Get Updates
Get notified of breaking news, exclusive insights, and must-see stories!

ಹರಸಿಮ್ರತ್ ಕೌರ್ ಬಾದಲ್

ಹರಸಿಮ್ರತ್ ಕೌರ್ ಬಾದಲ್
ಪಂಜಾಬಿನ ಬಠಿಂಡಾ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾಗಿರುವ ಹರಸಿಮ್ರತ್ ಕೌರ್ ಬಾದಲ್ ಕೇಂದ್ರ ಸರಕಾರದ ಆಹಾರ ಸಂಸ್ಕರಣೆ ಖಾತೆಯ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. ಇವರು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷದ ಸದಸ್ಯರಾಗಿದ್ದಾರೆ.
By Zainab Ashraf | Friday, February 1, 2019, 05:56:02 PM [IST]

ಹರಸಿಮ್ರತ್ ಕೌರ್ ಬಾದಲ್ ಜೀವನ ಚರಿತ್ರೆ

ಪಂಜಾಬಿನ ಬಠಿಂಡಾ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾಗಿರುವ ಹರಸಿಮ್ರತ್ ಕೌರ್ ಬಾದಲ್ ಕೇಂದ್ರ ಸರಕಾರದ ಆಹಾರ ಸಂಸ್ಕರಣೆ ಖಾತೆಯ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. ಇವರು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷದ ಸದಸ್ಯರಾಗಿದ್ದಾರೆ. ಹರಸಿಮ್ರತ್ ಕೌರ್ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದಾರೆ. ಇವರ ಪತಿ ಸುಖಬೀರ ಸಿಂಗ್ ಬಾದಲ್ ಶಿರೋಮಣಿ ಅಕಾಲಿ ದಳ ಪಕ್ಷದ ಅಧ್ಯಕ್ಷರು ಹಾಗೂ ಪಂಜಾಬಿನ ಉಪ ಮುಖ್ಯಮಂತ್ರಿಯಾಗಿದ್ದರು. 1966ರ ಜುಲೈ 25 ರಂದು ದೆಹಲಿಯಲ್ಲಿ ಜನಿಸಿದ ಹರಸಿಮ್ರತ್ ಹೊಸದಿಲ್ಲಿಯ ಲೋರೆಟೊ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಮೆಟ್ರಿಕ್ ಪಾಸು ಮಾಡಿರುವ ಇವರು ಟೆಕ್ಸಟೈಲ್ ಡಿಸೈನ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. 1991ರ ನವೆಂಬರ್ 21 ರಂದು ಸುಖಬೀರ ಸಿಂಗ್ ಬಾದಲ್ ಅವರೊಂದಿಗೆ ವಿವಾಹವಾದರು.

ಮತ್ತಷ್ಟು ಓದು

ಹರಸಿಮ್ರತ್ ಕೌರ್ ಬಾದಲ್ ವಯಕ್ತಿಕ ಜೀವನ

ಪೂರ್ಣ ಹೆಸರು ಹರಸಿಮ್ರತ್ ಕೌರ್ ಬಾದಲ್
ಜನ್ಮ ದಿನಾಂಕ 25 Jul 1966 (ವಯಸ್ಸು 59)
ಹುಟ್ಟಿದ ಸ್ಥಳ ದೆಹಲಿ
ಪಕ್ಷದ ಹೆಸರು Shiromani Akali Dal
ವಿದ್ಯಾರ್ಹತೆ 10th Pass
ಉದ್ಯೋಗ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತೆ
ತಂದೆಯ ಹೆಸರು ಶ್ರೀ ಸತ್ಯಜೀತ ಸಿಂಗ್ ಮಜಿಥಿಯಾ
ತಾಯಿಯ ಹೆಸರು ಶ್ರೀಮತಿ ಸುಖಮಂಜೂಸ ಮಜಿಥಿಯಾ
ಅವಲಂಬಿತರ ಹೆಸರು ಶ್ರೀ ಸುಖಬೀರ ಸಿಂಗ್ ಬಾದಲ್
ಅವಲಂಬಿತರ ಉದ್ಯೋಗ ರಾಜಕಾರಣಿ
ಮಕ್ಕಳು 1 ಪುತ್ರ(ರು) 2 ಪುತ್ರಿ(ಯರು)
ಧರ್ಮ ಸಿಖ್

ಹರಸಿಮ್ರತ್ ಕೌರ್ ಬಾದಲ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹144.04 CRORE
ಆಸ್ತಿ
₹198.52 CRORE
ಸಾಲಸೋಲ
₹54.48 CRORE

ಹರಸಿಮ್ರತ್ ಕೌರ್ ಬಾದಲ್ ಕುರಿತು ಆಸಕ್ತಿದಾಯಕ ಸಂಗತಿಗಳು

ಹರಸಿಮ್ರತ್ ಕೌರ್ ಬಾದಲ್ ಕೃಷಿ, ಮಾಧ್ಯಮ ಮತ್ತು ಹೊಟೇಲ್ ಕ್ಷೇತ್ರದಲ್ಲಿ ಬೃಹತ್ ಉದ್ಯಮಗಳ ಒಡೆಯರಾಗಿದ್ದಾರೆ. ಗುರ್ಗಾಂವ್‌ನ ಟ್ರೈಡೆಂಟ್ ಹೊಟೇಲ್‌ನಲ್ಲಿ ತನ್ನದೇ ಆದ ವಜ್ರಾಭರಣ ವ್ಯಾಪಾರವನ್ನೂ ಹೊಂದಿದ್ದಾರೆ. ಇವರೊಬ್ಬ ಟೆಕ್ಸಟೈಲ್ ಡಿಸೈನರ್ ಸಹ ಆಗಿದ್ದಾರೆ.

ಹರಸಿಮ್ರತ್ ಕೌರ್ ಬಾದಲ್ ರಾಜಕೀಯ ಟೈಮ್‌ಲೈನ್

  • 2014: 2014 ರಲ್ಲಿ ಭಟಿಂಡಾ ಕ್ಷೇತ್ರದಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದರು.
  • 2009: 2009ರಲ್ಲಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಹರಸಿಮ್ರತ್ ರಾಜಕೀಯ ಜೀವನ ಆರಂಭಿಸಿದರು. ಭಟಿಂಡಾ ಲೋಕಸಭೆ ಕ್ಷೇತ್ರದಿಂದ 15ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು.
  • 31 ಆಗಸ್ಟ್, 2009: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿಯ ಸದಸ್ಯರಾದರು.
  • 27 ಮೇ, 2014: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಆಹಾರ ಸಂಸ್ಕರಣಾ ಖಾತೆ ಸಚಿವರಾದರು.
  • 6 ಆಗಸ್ಟ್, 2009: ಅಂದಾಜು ಸಮಿತಿಯ ಸದಸ್ಯರಾದರು.
  • 5 ಮೇ 2009: ಅಂದಾಜು ಸಮಿತಿಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸ್ಥಾಯಿ ಸಮಿತಿಯ, ಆಹಾರ ಮತ್ತು ನಾಗರಿಕ ಪೂರೈಕೆ ವ್ಯವಹಾರಗಳ ಸ್ಥಾಯಿ ಸಮಿತಿಗಳ ಸದಸ್ಯರಾದರು.

ಹರಸಿಮ್ರತ್ ಕೌರ್ ಬಾದಲ್ ಸಾಧನೆಗಳು

ಆಹಾರ ಸಂಸ್ಕರಣಾ ಉದ್ಯಮ ಖಾತೆಯ ಸಚಿವರಾಗಿರುವ ಇವರ ಅವಧಿಯಲ್ಲಿ ಉದ್ಯಮವು ಬೃಹತ್ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿದೆ. ಸೆಪ್ಟೆಂಬರ್ 2015 ರಿಂದ ಜೂನ್ 2016 ರವರೆಗೆ 24,084 ಜನರು ಆಹಾರ ಸಂಸ್ಕರಣೆ ಉದ್ಯಮದ ತರಬೇತಿ ಪಡೆದುಕೊಂಡಿದ್ದಾರೆ. ಭಾರತದಲ್ಲಿಯೇ ಬೆಳೆದ ಹಾಗೂ ತಯಾರಿಸಲಾದ ಮಲ್ಟಿ ಬ್ರ್ಯಾಂಡ್ ಸ್ವದೇಶಿ ಆಹಾರ ಉದ್ಯಮ ವಲಯವನ್ನು ಶೇ. 100 ರಷ್ಟು ನೇರ ವಿದೇಶಿ ಬಂಡವಾಳಕ್ಕೆ (ಎಫ್‌ಡಿಐ) ಮುಕ್ತಗೊಳಿಸಿದ್ದು ಇವರ ಪ್ರಮುಖ ಸಾಧನೆಯಾಗಿದೆ. 37 ಮೆಗಾ ಫುಡ್ ಪಾರ್ಕಗಳು (ಜೂನ್ 2016 ಕ್ಕೆ 8 ಕಾರ್ಯಾರಂಭಿಸಿವೆ) ಮತ್ತು 134 ಕೋಲ್ಡ ಚೇನ್‌ಗಳನ್ನು ಜಾರಿಗೊಳಿಸಿ ಆಹಾರ ಸಂಸ್ಕರಣೆ ವಲಯಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+