಗಳು ಇದ್ದಾರೆ.

ಮತ್ತಷ್ಟು ಓದು

ಹಿಮಂತ ಬಿಸ್ವಾ ಶರ್ಮಾ ವಯಕ್ತಿಕ ಜೀವನ

ಪೂರ್ಣ ಹೆಸರು ಹಿಮಂತ ಬಿಸ್ವಾ ಶರ್ಮಾ
ಜನ್ಮ ದಿನಾಂಕ 01 Feb 1969 (ವಯಸ್ಸು 57)
ಹುಟ್ಟಿದ ಸ್ಥಳ ಜೋರ್ಹತ್
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Doctorate
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಕೈಲಾಶ್ ನಾಥ್ ಶರ್ಮಾ
ತಾಯಿಯ ಹೆಸರು ಮೃಣಾಲಿನಿ ದೇವಿ
ಅವಲಂಬಿತರ ಹೆಸರು Riniki Bhuyan Sarma
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು
ವೆಬ್‌ಸೈಟ್ www.himantabiswasarma.com

ಹಿಮಂತ ಬಿಸ್ವಾ ಶರ್ಮಾ ಒಟ್ಟು ಆಸ್ತಿ

ಒಟ್ಟು ಆಸ್ತಿ
₹13.76 CRORE
ಆಸ್ತಿ
₹17.28 CRORE
ಸಾಲಸೋಲ
₹3.52 CRORE

ಹಿಮಂತ ಬಿಸ್ವಾ ಶರ್ಮಾ ಕುರಿತು ಆಸಕ್ತಿದಾಯಕ ಸಂಗತಿಗಳು

ಹಿಮಂತ ಬಿಸ್ವಾ ಶರ್ಮಾ ಅವರಿಗೆ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಇತ್ತು. 2017 ರಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅವರು ಅಸ್ಸಾಂ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷರೂ ಆಗಿದ್ದಾರೆ. ಜೂನ್ 2016 ರಲ್ಲಿ ಅವರನ್ನು ಅಸ್ಸಾಂ ಕ್ರಿಕೆಟ್ ಸಂಘದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಡಾ. ಶರ್ಮಾ ಅವರು 2002 ರಿಂದ 2016 ರವರೆಗೆ ದೀರ್ಘಕಾಲ ಸೇವೆ ಸಲ್ಲಿಸಿದ ಸಂಘದ ಉಪಾಧ್ಯಕ್ಷರಾಗಿದ್ದರು.

ಹಿಮಂತ ಬಿಸ್ವಾ ಶರ್ಮಾ ರಾಜಕೀಯ ಟೈಮ್‌ಲೈನ್

  • 2016 : ಸತತ ನಾಲ್ಕನೇ ಬಾರಿಗೆ ಜಲುಕ್ಬರಿ ಕ್ಷೇತ್ರದಿಂದ ಗೆದ್ದು ಬಂದರು. 24 ಮೇ 2016 ರಂದು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಹಣಕಾಸು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಯೋಜನೆ ಮತ್ತು ಅಭಿವೃದ್ಧಿ, ಪ್ರವಾಸೋದ್ಯಮ, ಪಿಂಚಣಿ ಮತ್ತು ಸಾರ್ವಜನಿಕ ಕುಂದುಕೊರತೆ ಮುಂತಾದ ಖಾತೆಗಳನ್ನು ನೀಡಲಾಗಿತ್ತು.
  • 2015 : ಕಾಂಗ್ರೆಸ್ ತೊರೆಯಲು ನಿರ್ಧರಿಸಿದರು ಮತ್ತುಆಗಸ್ಟ್ 23 ರಂದು ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದರಿಂದ ಡಾ. ಶರ್ಮಾ ಅವರ ವೃತ್ತಿಜೀವನದಲ್ಲಿ ಈ ವರ್ಷ ಹೊಸ ತಿರುವು ನೀಡಿತು.
  • 2014 : ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳ ನಂತರ ಡಾ.ಶರ್ಮಾ ಅವರು ಜುಲೈ 21, 2014 ರಂದು ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದರು.
  • 2011 : ಮೂರನೇ ಬಾರಿಗೆ ಅಸ್ಸಾಂ ವಿಧಾನಸಭೆಗೆ 75,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾದರು.
  • 2006 : ಅವರು ಮತ್ತೆ ಎರಡನೇ ಬಾರಿಗೆ ಜಲುಕ್ಬರಿಯಿಂದ ಅಸ್ಸಾಂ ವಿಧಾನಸಭೆಗೆ ಆಯ್ಕೆಯಾದರು.
  • 2001 : 2001 ರಲ್ಲಿ, ಹಿಮಂತ ಬಿಸ್ವಾ ಶರ್ಮಾ ಅವರು ಅಸೋಮ್ ಗಣ ಪರಿಷತ್ ನಾಯಕ ಭ್ರೀಗು ಕುಮಾರ್ ಫುಕಾನ್ ಅವರನ್ನು ಸೋಲಿಸಿದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಜಲುಕ್ಬರಿಯಿಂದ ಅಸ್ಸಾಂ ವಿಧಾನಸಭೆಗೆ ಆಯ್ಕೆಯಾದರು.

ಹಿಂದಿನ ಇತಿಹಾಸ

  • 1996-2001: ಅವರು 1996 ರಿಂದ 2001 ರವರೆಗೆ ಗೌಹತಿ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿದ್ದರು.
  • 1991-1992: ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಹಿಮಾಂತ ಬಿಸ್ವಾ ಶರ್ಮಾ ಅವರು ಕಾಟನ್ ಕಾಲೇಜ್ ಯೂನಿಯನ್ ಸೊಸೈಟಿಯ (ಸಿಸಿಯುಎಸ್) ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಹಿಮಂತ ಬಿಸ್ವಾ ಶರ್ಮಾ ಸಾಧನೆಗಳು

ಯೋಜನಾ ಮತ್ತು ಅಭಿವೃದ್ಧಿ ಸಚಿವರಾಗಿದ್ದ ಡಾ.ಶರ್ಮಾ ಅವರ ನಾಯಕತ್ವದಲ್ಲಿ, ಅಸ್ಸಾಂ ಜನರಿಗೆ ವಿವಿಧ ನವೀನ ಕಲ್ಯಾಣ ಯೋಜನೆಗಳನ್ನು ಪರಿಚಯಿಸಲಾಯಿತು. ಆರೋಗ್ಯ ಸಚಿವರಾಗಿ, ಶರ್ಮಾ ಅಸ್ಸಾಂನ ಆರೋಗ್ಯ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಆರೋಗ್ಯ ಪೋರ್ಟ್ಫೋಲಿಯೊ ಅವರ ಕೈಗೆ ಬಂದಾಗ ಜೋರ್ಹಾಟ್, ಬಾರ್ಪೆಟಾ ಮತ್ತು ತೇಜ್ಪುರದ 3 ವೈದ್ಯಕೀಯ ಕಾಲೇಜುಗಳು ಬಂದವು. ಡಿಫು, ನಾಗಾನ್, ಧುಬ್ರಿ, ಉತ್ತರ ಲಖಿಂಪುರ ಮತ್ತು ಕೊಕ್ರಜಾರ್‌ನಲ್ಲಿ ಇನ್ನೂ ಐದು ವೈದ್ಯಕೀಯ ಕಾಲೇಜುಗಳಿಗೆ ಕೆಲಸ ಆರಂಭಿಸಿದರು. ಅದು ಈಗ ವಿವಿಧ ಹಂತಗಳಲ್ಲಿ ಅನುಷ್ಠಾನಗೊಂಡಿದೆ. ಸಂದರ್ಶನ ವ್ಯವಸ್ಥೆಯನ್ನು ರದ್ದುಗೊಳಿಸಿದ ನಂತರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಎಂಬ ಪಾರದರ್ಶಕ ವ್ಯವಸ್ಥೆಯ ಮೂಲಕ ಮೊದಲ ಬಾರಿಗೆ 50,000 ಶಿಕ್ಷಕರನ್ನು ನೇಮಕ ಮಾಡಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಪರಿವರ್ತನೆ ಕಂಡಿತು, ಇದು ನೇಮಕಾತಿಗಳಲ್ಲಿ ಅತಿರೇಕದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿತು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+